ಇದೇ ರೀತಿ ಮುಂದುವರಿದರೆ ದೇಶ ತಾಲಿಬಾನ್ ಪರಿಸ್ಥಿತಿ ಎದುರಿಸಲಿದೆ : ಕೆಸಿಆರ್ ವಾಗ್ದಾಳಿ!

Telangana : ಆಡಳಿತಾರೂಢ ಬಿಆರ್‌ಎಸ್ (KCR fierce attack against BJP) ಅಧ್ಯಕ್ಷ ಮತ್ತು ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ.ಸಿ.ಆರ್ ಕೆ.ಚಂದ್ರಶೇಖರ್ ರಾವ್ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ವಿರುದ್ಧ ಮುಸುಕಿನ ದಾಳಿ ನಡೆಸುತ್ತಿರುವ ಕೆ.ಸಿ.ಆರ್, ಧಾರ್ಮಿಕ ಮತ್ತು ಜಾತಿ ಮತಾಂಧತೆ ಮತ್ತು ಸಮಾಜದಲ್ಲಿ ಒಡಕು ಮೂಡಿಸುವುದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ತರಹದ ಪರಿಸ್ಥಿತಿಗೆ‌ ಮುಂದಿನ ದಿನಗಳಲ್ಲಿ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಧಾರ್ಮಿಕ ಮತ್ತು ಜಾತಿಯ ಮತಾಂಧತೆಯನ್ನು ಉತ್ತೇಜಿಸಿದರೆ, ಜನರನ್ನು ವಿಭಜಿಸಿದರೆ, ಅಂತಹ ನೀತಿಗಳನ್ನು (KCR fierce attack against BJP) ಅನುಸರಿಸಿದರೆ ನಮ್ಮ ಸ್ಥಳ ನರಕದಂತಾಗುತ್ತದೆ!

ಇದು ಅಫ್ಘಾನಿಸ್ತಾನದಂತೆಯೇ (Afghanistan) ತಾಲಿಬಾನ್ ತರಹದ ಪ್ರಕರಣವಾಗಿ ಪರಿಣಮಿಸುತ್ತದೆ ಮತ್ತು ಭಯಾನಕ ಪರಿಸ್ಥಿತಿಗೆ ಕಾರಣವಾಗುತ್ತದೆ. ಈ ದ್ವೇಷದಿಂದಾಗಿ ದೇಶದ ಜೀವನಾಡಿಯೇ ಸುಟ್ಟು ಭಸ್ಮವಾಗುವ ಸಂದರ್ಭಗಳು ಕೂಡ ಎದುರಾಗಲಿವೆ,

ಆದ್ದರಿಂದ ವಿಶೇಷವಾಗಿ ಯುವಕರು ಜಾಗೃತರಾಗಿರಬೇಕು ಎಂದು ಸಿಎಂ ಕೆ.ಚಂದ್ರಶೇಖರ್ ರಾವ್ ಅವರು ಹೇಳಿರುವುದಾಗಿ ಪಿಟಿಐ (PTI) ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಮಹಬೂಬಾಬಾದ್ ಮತ್ತು ಕೊತಗುಡೆಂನಲ್ಲಿ ಸಂಯೋಜಿತ ಜಿಲ್ಲಾಧಿಕಾರಿ ಕಚೇರಿಯನ್ನು ಉದ್ಘಾಟಿಸಿದ ಬೆನ್ನಲ್ಲೇ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಕೆ.ಸಿ.ಆರ್ ಅವರು,

ಕೇಂದ್ರದಲ್ಲಿ ಪ್ರಗತಿಪರ ಮತ್ತು ನಿಷ್ಪಕ್ಷಪಾತ ಸರ್ಕಾರವಿದ್ದರೆ ಮಾತ್ರ ದೇಶ ಮತ್ತು ರಾಜ್ಯ ಪ್ರಗತಿ ಸಾಧಿಸಲು ಸಾಧ್ಯ!

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸರಿಸಮಾನವಾಗಿ ಕಾರ್ಯನಿರ್ವಹಿಸಲು ವಿಫಲವಾದ ಕಾರಣ ತೆಲಂಗಾಣದ ಒಟ್ಟು ರಾಜ್ಯ ಆಂತರಿಕ ಉತ್ಪನ್ನವು (gsdp) ಇರಬೇಕಾದಂತೆ ಬೆಳೆಯಲಿಲ್ಲ ಎಂದು ಆರೋಪಿಸಿದರು.

2014 ರಲ್ಲಿ ರಾಜ್ಯ ರಚನೆಯ ಸಮಯದಲ್ಲಿ ತೆಲಂಗಾಣದ (Telangana) ಜಿಎಸ್‌ಡಿಪಿ 5 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು ಮತ್ತು ಇಂದು ಅದು 11.5 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ!

ಇದನ್ನೂ ಓದಿ: https://vijayatimes.com/inauguration-cruise-ganga-vilas/

ಕೇಂದ್ರದ ಅಸಮರ್ಥ ನೀತಿಗಳಿಂದಾಗಿ ತೆಲಂಗಾಣ ಒಂದರಲ್ಲೇ 3 ಲಕ್ಷ ಕೋಟಿ ರೂ. ಈ ಅಂಕಿಅಂಶಗಳನ್ನು ಅರ್ಥಶಾಸ್ತ್ರಜ್ಞರು, ಆರ್‌ಬಿಐ(RBI) ಮತ್ತು ಸಿಎಜಿ ನೀಡಿದ್ದಾರೆ. ಜಿಎಸ್‌ಡಿಪಿ 14.50 ಲಕ್ಷ ಕೋಟಿ ಇರಬೇಕಿತ್ತು,

ಆದರೆ ಕೇಂದ್ರದ ನೀತಿಗಳಿಂದಾಗಿ ಅದು 11.50 ಲಕ್ಷ ಕೋಟಿಗೆ ತಲುಪಿದೆ ಎಂದು ಆರೋಪಿಸಿದರು. ಕೆಲ ಪಕ್ಷ ಕೋಮು ಮತ್ತು ಜಾತಿವಾದಿ ರೀತಿಯಲ್ಲಿ ಜನರ ನಡುವೆ ದ್ವೇಷವನ್ನು ಉಂಟು ಮಾಡುತ್ತದೆ.

ದೇಶವು ಇಂತಹ ಗೊಂದಲವನ್ನು ಎದುರಿಸಿದರೆ, ನಾವು ತಾಲಿಬಾನ್‌ಗಳಂತಾದರೆ, ಹೂಡಿಕೆಗಳು ಬರುತ್ತವೆಯೇ? ಉದ್ಯೋಗಗಳು ಇರುತ್ತವೆಯೇ? ಇರುವ ಉದ್ಯಮಗಳು ಉಳಿಯುತ್ತವೆಯೇ?

ಗಲಭೆಗಳು ಸಂಭವಿಸಿ ಕರ್ಫ್ಯೂ, ಲಾಠಿ ಚಾರ್ಜ್ ಮತ್ತು ಗುಂಡಿನ ವಾತಾವರಣ ಸೃಷ್ಟಿಯಾದರೆ ಸಮಾಜ ಹೇಗಿರುತ್ತದೆ? ಮೇಲುಗೈ ಸಾಧಿಸುತ್ತದೆಯೇ? ಇಂದು ಏನಾಗುತ್ತಿದೆ,

ದೇಶವನ್ನು ತಪ್ಪು ದಾರಿಗೆ ತರುವ ದುಷ್ಟ ಪ್ರಯತ್ನಗಳು ಹೇಗೆ ನಡೆಯುತ್ತಿವೆ ಎಂಬುದನ್ನು ನೀವೆಲ್ಲರೂ ಗಮನಿಸುತ್ತಿದ್ದೀರಿ ಎಂದು ಹೇಳಿದರು.

ದೇಶವು ಅಪಾರ ಪ್ರಮಾಣದ ನೀರು ಮತ್ತು ವಿದ್ಯುತ್ ಸಂಪನ್ಮೂಲಗಳನ್ನು ಹೊಂದಿದ್ದರೂ, ಕೇಂದ್ರದ ಕೆಟ್ಟ ನೀತಿಗಳಿಂದ ಅಂತಾರಾಜ್ಯ ಜಲ ವಿವಾದಗಳು ಮತ್ತು ನೀರಿನ ಕೊರತೆಗಳಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಕೆ ಸರಿಯಾಗಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ ಎಂದು ಹೇಳುವ ಮೂಲಕ ಬಿಜೆಪಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
Exit mobile version