India : ದೀಪಾವಳಿ ಸಂಭ್ರಮ ಪಟಾಕಿ ಸಿಡಿಸುವ ಮೂಲಕ ಮಾತ್ರವಲ್ಲ, ಸಿಹಿ ಹಂಚಿ, ದೀಪ ಬೆಳಗಿ, ಸಂತಸವನ್ನು ಹಂಚುವ ಹಬ್ಬ ಎಂಬುದನ್ನು ನಮ್ಮ ದೇಶದ ವೀರ ಯೋಧರು (Indian Soldiers Share Sweets) ತೋರಿಸಿಕೊಟ್ಟಿದ್ದಾರೆ.
ಹೌದು, ಈ ಬಗ್ಗೆ ತಮ್ಮ ಪುಟದಲ್ಲಿ ವರದಿ ಮಾಡಿರುವ ಹಿಂದುಸ್ಥಾನ್ ಟೈಮ್ಸ್ (Hindustan Times) ಪತ್ರಿಕೆ,

ದೀಪಾವಳಿ ಹಬ್ಬದ ಹಿನ್ನೆಲೆ ಅಂತಾರಾಷ್ಟ್ರೀಯ ಗಡಿಯಲ್ಲಿ ಸಿಹಿ ಹಂಚಿಕೊಂಡ ಭಾರತ (India) ಮತ್ತು ಪಾಕಿಸ್ತಾನದ (Pakistan) ಸೈನಿಕರು.
ಗಡಿ ಭದ್ರತಾ ಪಡೆ (BSF) ಮತ್ತು ಪಾಕಿಸ್ತಾನ ರೇಂಜರ್ಗಳು ಸೋಮವಾರ ಜಮ್ಮು ಪ್ರದೇಶದ 198 ಕಿಮೀ ಉದ್ದದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆ ಸಿಹಿ ತಿನಿಸುಗಳನ್ನು ಹಂಚಿಕೊಂಡಿದ್ದಾರೆ.
https://fb.watch/gnqQdm7CLx/ ಕಿತ್ತು ಹೋದ ರಸ್ತೆಗೆ ಪೂಜೆ ಮಾಡಿದ ಕೆ.ಆರ್.ಎಸ್ ಕಾರ್ಯಕರ್ತರು!
ಗಡಿ ಭಾಗದಲ್ಲಿ ಒಬ್ಬರಿಗೊಬ್ಬರು ಸಿಹಿ ಹಂಚಿಕೊಳ್ಳುವ ಮೂಲಕ ಹಬ್ಬದ ಸಂತೋಷವನ್ನು (Indian Soldiers Share Sweets) ಹಂಚಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
“ದೀಪಾವಳಿಯ ಸಂದರ್ಭದಲ್ಲಿ, BSF ಮತ್ತು ಪಾಕ್ ರೇಂಜರ್ಗಳು ಜಮ್ಮು ಗಡಿಯಲ್ಲಿರುವ ವಿವಿಧ ಗಡಿ ಹೊರಠಾಣೆಗಳಲ್ಲಿ (BOPs) ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ಸಿಹಿ ಹಂಚಿಕೊಂಡರು ಎಂದು BSF ಅಧಿಕಾರಿಯೊಬ್ಬರು ಈ ರೀತಿ ಶೀರ್ಷಿಕೆ ಕೊಟ್ಟು, ವೀಡಿಯೋ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : https://vijayatimes.com/whats-app-service-down/
BSF ಜಮ್ಮು ಪಾಕಿಸ್ತಾನದ ರೇಂಜರ್ಗಳಿಗೆ ಸಿಹಿ ತಿಂಡಿಗಳನ್ನು ನೀಡಿದ್ದು, ಪರಸ್ಪರ ಸಿಹಿ ಹಂಚಿ, ಹಬ್ಬದ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಸಾಂಬಾ, ಕಥುವಾ, ಆರ್ಎಸ್ ಪುರ ಮತ್ತು ಅಖ್ನೂರ್ ಗಡಿಯಲ್ಲಿನ ಬಿಒಪಿಗಳ ಉದ್ದಕ್ಕೂ ಪ್ರತಿಯೊಬ್ಬರಿಗೂ ಸಿಹಿತಿಂಡಿಗಳನ್ನು ಹಂಚಿದ್ದಾರೆ ಎನ್ನಲಾಗಿದೆ.
ಗಡಿಯಲ್ಲಿ ಶಾಂತಿಯುತ ಮತ್ತು ಸೌಹಾರ್ದಯುತ ವಾತಾವರಣವನ್ನು ನಿರ್ಮಿಸುವಲ್ಲಿ ಬಿಎಸ್ಎಫ್ ಯಾವಾಗಲೂ ಮುಂಚೂಣಿಯಲ್ಲಿದೆ ಎಂದು ಅಧಿಕಾರಿಯೊಬ್ಬರು ಈ ಘಟನೆ ಬಗ್ಗೆ ಸಂತಸದಿಂದ ಮಾಹಿತಿ ಹಂಚಿಕೊಳ್ಳುವ ಮುಖೇನ ಸಂತಸ ವ್ಯಕ್ತಪಡಿಸಿದ್ದಾರೆ.
