ಪ್ರಮುಖಾಂಶಗಳು :
- ಬ್ಯಾಂಕ್ ಲಾಕರ್ ನಲ್ಲಿ ಚಿನ್ನ (Karnataka Bank Locker Scam) ಇಡುವವರೇ ಎಚ್ಚರ!
- ಬ್ಯಾಂಕ್ ಲಾಕರ್‌ನಲ್ಲಿಡುವ ಚಿನ್ನ ಮಾಯವಾಗಬಹುದು ಜೋಕೆ
- ಕರ್ನಾಟಕ ಬ್ಯಾಂಕ್ನಲ್ಲಿಟ್ಟಿದ್ದ ಅರ್ಧ ಕೆ.ಜಿ ಚಿನ್ನ ಮಾಯ !
- ಚಿನ್ನದ ಬಗ್ಗೆ ನಂಗೊತ್ತಿಲ್ಲ ಅಂತಿದ್ದಾರೆ ಬ್ಯಾಂಕ್ ಅಧಿಕಾರಿಗಳು
Yelahanka, Bengaluru : ನಮ್ಮ ವಿಜಯಟೈಮ್ಸ್ ತಂಡದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಯ್ತು ಬ್ಯಾಂಕ್ ನವರ ಬ್ಯಾಂಕ್ ಲಾಕರ್ ಹಗರಣ !
ಯಲಹಂಕದ ಕರ್ನಾಟಕ ಬ್ಯಾಂಕ್ ಲಾಕರ್ನಲ್ಲಿಟ್ಟಿದ್ದ ಅರ್ಧ ಕೆ.ಜಿ ಚಿನ್ನ ಕಾಣೆ! ನಂಗೊತ್ತಿಲ್ಲ ಅಂತಿದ್ದಾರೆ ಬ್ಯಾಂಕ್ ಮೇಲಾಧಿಕಾರಿಗಳು.
ಯಾಕಂದ್ರೆ ನೀವು ಬಹಳ ವಿಶ್ವಾಸದಿಂದ, ನಂಬಿಕೆಯಿಂದ, ಸೇಫ್ (Karnataka Bank Locker Scam) ಅಂತ ಬ್ಯಾಂಕ್ ಲಾಕರ್‌ನಲ್ಲಿಡೋ ಚಿನ್ನ ಏಕಾಏಕಿ ಮಾಯವಾಗಬಹುದು.
ಇದನ್ನೂ ಓದಿ : https://vijayatimes.com/prasanth-sambargi-statement-on-pathan/
ಅಷ್ಟೇ ಅಲ್ಲ ಚಿನ್ನ ಎಲ್ಲಿ ಅಂತ ಕೇಳಲು ಹೋದ್ರೆ ಬ್ಯಾಂಕ್‌ನವರು ನಮಗೆ ಗೊತ್ತೆ ಇಲ್ಲಾ ಅಂತ ಹೇಳಬಹುದು ಎಚ್ಚರ! ಯಾಕೆ ನಿಮ್ಮನ್ನು ಎಚ್ಚರಿಸುತ್ತಿದ್ದೇವೆ ಅಂದ್ರೆ.
ಇತ್ತೀಚೆಗೆ ಬೆಂಗಳೂರಿನ ಯಲಹಂಕದ ಕರ್ನಾಟಕ ಬ್ಯಾಂಕ್ ಬ್ರಾಂಚ್‌ನಲ್ಲಿ ಗ್ರಾಹಕರೊಬ್ಬರು ಇಟ್ಟಿದ್ದ ಅರ್ಧ ಕೆ.ಜಿ ಚಿನ್ನ ಕಾಣೆಯಾಗಿದೆ! ಈ ಬ್ಯಾಂಕಿನಲ್ಲಿ ಇರುವ ಲಾಕರ್ಗಳಿಗೆ ಇಲ್ಲ ಯಾವುದೇ ಬಿಗಿ ಭದ್ರತೆ!
ಈ ರೀತಿ ಮೋಸ ಹೋದ ಠೇವಣಿದಾರರೊಬ್ಬರು ತಮಗಾದ ಮೋಸವನ್ನು ವಿವರಿಸಿದ್ದಾರೆ :
ಬಿ.ಎನ್ ಕೃಷ್ಣಪ್ಪ, ಚಿನ್ನ ಕಳೆದುಕೊಂಡವರು : ಹೌದು, ಯಲಹಂಕದ ಹಿರಿಯ ದಂಪತಿಗಳಾದ ಬಿ.ಎನ್ ಕೃಷ್ಣಪ್ಪ ಹಾಗೂ ಉಮಾ ಅವರು ವಿದೇಶಕ್ಕೆ ಹೋಗೋ ಮುನ್ನ, ಬ್ಯಾಂಕ್‌ನಲ್ಲಿ ಸೇಫ್ ಆಗಿ ಇರುತ್ತೆ ಅಂತ ಹೇಳಿ,
ತಾವು ಜೀವಮಾನ ಪೂರ್ತಿ ಕಷ್ಟಪಟ್ಟು ದುಡಿದು ಸಂಪಾದಿಸಿದ 580 ಗ್ರಾಂ ಚಿನ್ನವನ್ನು ಕರ್ನಾಟಕ ಬ್ಯಾಂಕ್‌ನ ಲಾಕರ್‌ನಲ್ಲಿಟ್ಟಿದ್ರು.
ಇವರು ಮೂರು ತಿಂಗಳು ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಬಂದು, ಲಾಕರ್‌ನಿಂದ ಚಿನ್ನ ತರಲು ಹೋದಾಗ ಇವರಿಗೆ ಶಾಕ್ ಕಾದಿತ್ತು! ಚಿನ್ನ ಕಣ್ಮರೆಯಾಗಿದ್ದನ್ನು ಕಂಡು ಕಂಗಾಲಾದ ಬಿ ಎನ್ ಕೃಷ್ಣಪ್ಪ ದಂಪತಿ, ಬ್ಯಾಂಕ್ ಮ್ಯಾನೇಜರ್‌ಗೆ ದೂರು ಕೊಟ್ರು.
ಆದ್ರೆ ಬ್ಯಾಂಕ್ ಮ್ಯಾನೇಜರ್ ಇವರಿಗೆ ಸರಿಯಾಗಿ ಸ್ಪಂದನೆಯೇ ಕೊಡಲ್ಲ.
ಚಿನ್ನ ಹುಡುಕಿಕೊಡಿ ಅಂತ ಹೇಳಿದ್ರೆ ಹಾರಿಕೆಯ ಉತ್ತರಕ್ಕೆ ರೋಸಿ ಹೋಗಿ ಪೊಲೀಸರಿಗೆ ದೂರು ಕೊಡಲು ಮುಂದಾದ್ರೆ, ದೂರು ಕೊಡಬೇಡಿ ಅಂತ ಬ್ಯಾಂಕ್ ಮ್ಯಾನೇಜರ್ ತಾಕೀತು ಬೇರೆ ಮಾಡಿದ್ರಂತೆ.
ಆದ್ರೆ ಯಾವಾಗ ಬ್ಯಾಂಕ್ ಮ್ಯಾನೇಜರ್ ಇವರಿಗೆ ಸರಿಯಾಗಿ ಉತ್ತರ ಕೊಡಲ್ವೋ ಆಗ ನೊಂದ ದಂಪತಿ ಯಲಹಂಕ ಪೊಲೀಸ್‌ರಿಗೆ ದೂರು ನೀಡುತ್ತಾರೆ.
ಅದ್ರೆ ದೂರು ದಾಖಲಿಸಲು ಪೊಲೀಸರು ಮೀನಾಮೇಷ ಎಣಿಸುತ್ತಾರೆ. ಇವರ ನಿರಂತರ ಒತ್ತಡದ ಬಳಿಕ ನವೆಂಬರ್‌ನಲ್ಲಿ ನಡೆದ ಘಟನೆಗೆ ಡಿಸೆಂಬರ್ 12ರಂದು ಪೊಲೀಸರು ಎಫ್‌ಐಆರ್ ದಾಖಲಿಸುತ್ತಾರೆ.
ಲಾಕರ್‌ಗೆ ಸುರಕ್ಷತೆಯೇ ಇಲ್ಲ : ಈ ಘಟನೆ ನಡೆದ ಬಳಿಕ ಕರ್ನಾಟಕ ಬ್ಯಾಂಕ್‌ನ ಯಲಹಂಕ ಬ್ರಾಂಚ್‌ನ ಲಾಕರ್ ಸೆಕ್ಷನ್‌ನಲ್ಲಿರುವ ಭದ್ರತಾ ಲೋಪಗಳು ಬಯಲಾಗಿವೆ. ಅದನ್ನು ಕರ್ನಾಟಕ ಬ್ಯಾಂಕ್‌ನ ಮಾಜಿ ಸಿಬ್ಬಂದಿಯೇ ವಿವರಿಸಿದ್ದಾರೆ.
https://fb.watch/hqM7dyTJhi/ GATE CRASH ಪೊಲೀಸರಿಗೆ ರೂಲ್ಸ್ ಇಲ್ವಾ? ಪ್ರಶ್ನಿಸಿದ್ರೆ ಜೀಪು ಹತ್ತಿಸ್ತಾರೆ.
ಬ್ಯಾಂಕ್ ಲಾಕರ್ ಅಂದ್ರೆ ಬಹಳ ಸೂಕ್ಷ್ಮತೆ, ಎಚ್ಚರಿಕೆ ವಹಿಸಿಬೇಕಾದುದು. ಇಲ್ಲಿ ಬೀದಿಯಲ್ಲಿ ಹೋಗೋ ದಾಸ ಕೂಡ ಒಳಗೆ ಬಂದು ಲಾಕರ್ ನಲ್ಲಿರುವ ಹಣ, ಚಿನ್ನಭಾರಣಗಳನ್ನು ಎತ್ತುಕೊಂಡು ಹೋಗುವಷ್ಟು ಬಿಗಿ ಭದ್ರತೆ ಇಲ್ಲಿನ ಸಿಬ್ಬಂದಿ ಒದಗಿಸಿದ್ದಾರೆ.
ಈ ಘಟನೆ ಬಗ್ಗೆ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಪ್ರದೀಪ್ ಅವರನ್ನು ಪ್ರಶ್ನಿಸಿದ್ರೇ, ಉತ್ತರ ಕೊಡದೇ ಕೇವಲ ಕಾಟಾಚಾರದ ಉತ್ತರ ಕೊಡುತ್ತಾರೆ! ಹಿರಿಯ ದಂಪತಿಗಳನ್ನು ಸತಾಯಿಸಿ ಪ್ರಕರಣವನ್ನು ಮುಚ್ಚಿ ಹಾಕೋ ಹುನ್ನಾರವೂ ಎದ್ದು ಕಾಣುತ್ತಿದೆ.
ಕರ್ನಾಟಕ ಬ್ಯಾಂಕ್ ಲಾಕರ್ ಹಗರಣ ವೀಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ : https://fb.watch/hrNNhIGXmH/ ಬ್ಯಾಂಕ್ ಲಾಕರ್ ಚಿನ್ನಮಾಯ! Bank locker fraud!