Yadgiri: ಯಾದಗಿರಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಫ್ಡಿಎ ಪರೀಕ್ಷೆಯಲ್ಲಿನ (KEA exam illegal case) ಅಕ್ರಮ ಪ್ರಕರಣ ಸಂಬಂಧ ಪೊಲೀಸ್ ತನಿಖೆಯಲ್ಲಿ ಮತ್ತೊಂದು
ವಾಟ್ಸಪ್ ಚಾಟ್ ಬಯಲಾಗಿದ್ದು, ಮತ್ತೊಂದೆಡೆ ಕಲ್ಬುರ್ಗಿಯಲ್ಲಿ ನಡೆದ ಈ ಪರೀಕ್ಷಾ ಅಕ್ರಮದ ಕಿಂಗ್ಪಿನ್ ಆರ್ಡಿ ಪಾಟೀಲ್ (RD Patil) ಆನ್ಲೈನ್ ಗೇಮ್ಗಳಲ್ಲಿ ಹಣ ಹೂಡಿಕೆ ಮಾಡಿ ಆಟ ಆಡುತ್ತಿದ್ದ
ವಿಚಾರ ಬೆಳಕಿಗೆ ಬಂದಿದೆ. ವಾಟ್ಸ್ಆ್ಯಪ್ನಲ್ಲಿ ಕೋಡ್ವರ್ಡ್ ಮೂಲಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಳುಹಿಸಿದ್ದು, ಅಕ್ರಮದ ಪ್ರಮುಖ ಆರೋಪಿ ಸಿದ್ದರಾಮ ಅಲಿಯಸ್ ಪುಟ್ಟು ಮೊಬೈಲ್ನಿಂದ ಬಂದಿದ್ದ
ಉತ್ತರಗಳ ಪ್ರತಿ ಇದಾಗಿದೆ. ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲೇ ಅಭ್ಯರ್ಥಿಗೆ ಪ್ರಶ್ನೆ ಪತ್ರಿಕೆಯಲ್ಲಿದ್ದ (KEA exam illegal case) ಅಕ್ಷರಗಳ ಆಧಾರದಲ್ಲಿ ಉತ್ತರಗಳು ಬಂದಿವೆ.
ಸಾಮಾನ್ಯ ಜ್ಞಾನ, ಕನ್ನಡ ಹಾಗೂ ಕಂಪ್ಯೂಟರ್ (Computer) ಮೂರು ವಿಷಯಗಳ ಉತ್ತರಗಳನ್ನು ಈ ಕೋಡ್ವರ್ಡ್ (Code word) ಮೂಲಕ ರವಾನೆ ಮಾಡಿದ್ದು, ಏಳು ಅಕ್ಷರದ ಉತ್ತರವಿದ್ದರೆ ಏಳು ಅಂತ ಬರೆದು
ವಾಟ್ಸ್ಆ್ಯಪ್ (WhatsApp) ಮೂಲಕ ಕಳುಹಿಸಲಾಗಿದೆ. ಈ ಆರೋಪಿ ಪ್ರಕರಣದ ಕಿಂಗ್ಪಿನ್ ಆರ್ಡಿ ಪಾಟೀಲ್ ಗ್ಯಾಂಗ್ಗೆ ಸೇರಿದವ ಎನ್ನಲಾಗುತ್ತಿದೆ.
ಕೆಇಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್ಪಿನ್ ಆರ್ಡಿ ಪಾಟೀಲ್ಗೆ ಆನ್ಲೈನ್ ಗೇಮ್ಗಳಲ್ಲಿ (Online game) ಹಣ ಹೂಡಿಕೆ ಮಾಡಿ ಆಟ ಆಡುವ ಚಾಳಿ ಹೊಂದಿದ್ದನು ಎಂದು ತಿಳಿದುಬಂದಿದೆ.
ಆನ್ ಲೈನ್ನಲ್ಲಿ ಕ್ಯಾಸಿನೊದಲ್ಲಿ ಆರ್ ಡಿ ಪಾಟೀಲ್ ಗೇಮ್ ಆಡುತ್ತಿದ್ದನು. MPC 91 ನಲ್ಲಿ ನಿತ್ಯವು ಆಟವಾಡುತ್ತಿದ್ದ.
ಕೆಲವೇ ತಿಂಗಳಲ್ಲಿ 30 ಲಕ್ಷಕ್ಕೂ ಅಧಿಕ ಹಣವನ್ನು ಹೂಡಿಕೆ ಮಾಡಿದ್ದನು. ಆನ್ಲೈನ್ ಗೇಮ್ಗಾಗಿ ಮೂರು ಮೊಬೈಲ್ ನಂಬರ್ ಅನ್ನು (Mobile Number) ಬಳಕೆ ಮಾಡುತ್ತಿದ್ದು, ಆ ಮೂಲಕ ಮೂರು ಅಕೌಂಟ್ಗಳಲ್ಲಿನ
ಅಕ್ರಮವಾಗಿ ಬಂದ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಿದ್ದನು. ಈ ಎಲ್ಲಾ ವಿಚಾರಗಳು ಅಪಾರ್ಟ್ಮೆಂಟ್ನಲ್ಲಿ (Apartment) ಸಿಕ್ಕ ಮೊಬೈಲ್ ಪರಿಶೀಲನೆ ವೇಳೆ ಬಯಲಿಗೆ ಬಂದಿದೆ.
ಇದನ್ನು ಓದಿ: ಚರ್ಮದ ಸಮಸ್ಯೆ, ರಕ್ತದೊತ್ತಡ, ಬಂಜೆತನ ನಿವಾರಣೆ ಮಾಡಲು ಈ ಹಣ್ಣುಗಳನ್ನು ಸೇವಿಸಿ.
- ಭವ್ಯಶ್ರೀ ಆರ್ ಜೆ