ಇವರ ಹೆಸರು ಕೇತಾಂಜಿ ಬ್ರೌನ್ ಜಾಕ್ಸನ್(Kethanji Brown Jackson). ಇವರು ಅಮೇರಿಕಾದ(America) ಸುಪ್ರೀಂ ಕೋರ್ಟ್ನ(Supremecourt) ನೂತನ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮೆರಿಕ ಇತಿಹಾಸದಲ್ಲೇ ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು, 51 ವರ್ಷ ವಯಸ್ಸಿನ ಜಾಕ್ಸನ್ ದೇಶದ ಉನ್ನತ ನ್ಯಾಯಾಲಯದ 116ನೇ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಸುಪ್ರೀಂಕೋರ್ಟ್ನಲ್ಲಿ ಸೇವೆ ಸಲ್ಲಿಸಿದ ಮೊದಲ ಕಪ್ಪು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಯುಎಸ್ ಅಧ್ಯಕ್ಷ(US President) ಜೋ ಬಿಡೆನ್(Joe Biden) ಅವರು ಕೇತಾಂಜಿ ಬ್ರೌನ್ ಜಾಕ್ಸನ್ ಅವರನ್ನು ಯುಎಸ್ ಇತಿಹಾಸದಲ್ಲಿ ರಾಷ್ಟ್ರದ ಅತ್ಯುನ್ನತ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿದ ಮೊದಲ ಕಪ್ಪು ಮಹಿಳೆ ಎಂದು ನಾಮನಿರ್ದೇಶನ ಮಾಡಿದರು. ರಿಪಬ್ಲಿಕನ್ನರ ಮತಗಳೊಂದಿಗೆ ಅವರು ಸೆನೆಟ್ನಿಂದ ದೃಢೀಕರಿಸಲ್ಪಟ್ಟಿದ್ದಾರೆ. ಪ್ರಸ್ತುತ ಡಿಸಿ ಸರ್ಕ್ಯೂಟ್ಗಾಗಿ ಯುಎಸ್ ಕೋರ್ಟ್ ಆಫ್ ಅಪೀಲ್ಸ್ನಲ್ಲಿ ಸೇವೆ ಸಲ್ಲಿಸುತ್ತಿರುವ ಅವರು 2013 ರಿಂದ 2021 ರವರೆಗೆ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾಕ್ಕೆ ಯುನೈಟೆಡ್ ಸ್ಟೇಟ್ಸ್ ಜಿಲ್ಲಾ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕೇತಾಂಜಿ ಬ್ರೌನ್ ಜಾಕ್ಸನ್ ಅವರು ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ(Howard University) ಎರಡು ಪದವಿಗಳನ್ನು ಪಡೆದಿದ್ದಾರೆ. ಒಮ್ಮೆ ಹಾರ್ವರ್ಡ್ ಕಾನೂನು(Law) ವಿಮರ್ಶೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ ಅಮೆರಿಕದ ಉನ್ನತ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿ ಕರ್ತವ್ಯ ನಿರ್ವಹಿಸುವ ಮಹತ್ವದ ಜವಾಬ್ದಾರಿ ನಿರ್ವಹಿಸುವ ಮೂಲಕ, ಇಂತಹ ಜವಾಬ್ದಾರಿ ಪಡೆದ ಮೊದಲ ಕಪ್ಪು ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
- ಪವಿತ್ರ