ಕರ್ನಾಟಕದ ಸರಕಾರದ ಆರೋಗ್ಯ ಇಲಾಖೆಯ ಕರ್ಮಕಾಂಡ ಬಯಲು! ಸರಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಖಾಸಗಿ ಆಸ್ಪತ್ರೆಗೆ ನೇಮಿಸಿದ ಒಳ ಮರ್ಮ ಏನು.?

ಸರ್ಕಾರದ ಆರೋಗ್ಯ ಇಲಾಖೆ ದ.ಕನ್ನಡದಲ್ಲಿ ಹೊರಡಿಸಿರುವ ಸುತ್ತೋಲೆಯೊಂದು ಈಗ ಭಾರೀ ವಿವಾದ ಸೃಷ್ಟಿಸಿದೆ. ಸಮುದಾಯ ಆರೋಗ್ಯ ಕೇಂದ್ರದ (Karnataka governament scam )ಆರೋಗ್ಯ ಮಿತ್ರರನ್ನು ಖಾಸಗಿ ಆಸ್ಪತ್ರೆಗೆ ನಿಯೋಜಿಸುವ ಆದೇಶವನ್ನು ಹೊರಡಿಸಿದೆ. ಇದು ಸಾರ್ವಜನಿಕರಲ್ಲಿ ನಾನಾ ಅನುಮಾನ ಮೂಡಿಸಿದೆ.


ಬಡವರ ಪಾಲಿನ ರಕ್ಷಕನಂತಿರುವ ಸರ್ಕಾರಿ ಆಸ್ಪತ್ರೆಗಳನ್ನು ಇನ್ನಷ್ಟು ಬಲಪಡಿಸುವ ಬದಲು ತನ್ನ ಅರೋಗ್ಯ ಮಿತ್ರರನ್ನು ಖಾಸಗಿ ಆಸ್ಪತ್ರೆಗಳಿಗೆ ನಿಯೋಜಿಸಿರುವ ಹಿಂದಿನ ಉದ್ದೇಶ ಏನು?

ಖಾಸಗಿಯವರಿಗೆ ಅನುಕೂಲ ಮಾಡಿ ಕೊಡಲು ಹುನ್ನಾರವೇ? ರಾಜ್ಯದ ಬಡ ರೋಗಿಗಳೂ ಕೂಡ ಖಾಸಗಿ ಆಸ್ಪತ್ರೆಗಳಲ್ಲಿ ಹಣಕೊಟ್ಟು ಚಿಕಿತ್ಸೆ ಪಡೆಯಲಿ ಅನ್ನೋ ದುರಾಲೋಚನೆಯೇ ಇಂಥಾ ಹತ್ತು ಹಲವು ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿದೆ.

ಈ ವಿವಾದಿತ ಸುತ್ತೋಲೆ ಜನಸಾಮಾನ್ಯರಲ್ಲಿ ಮೂಡಿಸಿರುವ ವಿವಿಧ ಪ್ರಶ್ನೆಗಳು ಇಂತಿವೆ.

ಸರಕಾರಿ ಆಸ್ಪತ್ರೆಯ ಆರೋಗ್ಯ ಮಿತ್ರರನ್ನು ಖಾಸಗಿ ಆಸ್ಪತ್ರೆಗೆ ನೇಮಿಸಿದ ಒಳ ಮರ್ಮ ಏನು?

ಸರ್ಕಾರಿ ಸಮುದಾಯ (Karnataka governament scam) ಆರೋಗ್ಯ ಕೇಂದ್ರದ ರೋಗಿಗಳಿಗೆ ಆರೋಗ್ಯ ಮಿತ್ರ ಸೇವೆಯನ್ನು ಒದಗಿಸುವರು ಯಾರು.?

ದಕ್ಷಿಣ ಕನ್ನಡದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅತಿ ಹೆಚ್ಚು ಸಾರ್ವಜನಿಕರು,ರೋಗಿಗಳು ಸೇವೆಯನ್ನು ಪಡೆಯುತ್ತಿದ್ದಾರೆ. ಈ ಸೇವೆಯಿಂದ ಸರಕಾರಿ ಸಮುದಾಯ ಕೇಂದ್ರಗಳಿಗೆ ತುಂಬಾನೇ ಲಾಭ ಆಗುತ್ತಿತ್ತು.

https://youtu.be/RDiyJL0Ae94

ರೋಗಿಗಳಿಗೆ ಸಮರ್ಪಕವಾದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಸೇವೆಯು ಸಮರ್ಪಕವಾಗಿ ಸಿಗುತ್ತಿತ್ತು. ಇನ್ಮುಂದೆ ಇದಕ್ಕೆ ಕತ್ತರಿ ಬೀಳಲ್ವಾ?

ಸರ್ಕಾರದ ಆದೇಶದಿಂದ ಆರೋಗ್ಯ ಮಿತ್ರ ಮಾಹಿತಿ ಹಾಗೂ ಸೇವೆಯು ಸಮರ್ಪಕವಾಗಿ ಸಿಗಲು ಕಷ್ಟವಾಗುತ್ತೆ. ಈ ಸೇವೆಗೆ ಸಮರ್ಪಕವಾಗಿ ಸಿಗದೇ ರೋಗಿಗಳು ಖಾಸಗಿ ಆಸ್ಪತ್ರೆ ಹತ್ರ ಮುಖ ಮಾಡಲಿ ಅನ್ನೋ ಹುನ್ನಾರವೇ?

ಸರಕಾರಿ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಲ್ಲಿ ರೋಗಿಗಳಿಗೆ ಪೂರ್ಣ ಪ್ರಮಾಣದ ಆರೋಗ್ಯ ಸೇವೆಯು ಸರಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿವೆ.

ಆದ್ರೆ ಸರ್ಕಾರದ ಎಲ್ಲಾ ಸಮುದಾಯದ ಆರೋಗ್ಯ ಕೇಂದ್ರದ ಅರೋಗ್ಯ ಮಿತ್ರರ ಈ ವರ್ಗಾವಣೆಯಿಂದ ಬಡವರು ಅಮಾಯಕ ರೋಗಿಗಳು ಸಂಕಷ್ಟವನ್ನು ಎದುರಿಸಬೇಕಲ್ವೇ? ಇದಕ್ಕೆ ಹೊಣೆ ಯಾರು?


ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ಸಮರ್ಪಕವಾದ ಮಾಹಿತಿ ಸಿಗದೇ ದುರಂತದ ನಡೆಯುವುದು ಬಹುತೇಕ ಖಚಿತ ಅಲ್ಲವೇ?

ಸರ್ಕಾರಿ ಆಸ್ಪತ್ರೆಗಳೂ ಉತ್ತಮ ಜನಸೇವೆ ಮಾಡಿ, ಜನಮನ್ನಣೆ ಗಳಿಸಿವೆ. ಇದಕ್ಕೆ ವಾಮದಪದವು ಸಮುದಾಯದ ಅರೋಗ್ಯ ಕೇಂದ್ರ ಆಸ್ಪತ್ರೆಯು ಕೋವಿಡ್ ಆಸ್ಪತ್ರೆ ಆಗಿರುವುದೇ ಸಾಕ್ಷಿ. ಆದ್ರೆ ಇಂಥಾ ಆಸ್ಪತ್ರೆಗಳನ್ನು ಸರ್ಕಾರವೇ ಕೊಲ್ಲಲು ಹೊರಟಿದೆಯೇ?

ಸರಕಾರಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಸೇವೆಯು BPL ರೇಷನ್ ಕಾರ್ಡುದಾರರಿಗೆ ಸಂಪೂರ್ಣ ಉಚಿತ ಹಾಗೂ APL ರೇಷನ್ ಕಾರ್ಡ್ ದಾರರಿಗೆ 70% ಉಚಿತವಾಗಿ ಇರುತ್ತದೆ.

ಆದ್ರೆ ಇಂಥಾ ಸೇವೆಗಳಿಗೆ ಸರ್ಕಾರವೇ ಅಡ್ಡಿಯುಂಟು ಮಾಡಿದಂತಲ್ಲವೇ?
ಈ ರೀತಿ ಸಾರ್ವಜನಿಕರು ಆರೋಗ್ಯ ಸಚಿವರಲ್ಲಿ ಹತ್ತು ಹಲವು ಪ್ರಶ್ನೆಗಳನ್ನು ಮೂಡಿಸಿದೆ.

ಈ ಪ್ರಶ್ನೆಗಳಿಗೆ ಆರೋಗ್ಯ ಸಚಿವರು ಉತ್ತರ ಕೊಡಬೇಕು. ಹಾಗೂ ಇಂಥಾ ವಿವಾದಿತ ಸುತ್ತೋಲೆಯನ್ನು ಹಿಂದಕ್ಕೆ ಪಡೀಬೇಕು ಅನ್ನೋದು ಸಾರ್ವಜನಿಕರ ಒತ್ತಾಯ.

Exit mobile version