ಪ್ರಾಣ ಪಣಕ್ಕಿಟ್ಟು ಕುಟುಂಬವನ್ನು ರಕ್ಷಿಸಿದ ಬಸ್‌ ಚಾಲಕ

ತಿರುವನಂತಪುರಂ, ಅ 19 : ಕೇರಳ ರಾಜ್ಯಾದ್ಯಂತ  ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಸಂಭವಿಸಿದೆ. ಇಡುಕ್ಕಿಯ ಪುಲ್ಲುಪಾರದಲ್ಲಿ ಸಂಭವಿಸಿದ್ದ ಭೂ ಕುಸಿತದಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಕೆಎಸ್​ಆರ್​ಟಿಸಿ(ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್​ನ ನೌಕರರೊಬ್ಬರು ರಕ್ಷಿಸಿದ್ದಾರೆ.

ಭೂಕುಸಿತದಲ್ಲಿ ಸಿಲುಕಿದ್ದ ಗುಜರಾತ್ ಮೂಲದ ಬಿಪಿನ್ ಕುಮಾರ್ ಪಟೇಲ್ ಮತ್ತು ಕುಟುಂಬವನ್ನು ಕೆಎಸ್​ಆರ್​ಟಿಸಿ ಬಸ್ ಸಿಬ್ಬಂದಿ ಜೈಸನ್ ಜೋಸೆಫ್ ರಕ್ಷಿಸಿದ್ದಾರೆ.

ಕುಮಿಲಿ-ಮುಂಡಕಾಯಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು, ಬಿಪಿನ್ ಕುಮಾರ್ ಪಟೇಲ್, ಪತ್ನಿ, ಪುತ್ರ, ಚಾಲಕ ಸಿಲುಕಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಜೈಸನ್​​ ಎಲ್ಲರನ್ನೂ ರಕ್ಷಿಸಿ ಪೀರುಮೇಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಸ್ ಚಕ್ರಕ್ಕೆ ಸಿಲಿಕಿದ್ದ ತಂದೆ, ಮಗನನ್ನು ಕಂಡಕ್ಟರ್ ರಕ್ಷಿಸಿದ್ದಾರೆ. ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಹಲವು ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ.

ಬೆಟ್ಟದ ಮೇಲ್ಭಾಗದ ರಸ್ತೆಯಲ್ಲಿ ಮಣ್ಣು ಮಿಶ್ರಿತ ನೀರು ಧಾರಾಕಾರವಾಗಿ ಹರಿದು ಹೋಗುತ್ತಿದ್ದಾಗ ತಂದೆ, ಮಗ ತಮ್ಮ ಜೀವವನ್ನು ಉಳಿಸಿಕೊಳ್ಳಲು ಬಸ್‌ ಚಕ್ರವನ್ನು ಹಿಡಿದುಕೊಂಡು ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಈ ವೇಳೆ ಎಚ್ಚೆತ್ತುಕೊಂಡ ಕಂಡಕ್ಟರ್ ತಂದೆ, ಮಗನನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆ ಕೇರಳದಲ್ಲಿ ಸುರಿದ ಭಾರೀ ಮಳೆಯ ಚಿತ್ರಣಕ್ಕೆ ಸಾಕ್ಷಿಯಾಗಿದೆ.

ಜೈಸನ್ ಜೋಸಫ್ ಎಂಬ ಕಂಡಕ್ಟರ್ ಮಗು ಮತ್ತು ಆತನ ತಂದೆಯನ್ನು ರಕ್ಷಣೆ ಮಾಡಿದ್ದು, ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಜೋರಾದ ಮಳೆಯ ಕಾರಣ ಬಸ್ ಸಂಚಾರ ಸ್ಥಗಿತಗೊಂಡಿತ್ತು, ಆಗ ವ್ಯಕ್ತಿ ಮತ್ತು ಮಗುವನ್ನು ಕೆಸರಿನಿಂದ ಮುಚ್ಚಿ ಹೋಗಿದ್ದ ಬಸ್ ಟೈರ್‌ಗೆ ಸಿಲುಕಿದ್ದರು, ಬಸ್ ಟೈಯರ್ ಹಿಡಿದು ರಕ್ಷಣೆಗಾಗಿ ಬೇಡಿಕೊಳ್ಳುತ್ತಿದ್ದರು. ಆಗ ಜೈಸನ್ ಜೋಸೆಫ್ ಸಿಲುಕಿಕೊಂಡವರ ರಕ್ಷಣೆಗೆ ಮುಂದಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜೈಸನ್ ಜೀವದ ಹಂಗು ತೊರೆದು ಬಸ್ಸಿನಿಂದ ಇಳಿದು ತಂದೆ, ಮಗುವನ್ನು ರಕ್ಷಣೆ ಮಾಡಿದ್ದಾರೆ. ಚಕ್ರಕ್ಕೆ ಸಿಲುಕಿದವರು ಗುಜರಾತ್‌ನ ಪ್ರವಾಸಿಗರು ಎಂದು ಗುರುತಿಸಲಾಗಿದೆ. ವ್ಯಕ್ತಿಯ ಪತ್ನಿ ಕಾರಿನ ಬಳಿ ಸಿಲುಕಿಕೊಂಡಿದ್ದರು ಮತ್ತು ನೀರಿನ ಮಟ್ಟ ಹೆಚ್ಚಾದಂತೆ ಅವರು ಹೊರಡಲು ಪ್ರಯತ್ನಿಸಿದ್ದರು. ಆಗ ಕೊಚ್ಚಿಕೊಂಡು ಹೋಗಿ ಬಸ್‌ ಚಕ್ರಕ್ಕೆ ಸಿಲುಕಿದ್ದರು.

ಬಸ್ ಕಂಡಕ್ಟರ್ ಜೈಸನ್ ಜೋಸೆಫ್ ಸಮಯಕ್ಕೆ ಸರಿಯಾಗಿ ಅವರನ್ನು ರಕ್ಷಣೆ ಮಾಡಿದರು. ಇಬ್ಬರನ್ನು ರಕ್ಷಣೆ ಮಾಡಿದ ಬಳಿಕ ಬಸ್ಸಿನ ಒಳಗೆ ಕರೆತರಲಾಗಿದೆ. ಕೆಸರು ನೀರಿನಲ್ಲಿ ಸಿಲುಕಿದ್ದ ಅವರ ತಲೆಯಿಂದ ಪಾದದವರೆಗೆ ಮಣ್ಣು ಮೆತ್ತಿಕೊಂಡಿರುವುದನ್ನು ವಿಡಿಯೋ ಕಾಣ ಬಹುದಾಗಿದೆ. ಬಲವಾದ ನೀರಿನ ಹರಿವಿನಿಂದಾಗಿ ಅವನು ಕಾರಿನ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ. ಜೈಸನ್ ಇತರರನ್ನು ಸರಿಯಾದ ಸಮಯಕ್ಕೆ ಎಚ್ಚರಿಸಿದ್ದು, ಕಾರಿನ ಬಳಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ.

Exit mobile version