ಆಸ್ಕರ್ ಅರ್ಹತೆಯ ಸುತ್ತಿನಲ್ಲಿ 2 ವಿಭಾಗದಲ್ಲಿ ಅರ್ಹತೆ ಪಡೆದುಕೊಂಡ ಕಾಂತಾರ

ಕನ್ನಡದ ʼಕಾಂತಾರʼ(Kanthara) ಚಿತ್ರ 2023ನೇ ಸಾಲಿನ ಅಕಾಡೆಮಿ ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗಿದೆ. ಈ ಮೂಲಕ ಆಸ್ಕರ್‌ ಪ್ರಶಸ್ತಿ(Kantara Oscar qualifying round) ಗೆಲ್ಲುವ ಭರವಸೆಯನ್ನು ಮೂಡಿಸಿದೆ. 

ರಿಷಬ್‌ಶೆಟ್ಟಿ ನಿರ್ದೇಶನದ ಈ ಚಿತ್ರ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ಎರಡು ವಿಭಾಗದಲ್ಲಿ ಅದು ಅರ್ಹತೆ ಪಡೆದಿದೆ.

ಆದರೆ ಈ ಸುತ್ತನ್ನು ದಾಟಿ  ಮುಂದಿನ ಹಂತಕ್ಕೆ ಪ್ರವೇಶ ಪಡೆಯಬೇಕಾದರೆ, ಆಸ್ಕರ್ ಸದಸ್ಯರು ಮತ ಚಲಾಯಿಸುವುದು ಕಡ್ಡಾಯವಾಗಿದೆ.

ಜಗತ್ತಿನಾದ್ಯಂತ ಒಟ್ಟು 301 ಸಿನಿಮಾಗಳು ಅರ್ಹತೆ ಸುತ್ತಿನಲ್ಲಿ ಪಾಸಾಗಿವೆ.

ಇನ್ನು ನಿರ್ದೇಶಕ ರಿಷಬ್ ಶೆಟ್ಟಿ(Kantara Oscar qualifying round)  ಈ ಕುರಿತು ಟ್ವಿಟ್ ಮಾಡಿದ್ದು, “ಕಾಂತಾರ ಸಿನಿಮಾ ಆಸ್ಕರ್ ಅರ್ಹತೆಯ ಸುತ್ತಿನಲ್ಲಿ ಎರಡು ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದೆ.

ಈ ವಿಚಾರ ತಿಳಿಸಲು ಸಂತಸವಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಅಲ್ಲದೇ, ಮುಂದಿನ ಹಂತಕ್ಕೆ ಹೋಗಿದ್ದು ಸಂಭ್ರಮ ತಂದಿದೆ” ಎಂದು ಅವರು ಬರೆದುಕೊಂಡಿದ್ದಾರೆ.

2023ನೇ ಸಾಲಿನ ಆಸ್ಕರ್ ಪ್ರಶಸ್ತಿಯ ಅಂತಿಮ ನಾಮನಿರ್ದೇಶನ ಜನವರಿ 24ರಂದು ಘೋಷಣೆಯಾಗಲಿದೆ. 

9,579 ಅರ್ಹ  ಸದಸ್ಯರು ಜನವರಿ 12  ರಿಂದ ಜನವರಿ 17ರವೆರೆಗೆ ಮತ ಚಲಾವಣೆ ಮಾಡಲಿದ್ದಾರೆ. 

ಇದನ್ನೂ ಓದಿ: https://vijayatimes.com/no-bjp-party-in-kolar/

“ಅವತಾರ್: ದಿ ವೇ ಆಫ್ ವಾಟರ್,” “ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್” ಮತ್ತು “ಟಾಪ್ ಗನ್: ಮೇವರಿಕ್” ಸೇರಿದಂತೆ ವರ್ಷದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳು ಈ ಪಟ್ಟಿಯಲ್ಲಿ ಸೇರಿವೆ,

ಆದರೆ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ “ದಿ ಬನ್ಶೀಸ್ ಆಫ್ ಇನಿಶೆರಿನ್, ” “ಎವೆರಿಥಿಂಗ್ ಎವೆರಿಥಿಂಗ್ ಎವೆರಿಥಿಂಗ್ ಆಲ್ ಅಟ್ ಒಮ್ಸ್” ಮತ್ತು “ಟಾರ್” ಚಿತ್ರಗಳು ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

  ನೆಟ್‌ಫ್ಲಿಕ್ಸ್‌ನ “ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್” ಮತ್ತು “ಗ್ಲಾಸ್ ಆನಿಯನ್”,

ಅಮೆಜಾನ್‌ನ “ಅರ್ಜೆಂಟೀನಾ, 1985” ಮತ್ತು “ಥರ್ಟೀನ್ ಲೈವ್ಸ್” ಮತ್ತು ಆಪಲ್‌ನ “ಚಾ ಚಾ ರಿಯಲ್ ಸ್ಮೂತ್” ಚಿತ್ರಗಳು  ರೇಸ್‌ನಲ್ಲಿವೆ. 

ಇನ್ನು ಎಸ್.ಎಸ್. ರಾಜಮೌಳಿಯವರ(SS Rajamouli) ಆರ್‌ಆರ್‌ಆರ್‌(RRR) ಚಿತ್ರ  ಮತ್ತು  ಪ್ರಶಾಂತ್‌ನೀಲ್‌ ನಿರ್ದೇಶನದ ಕೆಜಿಎಫ್‌(KGF) ಚಿತ್ರಗಳು ಆಸ್ಕರ್‌ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿವೆ.

ಕನ್ನಡದ ಕಾಂತಾರ ಚಿತ್ರ ಆಸ್ಕರ್‌ಪಟ್ಟಿಯಲ್ಲಿ ಕಾಣಿಸಿಕೊಂಡು ಇದೀಗ ಭಾರೀ ನಿರೀಕ್ಷೆ ಮೂಡಿಸಿದೆ.

Exit mobile version