ವಿಶ್ವದಾದ್ಯಂತ 400 ಕೋಟಿ ಗಳಿಕೆ ; ಕೆಜಿಎಫ್-2 ದಾಖಲೆ ಮುರಿದ ಕಾಂತಾರ!

Bengaluru : ರಿಷಬ್ ಶೆಟ್ಟಿ(Rishab Shetty) ಅಭಿನಯದ ಕಾಂತಾರ(Kantara Beats KGF 2 Record) ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ಗಳಿಸಿದ ಎರಡನೇ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರವು ಈಗ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದ್ದು, ಕೆಜಿಎಫ್ 2 ಅನ್ನು ಹಿಂದಿಕ್ಕಿದೆ.

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ 16 ಕೋಟಿಯ ಸಾಧಾರಣ(Kantara Beats KGF 2 Record) ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, ಇದು 100 ಕೋಟಿಯ ಗಡಿಯನ್ನು ತಲುಪುತ್ತದೆ ಎಂದು ನಿರೀಕ್ಷಿಸಿರಲಿಲ್ಲ.

ಆದರೆ ಇದೀಗ ಚಿತ್ರ ಅದರ ನಾಲ್ಕು ಪಟ್ಟು ಗಳಿಸಿದೆ. ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಕಾಂತಾರ ಗಳಿಕೆ ಬಗ್ಗೆ ಮಾತನಾಡಿ,

https://youtu.be/nz64LK6IYf4

“ಕಾಂತಾರ ಚಿತ್ರವು ಎರಡು ತಿಂಗಳೊಳಗೆ ಜಾಗತಿಕವಾಗಿ 400 ಕೋಟಿಯ ಗಡಿಯನ್ನು ದಾಟಿದೆ” ಎಂದು ಟ್ವೀಟ್(Tweet) ಮಾಡಿ ತಿಳಿಸಿದ್ದಾರೆ.

ಇನ್ನು ತರಣ್ ಅವರು ಟ್ವೀಟ್ನಲ್ಲಿ ಪ್ರದೇಶವಾರು ಚಿತ್ರದ ಗಳಿಕೆಯ ವಿವರವನ್ನೂ ನೀಡಿದ್ದಾರೆ. ಚಿತ್ರವು ಕರ್ನಾಟಕದಲ್ಲಿ 155 ಕೋಟಿ ನಿವ್ವಳ ಗಳಿಕೆಯನ್ನು ದಾಟಿದೆ.

ಇದನ್ನೂ ಓದಿ : https://vijayatimes.com/10k-google-employees/

ಈ ವರ್ಷದ ಆರಂಭದಲ್ಲಿ ಕೆಜಿಎಫ್ 2 ಸ್ಥಾಪಿಸಿದ ದಾಖಲೆಯನ್ನು ಹಿಂದಿಕ್ಕಿದೆ. ಬಿಡುಗಡೆಯಾದ ಎರಡು ವಾರಗಳ ನಂತರ ಕಾಂತಾರ  ಚಿತ್ರದ ಡಬ್ಬಿಂಗ್ ಆವೃತ್ತಿಗಳು ಸಹ ಉತ್ತಮ ಪ್ರದರ್ಶನ ನೀಡಿವೆ.

ಹಿಂದಿ ಆವೃತ್ತಿಯು ಇಲ್ಲಿಯವರೆಗೆ 82 ಕೋಟಿ ನಿವ್ವಳ ಕಲೆಕ್ಷನ್ ಹೊಂದಿದ್ದರೆ, ತೆಲುಗು ಆವೃತ್ತಿ 42 ಕೋಟಿ ಗಳಿಸಿದೆ.

ಕಾಂತಾರವು ಕರಾವಳಿ ಕರ್ನಾಟಕದ ಜಾನಪದ ಮತ್ತು ಸಂಪ್ರದಾಯಗಳಲ್ಲಿ ಬೇರೂರಿರುವ ಒಂದು ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿದೆ. 

ಇದು ಮನುಷ್ಯ, ಪ್ರಕೃತಿ ಮತ್ತು ನೆಲದ ರಾಜಕೀಯದ ಕಥೆಗಳನ್ನು ನಂಬಿಕೆ ಮತ್ತು ಆಚರಣೆಗಳೊಂದಿಗೆ ವಿಲೀನಗೊಳಿಸುತ್ತದೆ.

ಇದನ್ನೂ ಓದಿ : https://vijayatimes.com/rehmat-tarikere-slashing-statement/

ಚಲನಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಪ್ರಶಂಸಿಸಲ್ಪಟ್ಟಿದೆ. ಪ್ರಸ್ತುತ ಐಎಂಡಿಬಿನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರ ಕಾಂತಾರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಕಾಂತಾರ ಪ್ರಸ್ತುತ ವರ್ಷದ ಆರನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರವಾಗಿದೆ.

Exit mobile version