ಕಿಸಾನ್‌ ಸಮ್ಮಾನ್‌ ಯೋಜನೆಯ ಮುಂದಿನ ಕಂತಿನ ಹಣದ ಬಿಡುಗಡೆಗೊಳಿಸಿದ ಪ್ರಧಾನಿ

ನವದೆಹಲಿ, ಡಿ. 25: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದ 6 ರಾಜ್ಯಗಳ ರೈತರೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಬಳಿಕ ದೇಶದ ರೈತರನ್ನು ಉದ್ದೇಶಿಸಿ ಮಾತನಾಡಿದರು.

ಇಂದು ಪಶ್ಚಿಮ ಬಂಗಾಳದ 70 ಲಕ್ಷ ರೈತರು ಈ (ಪಿಎಂ-ಕಿಸಾನ್) ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ ಎಂದು ವಿಷಾದಿಸುತ್ತೇನೆ. ಈ ಯೋಜನೆಯ ಲಾಭ ಪಡೆಯಲು ಬಂಗಾಳದ 23 ಲಕ್ಷಕ್ಕೂ ಹೆಚ್ಚು ರೈತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಇಷ್ಟು ದಿನ ಪರಿಶೀಲನೆ ಕೇವಲ ಪರಿಶೀಲನೆ ನಡೆಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪಶ್ಚಿಮ ಬಂಗಾಳದಲ್ಲಿ ರೈತರ ಹಿತಕ್ಕಾಗಿ ಮಾತನಾಡದ ವಿಪಕ್ಷಗಳು ದೆಹಲಿಗೆ ಬಂದು ರೈತರ ಬಗ್ಗೆ ಮಾತನಾಡುತ್ತಾರೆ. ಈ ಪಕ್ಷಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಎಪಿಎಂಸಿ ಮಂಡಿಗಳನ್ನು ಕಳೆದುಕೊಳ್ಳುತ್ತಿವೆ. ಆದರೆ ಈ ಪಕ್ಷಗಳು ಕೇರಳದಲ್ಲಿ ಎಪಿಎಂಸಿ ಮಂಡಿಗಳು ಇಲ್ಲ ಎಂಬುದನ್ನು ಪದೇ ಪದೇ ಮರೆತುಬಿಡುತ್ತಾರೆ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಹೊಸ ಕಂತನ್ನು ಪ್ರಧಾನಿ ಇಂದು ವರ್ಚುವಲ್ ಕಾರ್ಯಕ್ರಮದ ಮೂಳಕ ಬಿಡುಗಡೆ ಮಾಡಿದ್ದಾರೆ, ಇಂದು ಏಳನೇ ಕಂತಿನ ಸಹಾಯಧನ ಬಿಡುಗಡೆಯಾಗಿದೆ.ಆರು ರಾಜ್ಯದ ರೈತರೊಂದಿಗೆ ಸಂವಾದವನ್ನು ಮಾಡಿದರು ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಅವರು ಉಪಸ್ತಿತರಿದ್ದರು.

Exit mobile version