ಕಾಶ್ಮೀರದಲ್ಲಿ ಪಂಡಿತರಿಗಿಂತ ಮುಸ್ಲಿಂಮರೇ ಹೆಚ್ಚು ಹತ್ಯೆಯಾಗಿದ್ದಾರೆ : ಕಾಂಗ್ರೆಸ್!

kerala

ವಿವೇಕ ಅಗ್ನಿಹೋತ್ರಿ(Vivek Agnihotri) ನಿರ್ದೇಶನದ ‘ದಿ ಕಾಶ್ಮೀರಿ ಫೈಲ್ಸ್’(The Kashmir Files) ಚಿತ್ರ ಇಡೀ ದೇಶಾದ್ಯಂತ ನೋಡುಗರ ಗಮನ ಸೆಳೆಯುತ್ತಿದೆ. ಕರ್ನಾಟಕ ಸೇರಿದಂತೆ ದೇಶದ ಅನೇಕ ರಾಜ್ಯ ಸರ್ಕಾರಗಳು ಈ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡಿವೆ. ಈ ಚಿತ್ರದ ಕುರಿತು ಮತ್ತು ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತು ಕೇರಳ(Kerala) ರಾಜ್ಯ ಕಾಂಗ್ರೆಸ್ ಘಟಕ ಮಾಡಿದ ಟ್ವೀಟ್(Tweet) ಇದೀಗ ವಿವಾದಕ್ಕೆ ಕಾರಣವಾಗಿದೆ. “1990ರಿಂದ 2007 ರವರೆಗೆ ಸುಮಾರು 399 ಕಾಶ್ಮೀರಿ ಪಂಡಿತರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಆದರೆ, ಇದೇ 17 ವರ್ಷದಲ್ಲಿ ಕಾಶ್ಮೀರದಲ್ಲಿ ಉಗ್ರರಿಂದ ಹತ್ಯೆಗೀಡಾದ ಮುಸ್ಲಿಂಮರ ಸಂಖ್ಯೆ ಸುಮಾರು 15000!” ಎಂದು ಕೇರಳ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಅದೇ ರೀತಿ ಇತಿಹಾಸದ ಕೆಲ ಘಟನೆಗಳನ್ನು ತನ್ನದೇ ದಾಟಿಯಲ್ಲಿ ಅರ್ಥೈಸುವ ಸಾಹಸವನ್ನು ಮಾಡಿದೆ. “ಕಾಶ್ಮೀರದಲ್ಲಿ ಪಂಡಿತರ ಹತ್ಯೆಗೆ ಮುಖ್ಯ ಕಾರಣ ಅಂದಿನ ಗೌರ್ವನರ್ ಜಗಮೋಹನ್. ಆರ್‍ಎಸ್‍ಎಸ್ ಮೂಲಕ ಜಗಮೋಹನ್ ಅವರು ಅಂದು ಕಾಶ್ಮೀರಿ ಪಂಡಿತರಿಗೆ ಸರಿಯಾದ ಭದ್ರತೆ ನೀಡುವಲ್ಲಿ ವಿಫಲರಾದರು. ಬಿಜೆಪಿ ಅವರಿಗೆ ಭದ್ರತೆ ನೀಡಲು ಯಾವುದೇ ಸೂಚನೆ ನೀಡಿರಲಿಲ್ಲ. ಇನ್ನು ಅನೇಕ ಕಾಶ್ಮೀರಿ ಪಂಡಿತರ ಕುಟುಂಬಗಳು ಜಗಮೋಹನ್ ಅವರ ಸೂಚನೆ ಮೇರೆಗೆ ಕಾಶ್ಮೀರ ತೊರೆದವು” ಎಂದು ಕೇರಳ ಕಾಂಗ್ರೆಸ್ ಆರೋಪಿಸಿದೆ.

ಇನ್ನು ಕಾಶ್ಮೀರದಲ್ಲಿ ಪಂಡಿತರ ವಲಸೆ ಶುರುವಾಗಿದ್ದು, 1990ರ ದಶಕದಲ್ಲಿ, ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು, ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರ. ಆಗ ಮಾತ್ರ ಬಿಜೆಪಿ ಸುಮ್ಮನಿದ್ದು, ಈಗ ಹೊಸ ನಾಟಕವಾಡುತ್ತಿದೆ. ಆಗ ಬಿಜೆಪಿ ಏನು ಮಾಡುತ್ತಿತ್ತು? ಕೇಂದ್ರದಲ್ಲಿ ಎರಡು ಬಾರಿ ಮತ್ತು ಕಾಶ್ಮೀರದಲ್ಲಿ ಒಂದು ಅಧಿಕಾರಕ್ಕೇರಿದ ಬಿಜೆಪಿ ಪಂಡಿತರನ್ನು ಕಾಶ್ಮೀರಕ್ಕೆ ಏಕೆ ಮರಳಿ ಕರೆತರಲಿಲ್ಲ? ಅವರಿಗೆ ಭದ್ರತೆ ಒದಗಿಸಲಿಲ್ಲ? ಇನ್ನು ಕಾಶ್ಮೀರದಲ್ಲಿ ಪಂಡಿತರ ಹತ್ಯೆಗಳಾಗುತ್ತಿದ್ದಾಗ, ಬಿಜೆಪಿ ಅಯೋಧ್ಯ ರಥಯಾತ್ರೆಯಲ್ಲಿ ತೊಡಗಿತ್ತು.

ಆದರೆ ಈಗ ಸುಳ್ಳುಗಳನ್ನು ಹಬ್ಬಿಸುತ್ತಿದೆ ಎಂದು ಕೇರಳ ಕಾಂಗ್ರೆಸ್ ಘಟಕ ಆರೋಪಿಸಿದೆ. ಕೇರಳ ಕಾಂಗ್ರೆಸ್‍ನ ಈ ಟ್ವೀಟ್‍ಗಳಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಟ್ವೀಟ್‍ಗಳನ್ನು ಡಿಲೀಟ್ ಮಾಡಲಾಗಿದೆ. ಟ್ವೀಟ್‍ರ್‍ನಲ್ಲಿ ಅನೇಕರು ಈ ಟ್ವೀಟ್‍ಗಳನ್ನು ಹಾಕಿ, ಕಾಂಗ್ರೆಸ್‍ನ ಇಂದಿನ ಹೀನಾಯ ಸ್ಥಿತಿಗೆ ಈ ರೀತಿಯ ಮನಸ್ಥಿತಿಯೇ ಕಾರಣ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಎಂದಿಗೂ ಇತಿಹಾಸದಿಂದ ಪಾಠ ಕಲಿಯುವುದಿಲ್ಲ, ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನಾಶವಾಗಿ, ಇತಿಹಾಸದ ಪುಟ ಸೇರಲಿದೆ ಎಂದು ಕೆಲವರು ಟೀಕಿಸಿದ್ದಾರೆ.

Exit mobile version