Rajasthan: ಜುಲೈ 27: ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Kisan Samman installment released) ರೈತರಿಗೆ ಇಂದು ಸಂತಸದ ಸುದ್ದಿ ನೀಡಿದ್ದಾರೆ. ಪ್ರಧಾನಮಂತ್ರಿಗಳು ರಾಜಸ್ತಾನದ
(Rajasthan) ಸಿಕರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದು ಜುಲೈ 27ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (Prime Minister Kisan Samman Nidhi Scheme) 14 ನೇ ಕಂತಿನ
ಹಣವನ್ನು ಬಿಡುಗಡೆ ಮಾಡಿದ್ದಾರೆ ಹಾಗೂ ತಲಾ 2000 ರೂಪಾಯಿ 9 ಕೋಟಿಗೂ ಹೆಚ್ಚು ಫಲಾನುಭವಿಗಳ ಖಾತೆಗೆ ಜಮೆ ಆಗಿದೆ.
ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣವನ್ನು ಅರ್ಹ ರೈತ ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಒಟ್ಟು ಒಟ್ಟು 17,000 ಕೋಟಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿದೆ.
ಇದೇ ವರ್ಷ 2023ರ ಫೆಬ್ರುವರಿಯಂದು (February) ಈ ಹಿಂದಿನ 13ನೇ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು.

ಪಿಎಂ ಕಿಸಾನ್ ಯೋಜನೆ ಸದುದ್ದೇಶ
ದೇಶದ ರೈತರಿಗೆ ಆರ್ಥಿಕವಾಗಿ ನೆರವಾಗಲು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ (PM Kisan scheme) 2019ರಲ್ಲಿ ಜಾರಿಗೊಳಿಸಿತು. ಆರಂಭದಲ್ಲಿ ಇದು
ಮಧ್ಯಮ ರೈತರಿಗೆ ವ್ಯವಸಾಯಕ್ಕೆ ಅನುಕೂಲವಾಗಲೆಂದು ಮತ್ತು 5 ಎಕರೆಗಿಂತಲ ಕಡಿಮೆ ಜಮೀನು ಹೊಂದಿರುವ ರೈತರಿಗೆ ಧನಸಹಾಯವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.
ನಂತರ ಕ್ರಮೇಣವಾಗಿ ಎಲ್ಲ ವರ್ಗದ ರೈತರಿಗೆ ಈ ಯೋಜನೆಯನ್ನು ವಿಸ್ತರಣೆ ಮಾಡಿತು. ಅಂದಿನಿಂದ ವಾರ್ಷಿಕವಾಗಿ 6,000 ರೂಪಾಯಿಯನ್ನು ಅಂದರೆ ಪ್ರತಿ ನಾಲ್ಕು ತಿಂಗಳಿಗೆ 2000 ರೂ.ನಂತೆ
ನೇರವಾಗಿ ರೈತ ಖಾತೆಗೆ (ಡಿಬಿಟಿ) (Kisan Samman installment released) ವರ್ಗಾಯಿಸಲಾಗುತ್ತದೆ.
ಇದನ್ನೂ ಓದಿ : ಸಾಲ ಮರುಪಾವತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಬೇಡ, ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್ಗಳಿಗೆ ಸೂಚನೆ : ನಿರ್ಮಲ ಸೀತಾರಾಮನ್
ಈ ಹಿಂದೆ ಬಿಜೆಪಿ(BJP) ಸರ್ಕಾರ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ರಾಜ್ಯದ ರೈತರಿಗೆ ಕೆಂದ್ರ ಸರ್ಕಾರ ಕೊಡುವ ಹಣದ ಜೊತೆಗೆ ಒಟ್ಟು 4000 ರೂಪಾಯಿ ಹಣವನ್ನು ಒಟ್ಟು ಎರಡು ಕಂತುಗಳಲ್ಲಿವರ್ಗಾಯಿಸುತ್ತಿತ್ತು.
ಆದರೆ ಈ ಯೋಜನೆಯನ್ನು ಮುಂದುವರಿಸುವ ಬಗ್ಗೆ ಈಗ ಅಧಿಕಾರದಲ್ಲಿರುವ ರಾಜ್ಯ ಕಾಂಗ್ರೆಸ್(Congress) ಸರ್ಕಾರ (Government)ಯಾವ ನಿರ್ಧಾರವನ್ನು ಇನ್ನೂ ಸಹ ಮಾಡಿಲ್ಲ.

14ನೇ ಕಂತಿನ ಹಣ ಬಂತಾ?:ಹೀಗೆ ಪರಿಶೀಲಿಸಿ
ಅರ್ಹ ರೈತ ಫಲಾನುಭವಿಗಳು ತಮ್ಮ ಖಾತೆಗೆ ಹಣ ಬಂದಿದೆಯೇ ಇಲ್ಲವೋ ಎಂದು ಪರಿಶೀಲಿಸಲು ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ (Website) www.pmkisan.gov.in ಗೆ
ಮೊದಲು ಭೇಟಿ ನೀಡಿ. ನಂತರ ಇಲ್ಲಿ ಕಾಣಿಸುವ ನಿಮ್ಮದೇ ಕಾಲಂ (Farmers Corner) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಇಲ್ಲಿರುವ ಫಲಾನುಭವಿಗಳ ಸ್ಟೇಟಸ್ (Beneficiary Status)
ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ಇಲ್ಲಿ ಕೇಳಲಾಗುವ ಕೆಲವು ಮಾಹಿತಿಗಳು ಅಂದರೆ ನಿಮ್ಮ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ (Adhar Number), ನಮೂದಿಸಿ ಸಬ್ಮಿಟ್
(Submit) ಮಾಡಿದರೆ 14ನೇ ಕಂತಿನ ಹಣ ಜಮೆ ಆಗಿದೆಯೋ? ಇಲ್ಲವೋ? ಎಂಬ ಮಾಹಿತಿ ಇಲ್ಲಿ ದೊರೆಯುತ್ತದೆ.
ರಶ್ಮಿತಾ ಅನೀಶ್