4 ಗಂಟೆ 10 ನಿಮಿಷ 5 ಸೆಕೆಂಡ್‌ಗಳ ಕಾಲ ತನ್ನ ಮುಖವನ್ನು ಜೇನುನೊಣಗಳಿಂದ ಮುಚ್ಚಿಕೊಂಡು ದಾಖಲೆ ನಿರ್ಮಿಸಿದ ಕೇರಳದ ವ್ಯಕ್ತಿ!

Weird : ವಿಶ್ವದಲ್ಲಿ ಅನೇಕ ಚಿತ್ರ ವಿಚಿತ್ರ ವಿಷಯಗಳು ಕಾಣ ಸಿಗುತ್ತವೆ. ದಾಖಲೆ ನಿರ್ಮಿಸಬೇಕು ಎನ್ನುವ ಉದ್ದೇಶದಿಂದ, ವಿಭಿನ್ನ ಪ್ರಯೋಗಗಳಿಗೆ ಕೆಲವರು ಕೈ ಹಾಕುವುದನ್ನು ನಾವು ನೋಡಿದ್ದೇವೆ.

ಆದರೆ ಈ ವ್ಯಕ್ತಿ ಮಾಡಿರುವ ಕೆಲಸದ ಬಗ್ಗೆ ಕೇಳಿದರೆ, ನೀವು ಒಂದು ಬಾರಿ ಬೆಚ್ಚಿ ಬೀಳುವುದು ಖಂಡಿತ.


ಹೌದು, ಜೇನು ನೊಣವೊಂದು(Honey Bee) ನಿಮಗೆ ಕಚ್ಚಿತು ಅಂದುಕೊಳ್ಳಿ, ಅದರ ನೋವು ಸಹಿಸುವುದೇ ಅಸಾಧ್ಯ. ಅದು ಕಚ್ಚಿದ ಭಾಗ ನಿಧಾನವಾಗಿ ಊದಿಕೊಂಡು ಯಮಯಾತನೆ ನೀಡುತ್ತದೆ.

ಆದರೆ ಕೇರಳದ(Kerala) ವ್ಯಕ್ತಿಗೆ ಈ ಜೇನು ನೊಣಗಳೇ ಬೆಸ್ಟ್ ಫ್ರೆಂಡ್ಸ್.

ಈತ ತನ್ನ ಮುಖವನ್ನು ಪೂರ್ತಿಯಾಗಿ ಜೇನುನೊಣಗಳಿಂದ ಮುಚ್ಚಿಕೊಳ್ಳುತ್ತಾರೆ, ಒಂದೇ ಬಾರಿ ಸುಮಾರು ಅರವತ್ತು ಸಾವಿರ ನೊಣಗಳು ಈತನ ಮುಖದ (Face) ಮೇಲೆ ಕುಳಿತುಕೊಳ್ಳುತ್ತವೆ. ಇಷ್ಟೇ ಅಲ್ಲ,

ಈತ ಜೇನುನೊಣಗಳನ್ನು ತನ್ನ ಮುಖದ ಮೇಲೆ ಕುಳ್ಳಿರಿಸಿ ನಾಲ್ಕು ಗಂಟೆ ಹತ್ತು ನಿಮಿಷ ಐದು ಸೆಕೆಂಡ್‌ಗಳ ವಿಶ್ವ ದಾಖಲೆಯನ್ನೇ ನಿರ್ಮಿಸಿದ್ದಾರೆ.

ಇದನ್ನೂ ಓದಿ : https://vijayatimes.com/platypus-and-ekidna/


ಈ ವ್ಯಕ್ತಿ ಕೇರಳದ ನೇಚರ್ ಎಂ.ಎಸ್. ಜೇನು ನೊಣಗಳು ತನ್ನ ಬೆಸ್ಟ್ ಫ್ರೆಂಡ್ ಎನ್ನುವ ಈತ, ಅವುಗಳನ್ನು ತನ್ನ ಉತ್ತಮ ಸ್ನೇಹಿತರಂತೆ ನೋಡಿಕೊಳ್ಳುತ್ತಾರೆ.

ಇವರು ಏಳು ವರ್ಷದವರಿದ್ದಾಗಲೇ ಜೇನು ನೊಣಗಳನ್ನು ತಮ್ಮ ಮುಖದ ಮೇಲೆ ಕುಳಿತುಕೊಳ್ಳುವಷ್ಟು ಫ್ರೆಂಡ್‌ಶಿಪ್ ಬೆಳೆಸಿದ್ದರು.

ಈತ ತನ್ನ ಮುಖದಲ್ಲಿ ಜೇನುನೊಣಗಳನ್ನು ದೀರ್ಘ ಕಾಲ ಕೂರಿಸಿಕೊಂಡು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇವರು ನಾಲ್ಕು ಗಂಟೆ ಹತ್ತು ನಿಮಿಷ ಐದು ಸೆಕೆಂಡ್‌ಗಳವರೆಗೆ ತನ್ನ ಮುಖವನ್ನು ಜೇನುನೊಣಗಳಿಂದ ಕವರ್ ಮಾಡಿಟ್ಟುಕೊಂಡಿದ್ದರು.

ನೇಚರ್‌ಗೆ ಜೇನುನೊಣಗಳ ಜೊತೆ ಅದೆಷ್ಟು ಪ್ರೀತಿ ಎಂದರೆ, ಅವುಗಳು ಮುಖದ ಮೇಲಿದ್ದರೂ ಅವರಿಗೆ ಯಾವುದೇ ಅಲರ್ಜಿಯಾಗುವುದಿಲ್ಲ.

ಮುಖದ ಮೇಲೆ ಜೇನುನೊಣಗಳನ್ನು ಕುಳಿತುಕೊಳ್ಳಲು ಬಿಟ್ಟಿದ್ದರಿಂದ ಯಾವುದೇ ಸಮಸ್ಯೆಯುಂಟಾಗಿಲ್ಲ. ಈ ವೇಳೆ ನಾನು ಆರಾಮಾಗಿ ನಡೆದಾಡಬಲ್ಲೆ, ನೋಡಬಲ್ಲೆ ಹಾಗೂ ಡಾನ್ಸ್ ಕೂಡಾ ಮಾಡಬಲ್ಲೆ ಎನ್ನುವುದು ನೇಚರ್ ಮಾತು. ಇದೆಲ್ಲಾ ಸುಲಭವಲ್ಲ, ಆದ್ರೆ ಜೇನುನೊಣಗಳಿಂದ ತನಗೆ ಈವರೆಗೆ ಯಾವುದೇ ಹಾನಿಯಾಗಿಲ್ಲ ಎಂದು ನೇಚರ್ ತಿಳಿಸಿದ್ದಾರೆ.


ತನ್ನ ಈ ಸಾಧನೆಗೆ ತನ್ನ ತಂದೆಯೇ ಕಾರಣ ಎಂಬುವುದು ನೇಚರ್ ಮಾತಾಗಿದೆ. ಜೇನುನೊಣ ಅತ್ಯಂತ ಒಳ್ಳೆಯ ಸ್ನೇಹಿತರಾಗುತ್ತಾರೆಂದು ತನ್ನ ತಂದೆ ಸಂಜಯ್ ಕುಮಾರ್ ಹೇಳಿಕೊಟ್ಟಿದ್ದರೆನ್ನುವುದು ನೇಚರ್ ಮಾತಾಗಿದೆ.

https://youtu.be/-ibJA-kDXXA

ಅಲ್ಲದೇ ಅವುಗಳಿಗೆ ಹೆದರಿ ದೂರ ಹೋಗಬೇಡ ಎಂದು ತಂದೆಯೇ ಕಲಿಸಿದ್ದರಂತೆ. ನೇಚರ್ ತಂದೆ ಜೇನು ನೊಣ ಸಾಕಣಿಕೆ ಮಾಡುತ್ತಾರೆ. ಇದಕ್ಕಾಗಿ ಅನೇಕ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.
Exit mobile version