ನೆಟ್ ಫ್ಲಿಕ್ಸ್ ನಲ್ಲಿ ಕಾಂತಾರ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಾಗಲಿದೆ : ರಿಷಬ್ ಶೆಟ್ಟಿ

Sandalwood : ಕನ್ನಡ ಚಿತ್ರರಂಗದ ಅದ್ಭುತ, ಕ್ರಿಯಾತ್ಮಕ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಹೆಸರು ಇದೀಗ ಕಾಂತಾರ (Kantara Hindi on netflix) ಜೊತೆಗೆ ದೇಶ, ವಿದೇಶದಲ್ಲಿ ಜಗಜಾಹಿರಾಗಿದೆ.

ಜಗತ್ತಿನಾದ್ಯಂತ ಕನ್ನಡದ ಕಾಂತಾರ ಸಿನಿಮಾ ಸದ್ದು ಮಾಡುತ್ತಿದ್ದು, ಯಶಸ್ವಿ ಪ್ರದರ್ಶನ ಕಾಣುವ ಜೊತೆ ಜೊತೆಯಲ್ಲಿ ಬಾಕ್ಸ್ ಆಫೀಸ್(box office) ಕಲೆಕ್ಷನ್ ನಲ್ಲಿ ಅತ್ಯುತ್ತಮ ಗಳಿಕೆ ಕಂಡು ಹೊಸ ದಾಖಲೆಯನ್ನು ನಿರ್ಮಿಸಿದೆ.

ಒಂದೆಡೆ ಕಾಂತಾರ ಚಿತ್ರ ಉತ್ತಮ ರೀತಿಯಲ್ಲಿ ಗಳಿಕೆ ಕಂಡು, ಹೆಸರು ಗಳಿಸುತ್ತಿರುವ ಮಧ್ಯೆ ಕಾಂತಾರ ನಿರ್ಮಾಪಕರು,

ನಟ ರಿಷಬ್ ಶೆಟ್ಟಿ ಹೊಂಬಾಳೆ ಫಿಲ್ಮ್ಸ್ ಮೇಲೆ ತಮ್ಮ ನವರಸಂ ಹಾಡಿನ ಹಾಡನ್ನು ಕೃತಿಚೌರ್ಯ(Kantara Hindi on netflix) ಮಾಡಲಾಗಿದೆ ಎಂದು ಆರೋಪಿಸಿ ಕೇರಳ ಮೂಲದ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ನ್ಯಾಯಾಲಯದ ಮೊರೆ ಹೋಗಿತ್ತು.

ಇದನ್ನೂ ಓದಿ : https://vijayatimes.com/rbi-monetary-publication/

ಈ ಒಂದು ಆರೋಪದಿಂದ ಚಿತ್ರತಂಡಕ್ಕೆ ಬಹಳ ಸಮಸ್ಯೆ ಎದುರಾಗಿತ್ತು. ಕೇರಳ ನ್ಯಾಯಾಲಯದಲ್ಲಿ ಮಾಡಿದ ನಿರಂತರ ಹೋರಾಟದ ಬಳಿಕ ಈ ಪ್ರಕರಣದಲ್ಲಿ ಕಾಂತಾರ ನಿರ್ಮಾಪಕರು ಗೆಲುವು ಸಾಧಿಸಿದರು.

ಕಾಂತಾರ ಓಟಿಟಿಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ವೇಳೆ ಕಾಂತಾರ ಚಿತ್ರದ ಅಸಲಿ ವರಾಹ ರೂಪಂ(varaha Rupam) ಹಾಡು ತೆಗೆದು ಹಾಕಲಾಗಿತ್ತು.

ಕೇಸ್ ಗೆದ್ದ ಬಳಿಕ ಅಸಲಿ ವರಾಹ ರೂಪಂ ಹಾಡು ಈಗ ಚಾಲನೆಯಲ್ಲಿದೆ.

ಈ ಬಗ್ಗೆ ಅನೇಕ ವೀಕ್ಷಕರು ಮತ್ತು ರಿಷಬ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದರು.

ಕನ್ನಡ ಮಣ್ಣಿನ ಸೊಗಡು, ಭಾಷೆಯ ಸೊಗಸು, ಕಲೆ, ತುಳುನಾಡ (Tulunadu) ಸಂಸ್ಕೃತಿ ಸೇರಿದಂತೆ ಕೆಲವು ವಿಷಯಗಳನ್ನು ಪ್ರಮುಖವಾಗಿ ಅಧಾರಿಸಿ ಚಿತ್ರಿಸಿದ ಚಿತ್ರವೇ ಕಾಂತಾರ.

https://fb.watch/heUzx59dXd/ ಕನ್ನಡ ಮಾದ್ಯಮಗಳ ಬಗ್ಗೆ ರಿಷಬ್ ಶೆಟ್ಟಿ ಏನ್ ಹೇಳಿದ್ದಾರೆ ?

ಇದೀಗ ಓಟಿಟಿ (OTT) ವೇದಿಕೆಯಲ್ಲಿ ಪ್ರಮುಖ ಭಾಷೆಗಳಲ್ಲಿ ಪ್ರದರ್ಶನವಾಗುತ್ತಿದೆ.

ಇನ್ನು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಕಾಂತಾರ ಸಿನಿಮಾವನ್ನು ನೆಟ್ ಫ್ಲಿಕ್ಸ್ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಟ ರಿಷಬ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಕಾಂತಾರ ಚಿತ್ರವನ್ನು ರಿಷಬ್ ಶೆಟ್ಟಿ ಸಿನಿಪ್ರೇಕ್ಷಕರಿಗೆ ಪರಿಚಯಿಸಿದರು.

ಕಾಂತಾರ ‘ಒಂದು ದಂತಕಥೆ’ ಎಂದು ಸಿನಿಪ್ರೇಕ್ಷಕರು ಇಡೀ ಜಗತ್ತಿಗೆ ಪರಿಚಯಿಸಿದರು ಎಂಬುದು ಕನ್ನಡಿಗರಿಗೆ, ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿ ಎಂದೇ ಹೇಳಬಹುದು.

Exit mobile version