ಪಂಡಿತರ ಆಸ್ತಿಪಾಸ್ತಿಗಳನ್ನು ಇತರರಿಗೆ ನೀಡಿದ್ದ ‘ರೋಶನಿ ಕಾಯ್ದೆ’ ರದ್ದು!

kashmiri pandiths

1990ರಲ್ಲಿ ಕಣಿವೆ ರಾಜ್ಯ ಕಾಶ್ಮೀರದಲ್ಲಿ(Kashmir) ಅಲ್ಲಿಯ ಮೂಲ ನಿವಾಸಿಗಳಾದ ಕಾಶ್ಮೀರಿ ಪಂಡಿತರ(Kashmiri Pandits) ಮೇಲೆ ಮತಾಂಧರು ನಡೆಸಿದ ಹತ್ಯಾಕಾಂಡ(Brutality) ನಡೆದು 32 ವರ್ಷಗಳಾದ ನಂತರ ಕಾಶ್ಮೀರ ತೊರೆದು ಹೋಗಿದ್ದ ಪಂಡಿತರ ಆಸ್ತಿಪಾಸ್ತಿಗಳನ್ನು(Property) ಮರಳಿ ಅವರಿಗೆ ನೀಡುವ ಕಾರ್ಯವನ್ನು ಕೇಂದ್ರ ಸರ್ಕಾರ(Central Government) ಪ್ರಾರಂಭಿಸಿದೆ. 1990ರ ದಶಕದಲ್ಲಿ ಪಂಡಿತರ ಮೇಲೆ ನಿರಂತರವಾಗಿ ನಡೆದ ದೌರ್ಜನ್ಯದ ಪರಿಣಾಮ ಲಕ್ಷಾಂತರ ಪಂಡಿತರು ಕುಟುಂಬಗಳೊಂದಿಗೆ ತಮ್ಮ ಆಸ್ತಿಪಾಸ್ತಿಗಳನ್ನು ಅಲ್ಲಿಯೇ ಬಿಟ್ಟು ಕಾಶ್ಮೀರ ಬಿಟ್ಟು ಓಡಿ ಹೋದರು.

ನಂತರ ಕಾಶ್ಮೀರದಾದ್ಯಂತ ಪಂಡಿತರ ಮನೆ, ಅಂಗಡಿ ಮತ್ತು ಜಮೀನುಗಳು ವಾರಸುದಾರರಿಲ್ಲದೇ ಖಾಲಿ ಬಿದ್ದವು. ಅವುಗಳಿಂದ ಸರ್ಕಾರಕ್ಕೆ ಬರಬೇಕಾದ ತೆರಿಗೆ ಬರಲಿಲ್ಲ. 2001ರಲ್ಲಿ ಅಂದಿನ ಫಾರುಖ್ ಅಬ್ದುಲ್ಲಾ ನೇತೃತ್ವದ ಜಮ್ಮುಕಾಶ್ಮೀರ್ ಸರ್ಕಾರ ಪಂಡಿತರ ಆಸ್ತಿಪಾಸ್ತಿಗಳನ್ನು ಕೇವಲ 101 ರೂಪಾಯಿಗಳಿಗೆ‌ ರೋಶನಿ ಕಾಯ್ದೆಯಡಿ ಮುಸ್ಲಿಮರಿಗೆ ನೀಡಿತು. ಹೀಗೆ ಕಾಶ್ಮೀರದಲ್ಲಿದ್ದ ಪಂಡಿತರ ಆಸ್ತಿಪಾಸ್ತಿಗಳನ್ನು ಹಂಚಲು ಮಾಡಿದ ಕಾನೂನು “ರೋಶನಿ ಕಾಯ್ದೆ”. ಆದರೆ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ನವೆಂಬರ್ 1 2020ರಂದು ರದ್ದು ಮಾಡಿದ್ದು, ಆಸ್ತಿಪಾಸ್ತಿಗಳನ್ನು ತನ್ನ ಸುಪರ್ದಿಗೆ ಪಡೆಯಲು ಇದೀಗ ಅಧಿಕೃತ ಆದೇಶ ಹೊರಡಿಸಿದೆ.

ಮುಂದಿನ ದಿನಗಳಲ್ಲಿ ಅವುಗಳನ್ನು ಮತ್ತೆ ಪಂಡಿತರ ಕುಟುಂಬಗಳಿಗೆ ಮರಳಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇನ್ನು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿದ್ದು, ಅಲ್ಲಿ ಭೂ ಕಾನೂನುಗಳನ್ನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಇದೇ ಅಧಿಕಾರವನ್ನು ಬಳಸಿಕೊಂಡು ಕೇಂದ್ರ ಸರ್ಕಾರ ರೋಶನಿ ಕಾಯ್ದೆಯನ್ನು ರದ್ದು ಮಾಡಿದೆ. ಅದೇ ರೀತಿ ಕಾಶ್ಮೀರಿ ಪಂಡಿತರನ್ನು ಮರಳಿ ಕಣಿವೆ ರಾಜ್ಯಕ್ಕೆ ತರಲು ಕೇಂದ್ರ ಸರ್ಕಾರ ಕೆಲ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಅವರಿಗೆ ಸೂಕ್ತ ಭದ್ರತೆ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ಈ ಕುರಿತು ಭದ್ರತಾ ಪಡೆಗಳೊಂದಿಗೆ ಮಾತುಕತೆಯನ್ನು ನಡೆಸಲಾಗುತ್ತಿದೆ.

Exit mobile version