Bengaluru : ಕನ್ನಡ ಚಿತ್ರರಂಗದ ಹೆಮ್ಮೆಯ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅಭಿನಯದ ಕಾಂತಾರ (Kantara) ಚಿತ್ರ ಬಿಡುಗಡೆಯಾಗಿ ಸುಮಾರು ಒಂದು ತಿಂಗಳ ನಂತರವೂ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿ ಪುಡಿ ಮಾಡುವಲ್ಲಿ ಯಶಸ್ವಿಯಾಗಿದೆ.

ದೇಶದಲ್ಲಿ ದೀಪಾವಳಿ (Deepavali) ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದರೆ, ಇತ್ತ ರಜೆಗಳ ಮಜಾ ಅವಧಿ ಜನರಿಗೆ ಶುರುವಾಗಿದೆ. ಶನಿವಾರದಿಂದ ಬುಧವಾರದವರೆಗೂ ರಜೆಗಳ ಕೊಂಡಿ ಸಿನಿಪ್ರೇಕ್ಷಕರಿಗೆ ಬಲವಾದರೆ,
ಚಿತ್ರರಂಗಕ್ಕೆ ಹಾಗೂ ಅತಿ ಮುಖ್ಯವಾಗಿ ಕಾಂತಾರ ಚಿತ್ರತಂಡಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂಬುದು ಮತ್ತಷ್ಟು ಬಲವಾಗಿದೆ.
ಕಾರಣ ರಜೆ ದಿನಗಳಲ್ಲಿ ಸಿನಿಪ್ರೇಕ್ಷಕರ ಸಂಖ್ಯೆ ತೀವ್ರ ಕಡಿಮೆ! ಅದರಲ್ಲೂ ಹಬ್ಬದ ಸಮಯ ಸಿನಿಪ್ರೀಯರು ಮನೆಯಲ್ಲಿ ಕಾಲ ಕಳೆಯಲು ಆಶಿಸುತ್ತಾರೆ. ಆದ್ರೆ, ಕಾಂತಾರ ಸಿನಿಮಾಗೆ ಇದ್ಯಾವುದು ಅಡ್ಡಿಯಾಗಿಲ್ಲ ಎಂಬುದೇ ಖುಷಿ ಸಂಗತಿ.
ಹಬ್ಬದ ರಜೆ ದಿನಗಳಲ್ಲಿಯೂ ಸಹ ಸಿನಿಪೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ನುಗ್ಗುತ್ತಿದ್ದಾರೆ.
ಇದನ್ನೂ ಓದಿ : https://vijayatimes.com/indian-soldiers-share-sweets/
ಸದ್ಯ ಈ ಸಂತಸದ ನಡುವೆಯೇ ಕಾಂತಾರ ಚಿತ್ರವೂ ವಿಶ್ವಾದ್ಯಂತ ಒಟ್ಟು ಕಲೆಕ್ಷನ್‌ಗಳ ವಿಚಾರದಲ್ಲಿ 200 ಕೋಟಿ ರೂ. ಗಡಿದಾಟಿ ಮುನ್ನುಗ್ಗುತ್ತಿದೆ.
ಕನ್ನಡದಲ್ಲಿ ಈ ಸಾಧನೆ ಮಾಡಿದ ಮೂರನೇ ಚಿತ್ರ ಕಾಂತಾರವಾಗಿದೆ. ಕರ್ನಾಟಕ (Karnataka) ರಾಜ್ಯದಲ್ಲಿ ಕಾಂತಾರ ಸಾಧನೆಯು ಹೆಚ್ಚು ಪ್ರಭಾವಶಾಲಿಯಾಗಿದೆ,
ಜೊತೆಗೆ ಕೆಜಿಎಫ್ ೧ ಹಾಗೂ ಕೆಜಿಎಫ್ ೨ ಚಿತ್ರಗಳನ್ನು ಹಿಂದಿಕ್ಕಿದೆ. ಟ್ರೇಡ್ ಟ್ರ್ಯಾಕರ್ #Sacnilk ಮಾಹಿತಿ ಪ್ರಕಾರ, ಅಕ್ಟೋಬರ್ 24ರ ವೇಳೆಗೆ, ಕಾಂತಾರ ವಿಶ್ವಾದ್ಯಂತ 211.5 ಕೋಟಿ ರೂ. ಗಳಿಸಿದೆ. ಇದರಲ್ಲಿ ಭಾರತವೊಂದರಿಂದಲೇ 196.95 ಕೋಟಿ ರೂ. ಗಳಿಕೆ ಸೇರಿದೆ.
ಚಿತ್ರದ ಹಿಂದಿ ಡಬ್ಬಿಂಗ್ ಆವೃತ್ತಿಯು ಬಿಡುಗಡೆಯಾದ ಕೇವಲ ಹತ್ತು ದಿನಗಳಲ್ಲಿ 24 ಕೋಟಿ ರೂ. ಮತ್ತು ತೆಲುಗು 23 ಕೋಟಿಗಿಂತ ರೂ.ಗಿಂತ ಕಡಿಮೆ ಗಳಿಸಿದೆ.

ಈ ಅಂಕಿ ಅಂಶದೊಂದಿಗೆ, ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರಗಳ ಪಟ್ಟಿಯಲ್ಲಿ ಇದೀಗ ಕೆಜಿಎಫ್ 2 (1207 ಕೋಟಿ ರೂ.) ಮತ್ತು ಕೆಜಿಎಫ್ 1 (250 ಕೋಟಿ ರೂ.) ಹಿಂದೆ ಇದೆ.
ಗಮನಾರ್ಹ ಸಂಗತಿಯೆಂದರೆ ಕಾಂತಾರ ಇನ್ನೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವುದು ಚಿತ್ರತಂಡಕ್ಕೆ ಪುಷ್ಟಿ.
https://fb.watch/gnqQdm7CLx/ ಕಿತ್ತು ಹೋದ ರಸ್ತೆಗೆ ಪೂಜೆ ಮಾಡಿದ ಕೆ.ಆರ್.ಎಸ್ ಕಾರ್ಯಕರ್ತರು!
ಅಕ್ಟೋಬರ್ 23 ರಂದು ಕಾಂತಾರ ಅದರ 25ನೇ ದಿನಕ್ಕೆ ಕಾಲಿಡಲಿದ್ದು, ಇದು ಭಾರತದಾದ್ಯಂತ ಎಲ್ಲಾ ಭಾಷೆಗಳಲ್ಲಿ 8 ಕೋಟಿ ರೂ.ಗೂ ಹೆಚ್ಚು ನಿವ್ವಳ ಗಳಿಸಿತು.
ಟ್ರೇಡ್ ವಿಶ್ಲೇಷಕರು ಅಂದಾಜಿಸುವಂತೆ ಈ ಚಿತ್ರವು ಕರ್ನಾಟಕದಲ್ಲಿಯೇ ಒಂದು ಕೋಟಿಗೂ ಹೆಚ್ಚು ಜನಸಂದಣಿಯನ್ನು ಕಾಣುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ.
