ವಿಕ್ಕಿ – ಕತ್ರಿನಾ ಸೀಕ್ರೆಟ್ ಮದುವೆ

ನವದೆಹಲಿ ನ 25 ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಮದುವೆ ಹಬ್ಬ ನಡೆಯುತ್ತಿದೆ. ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ಮದುವೆಯ ನಂತರ ಇದೀಗ ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif)  ಮದುವೆಯದ್ದೇ ಮಾತು. ಇಬ್ಬರೂ ಜೈಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. ಆದರೆ, ಜೈ ಪುರದಲ್ಲಿ ನಡೆಯುವ ಆದ್ದುರಿ ಸಮಾರಂಭಕ್ಕೂ ಮುನ್ನ ವಿಕ್ಕಿ ಮತ್ತು ಕತ್ರಿನಾ ದಂಪತಿಯಾಗಲಿದ್ದಾರೆ ಎನ್ನುವುದು ಹೊಸ ವಿಷಯ. ಅಂದರೆ ಇಬ್ಬರೂ ರಾಜಸ್ಥಾನಕ್ಕೆ ಹೋಗುವ ಮೊದಲೇ ರಹಸ್ಯವಾಗಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. 

ಮುಂಬೈನಲ್ಲಿ ನಡೆಯಲಿದೆ ಕೋರ್ಟ್ ಮ್ಯಾರೇಜ್ :  
ವಿಕ್ಕಿ ಕೌಶಲ್  ಮತ್ತು ಕತ್ರಿನಾ ಕೈಫ್ (Katrina Kaif) ಮುಂದಿನ ವಾರ ಕೋರ್ಟ್ ಮ್ಯಾರೇಜ್ ಆಗಬಹುದು.  ಜೈಪುರದಲ್ಲಿ  ಈ ಜೋಡಿಯ ರಾಯಲ್ ವೆಡ್ಡಿಂಗ್‌ (Katrina Kaif and Vicky Kaushal Wedding) ನೆರವೇರಲಿದೆ. ಇದಕ್ಕೂ ಮೊದಲು ಅಂದರೆ ಜೈಪುರಕ್ಕೆ ತೆರಳುವ ಮೊದಲು, ಮುಂಬೈನಲ್ಲಿ ಇವರಿಬ್ಬರ ಕೋರ್ಟ್ ಮ್ಯಾರೇಜ್ ನೆರವೇರಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಈ ಜೋಡಿ ಮದುವೆಯ ಎಲ್ಲಾ ಸಿದ್ದತೆ ನಡೆಸುತ್ತಿದೆ. 

Exit mobile version