Bengaluru, ಆಗಸ್ಟ್ 14: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್(Karnataka Congress ticket Conflict) ಪಕ್ಷದ ಐತಿಹಾಸಿಕ ವಿಜಯದ ನಂತರ, ಮುಂಬರುವ
ಲೋಕಸಭೆ ಚುನಾವಣೆಗೆ ಪಕ್ಷವು ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದೆ. ರಾಜ್ಯದಲ್ಲಿ ಸರಿಸುಮಾರು ಇಪ್ಪತ್ತು ಸ್ಥಾನಗಳನ್ನು ಗಳಿಸುವತ್ತ ಪಕ್ಷದ ನಾಯಕರು ದೃಷ್ಟಿ ನೆಟ್ಟಿದ್ದಾರೆ. ಆದರೆ,
ಲೋಕಸಭೆ(Loksabha) ಟಿಕೆಟ್ (Ticket) ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಹೆಚ್ಚಿದೆ. ಪಕ್ಷದ ಮುಖಂಡರು ವಿವಿಧ ಜಿಲ್ಲೆಗಳಲ್ಲಿ ಭಾರೀ ಲಾಬಿ ನಡೆಸುತ್ತಿರುವುದು ತಿಳಿದುಬಂದಿದೆ.

2024ರ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಲು ಇಂದು ಕರ್ನಾಟಕ ಕಾಂಗ್ರೆಸ್ ಸಾಮಾನ್ಯ ಸಭೆಯನ್ನು ಕರೆಯಲಿದೆ. ಟಿಕೆಟ್‌ಗಾಗಿ ಲಾಬಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಪಕ್ಷದ ಟಿಕೆಟ್‌ಗಾಗಿ ಹಲವಾರು ನಾಯಕರು ಪೈಪೋಟಿ ನಡೆಸುತ್ತಿದ್ದಾರೆ. ಈ ಹಿಂದೆ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದ ಮಾಜಿ ಸಚಿವ, ಹಾಲಿ ಎಂಎಲ್ ಸಿ ಎಚ್.ವಿಶ್ವನಾಥ್(C.H Vishwanath) ಮೈಸೂರಿನಿಂದ(Mysore) ಲೋಕಸಭೆ ಟಿಕೆಟ್ ಪಡೆಯುವ ಇಂಗಿತವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ : ಹುಟ್ಟುಹಬ್ಬ ಶುಭಾಶಯ ಬೇಡ : ನನ್ನ ಜನ್ಮದಿನ ನನಗೇ ಸರಿಯಾಗಿ ಗೊತ್ತಿಲ್ಲ, ಆಗಸ್ಟ್ 3 ಮತ್ತು ಆಗಸ್ಟ್ 12 ಎರಡೂ ಕೂಡ ತಪ್ಪು
ಪ್ರಸ್ತುತ, ಈ ವಿಷಯದ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಅದೇನೇ ಇದ್ದರೂ, ನನಗೆ ಸೇವೆ ಮಾಡಲು ಮತ್ತೊಂದು ಅವಕಾಶವನ್ನು ನೀಡಬೇಕೆಂದು ನಾನು ವಿನಮ್ರವಾಗಿ ಕಾಂಗ್ರೆಸ್‌ನಲ್ಲಿ ವಿನಂತಿಸುತ್ತೇನೆ.
ನಾನು ಈ ಹಿಂದೆ ಕಾಂಗ್ರೆಸ್ ಜೊತೆ ಸಂಸದನಾಗಿ ಸ್ಥಾನ ಪಡೆದಿದ್ದೆ. 2009-2014ರವರೆಗೆ ಮೈಸೂರಿನ ಸಂಸದರಾಗಿ ಸೇವೆ ಸಲ್ಲಿಸಿದ ವಿಶ್ವನಾಥ್, ನಾನು ಎರಡನೇ ಅವಕಾಶವನ್ನು ಮುಂದುವರಿಸಲು
ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

ಬೆಂಗಳೂರು ಸೆಂಟ್ರಲ್
ಬೆಂಗಳೂರು ಸೆಂಟ್ರಲ್(Bengaluru Central) ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಮಾಜಿ ಸಚಿವ ಎಚ್‌ಎಂ ರೇವಣ್ಣ(M Revanna) ಅವರು ಬಯಸಿದ್ದಾರೆ. ಬಿಜೆಪಿಯ ಪಿಸಿ ಮೋಹನ್
(PC Mohan) ಪ್ರಸ್ತುತ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.ವಿಧಾನಸಭಾ ಚುನಾವಣೆಯಲ್ಲಿ ರೇವಣ್ಣ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದರೆ ಇದೀಗ ರೇವಣ್ಣ ಅವರು ಲೋಕಸಭಾ
ಚುನಾವಣೆಯಲ್ಲಾದರೂ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ, ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್(Mohammed Nalapad)
ಮತ್ತು ಶಾಂತಿನಗರದ(Shanti Nagar) ಕಾಂಗ್ರೆಸ್ ಶಾಸಕ ಎನ್‌ಎ ಹರೀಸ್ (N A Harees)ಪುತ್ರ ಕೂಡ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಬಳ್ಳಾರಿ
ಬಳ್ಳಾರಿ(Bellari) ಟಿಕೆಟ್ ಅನ್ನು ಕಾಂಗ್ರೆಸ್‌ನ ಮಾಜಿ ಸಂಸದ, ಮತ್ತೋರ್ವ ನಾಯಕ, ವಿಎಸ್ ಉಗ್ರಪ್ಪ(VS Ugrappa) ಅವರು ಬಯಸಿದ್ದಾರೆ ಎನ್ನಲಾಗಿದೆ. ಬಳ್ಳಾರಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಉಗ್ರಪ್ಪ 2018ರಲ್ಲಿ ಗೆದ್ದಿದ್ದರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು.

ಬಾಗಲಕೋಟೆ
ಬಾಗಲಕೋಟೆ(Bagalkote) ಜಿಲ್ಲೆಯಿಂದ ಶಾಸಕ ವಿಜಯಾನಂದ ಕಾಶಪ್ಪನವರ್(Vijayananda Kashappa) ಅವರ ಪತ್ನಿ ವೀಣಾ ಕಾಶಪ್ಪನವರ್(Veena Kashappa) ಅವರು ಲೋಕಸಭೆಗೆ
ಲಾಬಿ ನಡೆಸುತ್ತಿದ್ದಾರೆ.2019 ರ ಚುನಾವಣೆಯಲ್ಲಿ ಕ್ಷೇತ್ರದಿಂದ 4 ಬಾರಿ ಸಂಸದರಾಗಿರುವ ಬಿಜೆಪಿಯ ಪಿಸಿ ಗದ್ದಿಗೌಡರ(PC Gaddi gowda) ವಿರುದ್ಧ ಸ್ಪರ್ಧಿಸಿ ಸೋತಿದ್ದರು.
ಇದನ್ನೂ ಓದಿ : ಕೊಟ್ಟ ಮಾತಿನಂತೆ ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ : ಸಿಎಂ ಸಿದ್ದರಾಮಯ್ಯ
ಚಾಮರಾಜನಗರ
ಚಾಮರಾಜನಗರ(Chammaraja nagar) ಲೋಕಸಭೆ ಟಿಕೆಟ್ ಮೇಲೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ(H C Mahadevappa) ಅವರ ಪುತ್ರ ಸುನೀಲ್ ಬೋಸ್
(Sunil Bhos) ಕಣ್ಣಿಟ್ಟಿದ್ದಾರೆ. ಬಿಜೆಪಿಯು ಜಿಲ್ಲೆಯ 8 ವಿಧಾನಸಭಾ ಸ್ಥಾನಗಳ ಪೈಕಿ ಖಾತೆ ತೆರೆಯಲು ವಿಫಲವಾಗಿದ್ದು, ಜೆಡಿಎಸ್(JDS) ಒಂದು ಸ್ಥಾನವನ್ನು ಹೊಂದಿದೆ. ಸುನೀಲ್ ಬೋಸ್ ನಂಜನಗೂಡು(Nanjanagudu) ವಿಧಾನಸಭಾ ಕ್ಷೇತ್ರಕ್ಕೆ ಲಾಬಿ ನಡೆಸಿದ್ದರು. ಆದರೆ, ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಕಾಂಗ್ರೆಸ್ ಮುಖಂಡ ಆಗಿದ್ದ ದಿವಂಗತ ಧ್ರುವನಾರಾಯಣ(Dhruva narayana)
ಅವರ ಪುತ್ರ ಆಗಿರುವ ದರ್ಶನ್(Darshan) ಅವರಿಗೆ ಟಿಕೆಟ್ ನೀಡಲಾಗಿತ್ತು. ದರ್ಶನ್ ಅವರು ಜಯ ಗಳಿಸಿದರು.

ಚಿಕ್ಕಬಳ್ಳಾಪುರ
ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಕ್ಷಾ ರಾಮಯ್ಯ(Raksha ramaiah) ಚಿಕ್ಕಬಳ್ಳಾಪುರ(Chikkaballapura) ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ (Veerappa Moyli) ಸಹ ಅದೇ ಕ್ಷೇತ್ರದಿಂದ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ರಶ್ಮಿತಾ ಅನೀಶ್