ಎಸ್‍ಡಿಪಿಐ, ಪಿಎಫ್‍ಐ ಹಿಂಸಾತ್ಮಕ ತೀವ್ರವಾದಿ ಸಂಘಟನೆಗಳು : ಕೇರಳ ಹೈಕೋರ್ಟ್!

Highcourt

ಸೋಷಿಯಲ್ ಡೆಮಾಕ್ರಟಿಕ್(Social Democratic Party Of India) ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(Popular Front Of India) ಸಂಘಟನೆಗಳು ಹಿಂಸಾತ್ಮಕ ಸಂಘಟನೆಗಳಾಗಿದ್ದು, ತೀವ್ರವಾದಿ ಹಿಂಸಾತ್ಮಕ ಮನೋಭಾವವನ್ನು ಹೊಂದಿವೆ ಎಂದು ಕೇರಳ ಹೈಕೋರ್ಟ್(Kerala Highcourt) ಅಭಿಪ್ರಾಯಪಟ್ಟಿದೆ.


ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಸಂಘಟನೆಗಳು ನಿಷೇಧಿತ ಸಂಘಟನೆಗಳಲ್ಲ. ಆದರೆ ಹಿಂಸಾಚಾರದಲ್ಲಿ ತೊಡಗಿರುವ ತೀವ್ರವಾದಿ ಮನೋಭಾವವನ್ನು ಹೊಂದಿರುವ ಸಂಘಟನೆಗಳು ಎಂಬುದರಲ್ಲಿ ಅನುಮಾನವಿಲ್ಲ ಎಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಕೆ. ಹರಿಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕಳೆದ ವರ್ಷ ಕೇರಳದ ಪಾಲಕ್ಕಾಡ್‍ನಲ್ಲಿ ನಡೆದಿರುವ ಆರ್‍ಎಸ್‍ಎಸ್ ಕಾರ್ಯಕರ್ತನ ಹತ್ಯೆಯ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾ. ಕೆ. ಹರಿಪಾಲ್ ಈ ರೀತಿಯಾಗಿ ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಅವರು ವಜಾಗೊಳಿಸಿದ್ದಾರೆ. ಕೇರಳ ಹೈಕೋರ್ಟ್ ನೀಡಿರುವ ಈ ಅಭಿಪ್ರಾಯವನ್ನು ಕಡತದಿಂದ ತೆಗೆದು ಹಾಕುವಂತೆ ಮನವಿ ಮಾಡುವುದಾಗಿ ಎಸ್‍ಡಿಪಿಐ ಹೇಳಿದೆ. ಇದೊಂದು ಬಹಳ ಗಂಭೀರವಾದ ಮತ್ತು ಆಘಾತ ನೀಡಿರುವ ಅಭಿಪ್ರಾಯವಾಗಿದೆ.

ಇದುವರೆಗೂ ನಮ್ಮ ಸಂಘಟನೆ ಕುರಿತು ಯಾವುದೇ ತನಿಖಾ ಸಂಸ್ಥೆಗಳು ಈ ರೀತಿಯಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಆದರೆ ಹೈಕೋರ್ಟ್ ನ್ಯಾಯಮೂರ್ತಿಗಳು ಯಾವ ಆಧಾರದ ಮೇಲೆ ಈ ರೀತಿಯಾಗಿ ಅಭಿಪ್ರಾಯಪಟ್ಟಿದ್ದಾರೆ ಎಂಬ ಮಾಹಿತಿ ನನಗಿಲ್ಲ. ನ್ಯಾಯಾಲಯಗಳು ನೀಡಿರುವ ಅಭಿಪ್ರಾಯಗಳು ವಿವೇಕಯುಕ್ತವಾಗಿರಬೇಕು. ಆದರೆ ಈ ಅಭಿಪ್ರಾಯದಲ್ಲಿ ಈ ರೀತಿಯಾಗಿ ಕಾಣುತ್ತಿಲ್ಲ ಎಂದು ಎಸ್‍ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಮೂವಟ್ಟುಪುಳ ಅಶ್ರಫ್ ಮೌಲವಿ ಹೇಳಿದ್ದಾರೆ.

Exit mobile version