ದಾಖಲೆ ಬರೆದ ಕನ್ನಡದ ಕೆ.ಜಿ.ಎಫ್ ೨ ; ೫ ಭಾಷೆಗಳಲ್ಲಿ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

rocky bhai

ಕೊನೆಗೂ ಬಹುನಿರೀಕ್ಷಿತ ಕೆ.ಜಿ.ಎಫ್ ೨(KGF 2) ಸಿನಿಮಾ ಗುರುವಾರ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಪ್ರೇಕ್ಷಕರು(Audience) ಈ ಸಿನಿಮಾವನ್ನು ಪ್ರೀತಿಯಿಂದ ಸ್ವಾಗತಿಸಿದರು. ಸುಮಾರು ನಾಲ್ಕು ವರ್ಷ ‘ಕೆಜಿಎಫ್ 2’ ಸಿನಿಮಾಗಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದು ಕೂತಿದ್ದ ರಾಕಿ ಬಾಯ್ ಫ್ಯಾನ್ಸ್ ಸಿನಿಮಾವನ್ನು ಗುರುವಾರ ಮೊದಲ ದಿನದ ಪ್ರದಶರ್ನದಲ್ಲಿ ಕಣ್ತುಂಬಿಕೊಂಡಿದ್ದಾರೆ.

ಮಧ್ಯರಾತ್ರಿಯಿಂದಲೇ ‘ಕೆಜಿಎಫ್ 2’ ಸಿನಿಮಾವನ್ನು ಮುಗಿಬಿದ್ದು ನೋಡಿದ ಅಭಿಮಾನಿಗಳಿಗಾಗಿಯೇ, ಕೆಲವಡೆ ಎಕ್ಸ್‌ಟ್ರಾ ಶೋಗಳನ್ನು ಹಾಕಲಾಗಿತ್ತು. ಮೊದಲ ದಿನ ಸಿನಿಮಾ ಬಿಡುಗಡೆಯಾದ ಬಹುತೇಕ ಕಡೆ ‘ಕೆಜಿಎಫ್ 2’ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ‘ಕೆಜಿಎಫ್ 2’ ಬಿಡುಗಡೆ ಆಗೋವರೆಗೂ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಈಗ ಸಿನಿಮಾ ರಿಲೀಸ್ ಆಗಿದ್ದು, ‘ಕೆಜಿಎಫ್ 2’ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಎಲ್ಲರ ಕಣ್ಣು ಬಿದ್ದಿದೆ. ಯಶ್ ಸಿನಿಮಾ ಯಾವ್ಯಾವ ಸಿನಿಮಾದ ದಾಖಲೆಯನ್ನು ಉಡೀಸ್ ಮಾಡುತ್ತೆ? ಎಂಬ ಪ್ರಶ್ನೆ ಉದ್ಬವಗೊಂಡಿತ್ತು.

ಬಾಕ್ಸಾಫೀಸ್‌ನಲ್ಲಿ ಯಾವ್ಯಾವ ಹೊಸ ದಾಖಲೆ ಸೃಷ್ಟಿಸುತ್ತೆ? ಎಂದು ತಿಳಿಯಲು ಎಲ್ಲರೂ ಕಾತುರರಾಗಿದ್ದರು. ಸಿನಿಮಾ ವಿಮರ್ಶಕರ ನಿರೀಕ್ಷೆಯಂತೆ ಕೆಜಿಎಫ್ 2 ಸಿನಿಮಾಗೆ ಸಕ್ಕತ್ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ಸಿನಿಮಾ ನೋಡಿದ ಬಹುತೇಕ ಮಂದಿಗೆ ‘ಕೆಜಿಎಫ್ 2’ ಇಷ್ಟ ಆಗಿದೆ. ಆದರೆ ಈ ಸಿನಿಮಾ ರಾಜಮೌಳಿ ನಿರ್ದೇಶಿಸಿದ RRR ಚಿತ್ರದ ಮೊದಲ ದಿನದ ಗಳಿಕೆಯನ್ನು ಬೀಟ್ ಮಾಡುತ್ತಾ ಎಂಬ ಕುತೂಹಲವಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಹಾಗಿದ್ದರೆ, ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್ 2’ ವಿಶ್ವದಾದ್ಯಂತ ಗಳಿಸಿದ್ದು ಎಷ್ಟು ಅನ್ನೋದನ್ನ ತಿಳಿದುಕೊಳ್ಳೋಣ.

ಇದು ಕೇವಲ ಮೊದಲ ದಿನದ ಮಾಹಿತಿಯ ಅನುಸಾರ, ಕೆಜಿಎಫ್ 2 ಕರ್ನಾಟಕದಲ್ಲಿ ಫಸ್ಟ್ ಡೇ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಶೇ. 90ರಷ್ಟು ಚಿತ್ರಮಂದಿರಗಳಲ್ಲಿ ಮೊದಲ ದಿನವೇ ಕೆಜಿಎಫ್ 2 ಕಮಾಲ್ ಮಾಡಿದೆ ಎಂಬುದನ್ನು ವಿತರಕರು ಹೇಳುತ್ತಾರೆ. ಸುಮಾರು 400ಕ್ಕೂ ಹೆಚ್ಚು ಸಿಂಗಲ್‌ ಸ್ಕ್ರೀನ್‌ಗಳಲ್ಲಿ ‘ಕೆಜಿಎಫ್ 2’ ಬಿಡುಗಡೆಯಾಗಿತ್ತು. ಜೊತೆಗೆ ಮಲ್ಟಿಪ್ಲೆಕ್ಸ್‌ನಲ್ಲೂ ರಿಲೀಸ್ ಆಗಿದ್ದು, ಎಲ್ಲಾ ಕಡೆಯಿಂದಲೂ ಉತ್ತಮ ಪ್ರಶಂಸೆ ದೊರೆತಿದೆ. ಕರ್ನಾಟಕದಲ್ಲಿ ಮೊದಲ ದಿನವೇ ಬರೋಬ್ಬರಿ 38 ಕೋಟಿ ಗಳಿಸಿದೆ ಎಂದು ವಿತರಕರ ವಲಯ ಹೇಳುತ್ತಿದೆ.

ಭಾರತದ ಬಾಕ್ಸಾಫೀಸ್‌ನಲ್ಲಿ ‘ಕೆಜಿಎಫ್ 2’ ದಾಖಲೆ ಬರೆದಿದೆ. ಕೇವಲ ಭಾರತದಲ್ಲೇ 100 ಕೋಟಿ ಕ್ಲಬ್ ಸೇರಿದ್ದು, ವಿದೇಶದಲ್ಲೂ ‘ಕೆಜಿಎಫ್ 2 ರಿಲೀಸ್ ಆಗಿತ್ತು. ಅದ್ಧೂರಿಯಾಗಿ ಬಿಡುಗಡೆಯಾಗಿದ್ದ ಈ ಸಿನಿಮಾ ವಿದೇಶದಲ್ಲಿ ಸುಮಾರು 25 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ. ಕರ್ನಾಟಕದ ವಿತರಕರ ಪ್ರಕಾರ, ‘ಕೆಜಿಎಫ್ 2’ ಮೊದಲ ದಿನದ ಗಳಿಕೆಯ ಅಂದಾಜು ಲೆಕ್ಕ ಹೀಗಿದೆ.


ಕರ್ನಾಟಕದಲ್ಲಿ ಅಂದಾಜು 38 ಕೋಟಿ, ಹಿಂದಿ 40-45 ಕೋಟಿ, ಆಂಧ್ರ ಹಾಗೂ ತೆಲಂಗಾಣ 25 ಕೋಟಿ, ತಮಿಳು ನಾಡು 6-7 ಕೋಟಿ, ಕೇರಳ 5 ಕೋಟಿ, ಹಾಗೂ ವಿದೇಶದಲ್ಲಿ ಅಂದಾಜು 25 ಕೋಟಿ. ಒಟ್ಟಾರೆಯಾಗಿ ಮೊದಲ ದಿನವೇ 139-145 ಕೋಟಿ ಗಳಿಕೆ ಮಾಡಿ ದಾಖಲೆ ಸೃಷ್ಟಿಸಿ, ಎಲ್ಲರೂ ನಮ್ಮ ಸ್ಯಾಂಡಲ್ವುಡ್ ನತ್ತ ಹೆಮ್ಮೆಯಿಂದ ತಿರುಗಿ ನೋಡುವಂತೆ ಮಾಡಿದೆ ನಮ್ಮ ಹೆಮ್ಮೆಯ ಕೆಜಿಎಫ್ 2.

Exit mobile version