ಕೇರಳದ(Kerala) ಕೊಲ್ಲಂನಲ್ಲಿ(Kollam) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ(NEET) ಕುಳಿತುಕೊಳ್ಳುವ ಮೊದಲು ಒಳಉಡುಪುಗಳನ್ನು(Innerwears) ತೆಗೆಯುವಂತೆ ವಿದ್ಯಾರ್ಥಿಗಳನ್ನು(Students) ಒತ್ತಾಯಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಎಲ್ಲಾ ಏಳು ಆರೋಪಿಗಳಿಗೆ ಇಂದು ಜಾಮೀನು(Bail) ನೀಡಲಾಗಿದೆ. ಏಳು ಮಂದಿಯ ಪೈಕಿ ಇಬ್ಬರು ಕಾಲೇಜು ಸಿಬ್ಬಂದಿ ಸೇರಿದಂತೆ ಐವರನ್ನು ಮಂಗಳವಾರ ಪೋಷಕರ ಕಂಪ್ಲೆಂಟ್ ಮೇರೆಗೆ ಬಂಧಿಸಲಾಗಿತ್ತು. ಉಳಿದ ಇಬ್ಬರನ್ನು ಇಂದು ಬೆಳಗ್ಗೆ ಬಂಧಿಸಲಾಗಿತ್ತು.

ಕಳೆದ ಭಾನುವಾರ ವಿದ್ಯಾರ್ಥಿನಿಯರ ಪಾಲಕರು ಪೊಲೀಸರಿಗೆ ದೂರು ನೀಡಿದ್ದು, ಪರೀಕ್ಷೆ ಬರೆಯಲು ಅವಕಾಶ ನೀಡುವ ಮುನ್ನ ತಮ್ಮ ಹೆಣ್ಣುಮಕ್ಕಳಿಗೆ ಒಳಉಡುಪುಗಳ ಒಂದು ಭಾಗವನ್ನು ತೆರೆಯುವಂತೆ ಒತ್ತಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ವಿದ್ಯಾರ್ಥಿಗಳು ಇವರ ಈ ನಡೆಯಿಂದ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ ಎಂದು ದೂರುದಾರರಾದ ಪೋಷಕರು ಹೇಳಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಡ್ರೆಸ್ ಕೋಡ್, ಒಳಉಡುಪುಗಳನ್ನು ತೆಗೆದುಹಾಕಲು ಸೂಚಿಸುವುದಿಲ್ಲ.
ಪರೀಕ್ಷೆಯನ್ನು ತೆಗೆದುಕೊಳ್ಳುವ ಮೊದಲು ಕನಿಷ್ಠ 90 ಪ್ರತಿಶತದಷ್ಟು ವಿದ್ಯಾರ್ಥಿಗಳನ್ನು ತಮ್ಮ ಒಳಉಡುಪುಗಳನ್ನು ತೆಗೆದುಹಾಕಲು ಒತ್ತಾಯ ಮಾಡಲಾಗಿದೆ ಮತ್ತು ಅವುಗಳನ್ನು ಸ್ಟೋರ್ ರೂಮ್‌ನಲ್ಲಿ ಇರಿಸಲು ಹೇಳಿದ್ದಾರೆ ಎಂದು ವಿದ್ಯಾರ್ಥಿನಿಯ ತಂದೆಯೊಬ್ಬರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. “ಪ್ರಾಥಮಿಕ ತಪಾಸಣೆಯ ನಂತರ, ಲೋಹ ಶೋಧಕದಿಂದ ಒಳಉಡುಪುಗಳ ಕೊಕ್ಕೆ ಪತ್ತೆಯಾಗಿದೆ ಮತ್ತು ಅದನ್ನು ತೆಗೆದುಹಾಕುವಂತೆ ನನ್ನ ಮಗಳಿಗೆ ತಿಳಿಸಲಾಯಿತು. ಸುಮಾರು 90 ಪ್ರತಿಶತ ಮಹಿಳಾ ಅಭ್ಯರ್ಥಿಗಳು ತಮ್ಮ ಒಳಉಡುಪುಗಳನ್ನು ತೆಗೆದು ಸ್ಟೋರ್ ರೂಂನಲ್ಲಿ ಇಡಬೇಕಾಗಿತ್ತು.

ಪರೀಕ್ಷೆ ಬರೆಯುವಾಗ ಅಭ್ಯರ್ಥಿಗಳು ಮಾನಸಿಕವಾಗಿ ತೊಂದರೆಗೀಡಾಗಿದ್ದರು” ಎಂದು ಹೇಳಿದ್ದಾರೆ. NEET ಸಿಬ್ಬಂದಿ ವಿದ್ಯಾರ್ಥಿಗಳಿಗೆ, “ಪರೀಕ್ಷೆಗಿಂತ ಮುಖ್ಯವಾದುದು ಏನು? ನಿಮ್ಮ ಭವಿಷ್ಯ? ಅಥವಾ ನಿಮ್ಮ ಒಳಉಡುಪು? ಎಂದು ಪ್ರಶ್ನಿಸುವ ಮುಖೇನ ವಿದ್ಯಾರ್ಥಿಗಳಿಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ. ಈ ಘಟನೆಯು ರಾಜ್ಯ ಮತ್ತು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗವು ಈ ವಿಷಯವನ್ನು ಗಮನಿಸಿದೆ.