ಕರ್ನಾಟಕ ಇಂಧನ ಇಲಾಖೆಯಿಂದ ನೇಮಕ ಅಧಿಸೂಚನೆ ಬಿಡುಗಡೆ: ಅರ್ಜಿ ಆಹ್ವಾನ

ರಾಜ್ಯ ಸರ್ಕಾರದ ಇಂಧನ ಇಲಾಖೆಯು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸದಸ್ಯರ (ಕಾನೂನು) ಹುದ್ದೆಗೆ ನೇಮಕಾತಿಗಾಗಿ (Karnataka Energy dept Recruitment) ಅಧಿಸೂಚನೆ ಬಿಡುಗಡೆ

ಮಾಡಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು (Karnataka Energy dept Recruitment) ಆಹ್ವಾನಿಸಲಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತಾ ಮಾನದಂಡಗಳು, ಅರ್ಜಿ ನಮೂನೆ-1 ಹಾಗೂ ಇತರೆ ಮಾಹಿತಿಗಳನ್ನು ಇಂಧನ ಇಲಾಖೆಯ ವೆಬ್‌ಸೈಟ್‌ ಗೆ ಭೇಟಿ ನೀಡಿ ತಿಳಿಯಬಹುದು.

ಅರ್ಹತೆಗಳು
೧. ಕಾನೂನು ವಿಷಯದಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸುವವರು ಪರಿಪೂರ್ಣ ಜ್ಞಾನ, ನಿಷ್ಠೆ ಮತ್ತು ಅನುಭವವುಳ್ಳವರಾಗಿರಬೇಕು.
೨. ನ್ಯಾಯಾಂಗದ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಮತ್ತು ಸಲ್ಲಿಸಿರುವವರಾಗಿರಬೇಕಾಗಿದ್ದು ಅಥವಾ ಅರ್ಜಿದಾರರು ಕಾನೂನು ವಿಷಯದಲ್ಲಿ ವಿದ್ಯಾರ್ಹತೆ ಉಳ್ಳವರಾಗಿ, ವಕೀಲ ವೃತ್ತಿಯಲ್ಲಿ ಹೆಚ್ಚಿನ ಅನುಭವವುಳ್ಳವರಾಗಿ, ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಅಥವಾ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಾತಿಗೆ ಅರ್ಹತೆ ಹೊಂದಿರಬೇಕು.
೩. ಕನ್ನಡ ವ್ಯವಹಾರ ಜ್ಞಾನವುಳ್ಳವರಾದ್ದು, ಭಾರತದ ಪ್ರಜೆಯಾಗಿರಬೇಕು
೪. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸದಸ್ಯರು ಕರ್ತವ್ಯ ನಿರ್ವಹಣೆಗೆ ಅಡಚಣೆ ಉಂಟಾಗುವಂತಹ ಯಾವುದೇ ಆರ್ಥಿಕ ಅಥವಾ ಇನ್ನಿತರೆ ಹಿತಾಸಕ್ತಿ ಹೊಂದಿದಲ್ಲಿ ಅಂತಹ ಅಭ್ಯರ್ಥಿಯು ಅರ್ಹರಾಗಿರುವುದಿಲ್ಲ.

ಬೇಕಾಗಿರುವ ದಾಖಲೆಗಳು
೧. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
೨. ಪದವಿ ಅಂಕಪಟ್ಟಿ
೩. ಆಧಾರ್ ಕಾರ್ಡ್
೪ . ಕಾರ್ಯಾನುಭವ ದಾಖಲೆ
೫. ಹುದ್ದೆಯ ಅರ್ಹತೆಗಳಿಗೆ ಸಂಬಂಧಿತ ಇತರೆ ದಾಖಲೆಗಳು

ಅರ್ಜಿಗಳನ್ನು ದಿನಾಂಕ 11-12-2023 ರ ಸಂಜೆ 05-30 ರೊಳಗಾಗಿ ಭೌತಿಕವಾಗಿ ಅಥವಾ ಸ್ಕ್ಯಾನ್ಡ್‌ ದಾಖಲೆಗಳನ್ನು ಅರ್ಜಿಯೊಂದಿಗೆ ಇ-ಮೇಲ್‌ ಮೂಲಕ ಸಲ್ಲಿಸಬಹುದು.

ಭೌತಿಕವಾಗಿ ಅರ್ಜಿ ಸಲ್ಲಿಸಲು ವಿಳಾಸ – ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ಕೊಠಡಿ ಸಂಖ್ಯೆ 236, 2ನೇ ಮಹಡಿ, ವಿಕಾಸ ಸೌಧ, ಡಾ ಬಿ.ಆರ್.ಅಂಬೇಡ್ಕರ್ ವೀದಿ, ಬೆಂಗಳೂರು – 560001 ಇವರಿಗೆ ಸಲ್ಲಿಸುವುದು.

ಹುದ್ದೆಗಳ ಕುರಿತ ಇನ್ನಷ್ಟು ಮಾಹಿತಿಗಳಿಗಾಗಿ ಕೆಳಗಿನ ಅಧಿಸೂಚನೆ ಲಿಂಕ್ ಕ್ಲಿಕ್ ಮಾಡಿ.


ಇಂಧನ ಇಲಾಖೆಯ ಅಧಿಕೃತ ವೆಬ್‌ಸೈಟ್‌ ವಿಳಾಸ : https://energy.karnataka.gov.in https://energy.karnataka.gov.in/storage/pdf-files/KannadaNotification.pdf

ಇ-ಮೇಲ್ ವಿಳಾಸ : prs.energy@gmail.com

ಇದನ್ನು ಓದಿ : ಬೆಂಗಳೂರಿನಲ್ಲಿ ಪ್ಯಾಲೆಸ್ತೀನ್​​ಗೆ ಬೆಂಬಲಿಸಿ ಮೌನಯಾತ್ರೆ ಮಾಡಿದ್ದವರ ವಿರುದ್ಧ ಎಫ್​ಐಆರ್

Exit mobile version