ಎಚ್ಚರ: ಋತುಸ್ರಾವದ ನೋವು ತಡೆಯಲಾರದೆ ಪೈನ್ ಕಿಲ್ಲರ್ ಮಾತ್ರೆ ತೆಗೆದುಕೊಳ್ಳುತ್ತಿದ್ದ ಬಾಲಕಿ ಸಾವು

ಹೆಣ್ಣುಮಕ್ಕಳಿಗೆ ತಿಂಗಳು ತಿಂಗಳು ಆಗುವಂತಹ ಋತುಸ್ರಾವದ ಸಮಯದಲ್ಲಿ (killer pain killer pills) ಹೊಟ್ಟೆಯ ನೋವು ಹಾಗೂ ಸೆಳೆತ ಕಾಣಿಸಿಕೊಳ್ಳುತ್ತೆ. ಆದರೆ ಈ ನೋವನ್ನು

ನಿವಾರಿಸಲು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಅಭ್ಯಾಸ ನಿಮಗಿದ್ದರೆ ಇಂದೇ ನಿಲ್ಲಿಸಿ. ಯಾಕಂದ್ರೆ ಈ ನೋವು ನಿವಾರಕ ಮಾತ್ರೆ ತಿಂದು ೧೬ರ ಬಾಲಕಿ ಸಾವನ್ನಪ್ಪಿರುವ

ಘಟನೆಯೊಂದು (killer pain killer pills) ಇದೀಗಾ ಭಾರೀ ಸುದ್ದಿಯಲ್ಲಿದೆ.

ನೋವು ನಿವಾರಕ ಮಾತ್ರೆಗಳು ತಕ್ಷಣಕ್ಕೆ ನೋವಿನಿಂದ ಮುಕ್ತಿ ನೀಡಿದರೂ ಸಹ ಕಾಲ ಕ್ರಮೇಣ ಪ್ರಾಣಕ್ಕೆ ಕಂಟಕವಾಗಬಹುದು. ವಿಪರೀತ ಮುಟ್ಟಿನ ನೋವಿನಿಂದ ಬಳಲುತ್ತಿದ್ದ ಲೈಲಾ (16) ಎಂಬ

ಅಪ್ರಾಪ್ತ ಬಾಲಕಿ ತನ್ನ ಸ್ನೇಹಿತರ ಸಲಹೆಯ ಮೇರೆಗೆ ಪ್ರತೀ ತಿಂಗಳು ನೋವು ನಿವಾರಕ ಮಾತ್ರೆ ಸೇವಿಸುತ್ತಿದ್ದ ಪರಿಣಾಮ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ದುರ್ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದ್ದು, ಸ್ನೇಹಿತರ ಸಲಹೆಯಂತೆ ನವೆಂಬರ್ 25 ರಂದು ಋತುಸ್ರಾವದ ಮೊದಲ ದಿನದಿಂದ ಲೈಲಾ ಮಾತ್ರೆ ಸೇವಿಸಲು ಪ್ರಾರಂಭಿಸಿದ್ದಾಳೆ. ಆದರೆ ಸಾಮಾನ್ಯವಾಗಿ

ಮೂರರಿಂದ ನಾಲ್ಕು ದಿನಗಳಲ್ಲಿ ಮಹಿಳೆಯರಲ್ಲಿ ನೋವು ಕಡಿಮೆಯಾಗುತ್ತದೆ. ಆದರೆ ಈಕೆಯ ಮುಟ್ಟಿನ ನೋವು ಉಲ್ಬಣಗೊಂಡಿದೆ.

ಪರಿಣಾಮ ಡಿಸೆಂಬರ್​​​ 05ರ ವೇಳೆಗೆ ಲೈಲಾ ವಿಪರೀತ ವಾಂತಿ ಭೇದಿ ಹಾಗೂ ತಲೆನೋವಿನಿಂದ ಬಳಲುತ್ತಿರುವುದನ್ನು ಕಂಡು ಪೋಷಕರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಈ

ಬಾಲಕಿಯ ತೀವ್ರ ಒದ್ದಾಟವನ್ನು ಕಂಡು ಸಿಟಿ ಸ್ಕ್ಯಾನ್ ಮಾಡಿಸಿದಾಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದುಬಂದಿದ್ದು, ತಕ್ಷಣ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೆದುಳು ನಿಷ್ಕ್ರಿಯಗೊಂಡು ಡಿಸೆಂಬರ್ 13 ರಂದು ಲೈಲಾ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಬಾಲಕಿಯ

ಸಾವಿನ ಸುದ್ದಿ ಕುಟುಂಬಕ್ಕೆ ಅಘಾತ ಉಂಟುಮಾಡಿದ್ದು, ಕುಟುಂಬ ಸಾವಿನ ದುಃಖದ ನುಡುವೆಯೂ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮರೆದಿದೆ. ಕ್ರಿಸ್‌ಮಸ್‌ಗೂ ಮುನ್ನ ಇನ್ನೂ

ಐವರ ಜೀವ ಉಳಿಸಲು ನಿಸ್ವಾರ್ಥವಾಗಿ ಲೈಲಾ ಕುಟುಂಬ ಮುಂದಾಗಿರುವುದು ‘ದಿ ಟೆಲಿಗ್ರಾಫ್‌’ನಲ್ಲಿ ವರದಿಯಾಗಿದೆ.

ಇದನ್ನು ಓದಿ: ಕೋವಿಡ್ ಭೀತಿ: ರಾಜ್ಯದ ಸ್ಥಿತಿಗತಿಯನ್ನು ಕೇಂದ್ರ ಆರೋಗ್ಯ ಸಚಿವರಿಗೆ ವಿವರಿಸಿದ ದಿನೇಶ್ ಗುಂಡೂರಾವ್

Exit mobile version