150 ಕೋಟಿ ಕ್ಲಬ್ ಸೇರಿದ ‘ಕಾಂತಾರ’ ; ಹಿಂದಿ ಭಾಷೆಯಲ್ಲೂ ಧೂಳೆಬ್ಬಿಸಿದ ಕನ್ನಡ ಸಿನಿಮಾ!

kannada

Bengaluru : ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ ನಟಿಸಿರುವ ‘ಕಾಂತಾರ’(Kantara) ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ನಿರೀಕ್ಷೆಗೂ ಮೀರಿ ಅದ್ಭುತ (Kantara Hits In Bollywood) ಯಶಸ್ಸು ಗಳಿಸಿರುವ ‘ಕಾಂತಾರ’, ಬಾಕ್ಸ್‌ ಆಫೀಸ್‌ನಲ್ಲೂ ಸಖತ್ ಸದ್ದು ಮಾಡುತ್ತಿದೆ.

ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಚಿತ್ರವನ್ನು, ಕನ್ನಡ ಭಾಷೆಯಲ್ಲಿಯೇ ವೀಕ್ಷಿಸಿದ ಬೇರೆ ರಾಜ್ಯಗಳ ಸಿನಿಪ್ರೇಮಿಗಳು,

ಚಿತ್ರವನ್ನು ತಮ್ಮ ಭಾಷೆಗೂ ಸಹ ಡಬ್ ಮಾಡಿ, ಇಲ್ಲಿಯ ಸಿನಿರಸಿಕರೂ ಒಂದೊಳ್ಳೆ ಚಿತ್ರವನ್ನು ವೀಕ್ಷಿಸಲಿ ಎಂದು ಬೇಡಿಕೆ ಇಟ್ಟಿದ್ದರು.

ಹೀಗೆ ಕಾಂತಾರ ಚಿತ್ರದ ಡಬ್ಬಿಂಗ್ ಕುರಿತು ವ್ಯಾಪಕ ಮನವಿ ಬಂದ ಕಾರಣ ಹೊಂಬಾಳೆ ಫಿಲ್ಮ್ಸ್(Hombale Films) ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಸಹ ಡಬ್ ಮಾಡಿದ್ದು,

ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ(Pan India) ಸಿನಿಮಾವಾಗಿ ಹೊರಹೊಮ್ಮಲು ಕಾರಣವಾಗಿತ್ತು.

ಇದನ್ನೂ ಓದಿ : https://vijayatimes.com/controversial-statement-for-kantara/


ಇನ್ನು, ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳಾದರೂ ಬಾಕ್ಸ್ ಆಫೀಸ್ ಧೂಳೀಪಟ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.

ಬಾಕ್ಸ್ ಆಫೀಸ್ನಲ್ಲಿ ಭಾರಿ ಹಿಟ್ ಆಗಿರೋ ಸಿನಿಮಾ ಗಳಿಕೆ ಸ್ವಲ್ಪವೂ ಕಡಿಮೆಯಾಗಿಲ್ಲ. ಕನ್ನಡ ಆವೃತ್ತಿಯು ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿದಂತೆ, ಇತರ ಆವೃತ್ತಿಗಳೂ ಸಹ ಉತ್ತಮವಾಗಿ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತಿವೆ.

ಇದೀಗ ರಿಷಬ್ ಶೆಟ್ಟಿ ಸಿನಿಮಾ 150 ಕೋಟಿ ಗಡಿ ದಾಟಿದೆ ಎಂದು koimoi ವರದಿ ಮಾಡಿದೆ. 18 ದಿನಗಳ ಥಿಯೇಟ್ರಿಕಲ್ ರನ್‌ ಕೊನೆಯಲ್ಲಿ ಎಲ್ಲಾ ಭಾಷೆ ಸೇರಿ ಕಾಂತಾರ ಭಾರತದಲ್ಲಿ 142.78 ಕೋಟಿ ನಿವ್ವಳ ಲಾಭ ಗಳಿಸಿದೆ.

ವಿದೇಶದಲ್ಲಿ ಈ ಚಿತ್ರವು ಇಲ್ಲಿಯವರೆಗೆ 10.50 ಕೋಟಿ ಗಳಿಸಿದೆ, ಒಟ್ಟಾರೆಯಾಗಿ 153.28 ಕೋಟಿಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಕೇವಲ 20 ಕೋಟಿ ಬಜೆಟ್‌ನಲ್ಲಿ ತಯಾರಾದ ಕಾಂತಾರ (Kantara Hits In Bollywood)ಚಿತ್ರಕ್ಕೆ ಇದೊಂದು ಅಪೂರ್ವ ಸಾಧನೆಯೇ ಸರಿ. ಕೇವಲ ವೀಕೆಂಡ್ ಅಷ್ಟೇ ಅಲ್ಲದೇ, ವೀಕ್ ಡೇಸ್ನಲ್ಲಿಯು ಈ ಟ್ರೆಂಡ್ ಮುಂದುವರಿದಿದ್ದು, ಇನ್ನಷ್ಟು ಕಲೆಕ್ಷನ್ ಆಗುವ ಸಾಧ್ಯತೆಯಿದೆ.

ಒಟ್ಟಾರೆಯಾಗಿ, ದೇಶದಲ್ಲಿ ಬಾಲಿವುಡ್ ಸಿನಿಮಾಗಳು ಎದುರು ಬೇರೆ ಭಾಷೆಯ ಸಿನಿಮಾಗಳು ನಿಲ್ಲುವುದಿಲ್ಲ ಎನ್ನುವ ವಾದಕ್ಕೆ ಸೆಡ್ಡು ಹೊಡೆದು ನಿಂತಿದ್ದು ಕಾಂತಾರ.

https://youtu.be/hU974etRC3E ಮಳೆ ಅವಾಂತರ !

ಕಾಂತಾರದ ನಾಗಲೋಟ ಕಂಡು ಬಾಲಿವುಡ್ ಸ್ಟಾರ್ಗಳು ಬೆಚ್ಚಿ ಬಿದ್ದಿದ್ದಾರೆ, ಏಕೆಂದರೆ ‘ಕಾಂತಾರ’ ಸಿನಿಮಾ ಪ್ರದರ್ಶನಕ್ಕೋಸ್ಕರ ಬಿ-ಟೌನ್ ಸ್ಟಾರ್ ಸಿನಿಮಾಗಳಿಗೆ ಚಿತ್ರಮಂದಿರಗಳ ಮಾಲೀಕರು ಗೇಟ್ ಪಾಸ್ ನೀಡಿದ್ದಾರೆ.

ಕನ್ನಡ ಸಿನಿಮಾಗಳನ್ನು ಅವಹೇಳನ ಮಾಡುತ್ತಿದ್ದ ಬಾಲಿವುಡ್ ಮುಂದೆ, ನಮ್ಮ ಕನ್ನಡದ ಸಿನಿಮಾವೊಂದು ಈ ಮಟ್ಟಿಗೆ ಸದ್ದು ಮಾಡುತ್ತಿರುವುದು ಹೆಮ್ಮೆಯೇ ಸರಿ.

Exit mobile version