ಹ್ಯಾಕ್‌ನಿಂದ ಟ್ವಿಟರ್ ಖಾತೆ ರದ್ದಾಗಿದೆಯೇ ವಿನಃ ನನ್ನ ಪೋಸ್ಟ್‌ನಿಂದಲ್ಲ : ನಟ ಕಿಶೋರ್

Bengaluru : ಕಾಂತಾರ(Kanthara) ಚಿತ್ರದ ಖ್ಯಾತ ನಟ ಕಿಶೋರ್(Kishore clarified about twitter account) ಅವರ ಅಧಿಕೃತ ಟ್ವಿಟರ್ ಖಾತೆಯನ್ನು ಟ್ವಿಟರ್‌ ಸಂಸ್ಥೆ ಸದ್ಯ ರದ್ದುಗೊಳಿಸಿದೆ! ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಗೊಂದಲಗಳ ಕುರಿತು ಸ್ವತಃ ನಟ ಕಿಶೋರ್‌ ಅವರೇ ಇದೀಗ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್‌ ಖಾತೆಯನ್ನು(Twitter Account) ರದ್ದುಗೊಳಿಸಿರುವ ಟ್ವಿಟರ್‌ ಸಂಸ್ಥೆಯಿಂದ ನಟ ಕಿಶೋರ್‌ ಅವರಿಗೆ ಇಲ್ಲಿಯವರೆಗೂ ಯಾವುದೇ ಬಲವಾದ ಕಾರಣ ತಿಳಿದುಬಂದಿಲ್ಲ.

ಟ್ವಿಟರ್‌ ಖಾತೆ ರದ್ದುಗೊಳಿಸಿರುವ ಬಗ್ಗೆ ಮಾತನಾಡಿದ ನಟ ಕಿಶೋರ್‌ ಅವರು, ನನ್ನ ಟ್ವಿಟರ್ ಖಾತೆಯನ್ನು ಹ್ಯಾಕ್‌(Hack) ಮಾಡಲಾಗಿದೆ. ಹ್ಯಾಕಿಂಗ್‌ ಆದ ಕಾರಣಕ್ಕೆ ಟ್ವಿಟರ್‌ ನನ್ನ ಖಾತೆಯನ್ನು ರದ್ದುಗೊಳಿಸಿದೆ ಹೊರತು ನನ್ನ ಪೋಸ್ಟ್‌ಗಳಿಂದಲ್ಲ ಎಂದು ಹೇಳಿದ್ದಾರೆ.

ನನ್ನ ಖಾತೆ ಹ್ಯಾಕ್‌ ಆಗಿರುವ ಬಗ್ಗೆ ಪರಿಶೀಲನೆ ನಡೆಸಿ, ಹಿಂದಿರುಗಿಸುವ ಬಗ್ಗೆ ಮೈಕ್ರೋಬ್ಲಾಗಿಂಗ್ ಸೈಟ್(Microbloging site) ಅಗತ್ಯ ಕ್ರಮದ ಭರವಸೆ ನೀಡಿದೆ ಎಂದು ಹೇಳಿದ್ದಾರೆ.

ನಟ ಕಿಶೋರ್‌ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲು ಇರುವ ಅಸಲಿ ಕಾರಣವೇನು ಎಂಬ ಶೀರ್ಷಿಕೆಗಳ ಅಡಿ ಅನೇಕ ಮಾಧ್ಯಮಗಳು ಅವರ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿತು.

ಈ ತಪ್ಪು ಗ್ರಹಿಕೆಗಳನ್ನು ತಡೆಯಲು ಸ್ವತಃ ನಟ ಕಿಸೋರ್‌ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ(Kishore clarified about twitter account) ಅಭಿಮಾನಿಗಳಿಗೆ ಮತ್ತು ಹಲವರಿಗೆ ತಮ್ಮ ಖಾತೆ ರದ್ದುಗೊಳ್ಳಲು ಅಸಲಿ ಕಾರಣವೇನು ಎಂಬುದರ ಬಗ್ಗೆ ಸೂಕ್ತ ವಿವರಣೆಯ ಮುಖೇನ ಸ್ಪಷ್ಟಪಡಿಸಿದ್ದಾರೆ.

ನಟ ಕಿಶೋರ್‌ ಅವರಿಗೆ ಈಗಾಗಲೇ ದೊರೆತಿರುವ ಮಾಹಿತಿ ಅನುಸಾರ ಅವರು ತಮ್ಮ ಇಮೇಲ್ ಐಡಿಯನ್ನು ಶೀಘ್ರವೇ ಬದಲಾಯಿಸಲು ಮೈಕ್ರೋಬ್ಲಾಗಿಂಗ್ ಸೈಟ್ ತಿಳಿಸಿದೆ ಎಂದು ಹೇಳಿದ್ದಾರೆ.

ಕಿಶೋರ್ ಅವರ ಪ್ರಕಾರ, ಡಿಸೆಂಬರ್ 20, 2022 ರಂದು ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗಿದೆ. ನನ್ನ ಟ್ವಿಟರ್ ಖಾತೆಯನ್ನು ರದ್ದುಗೊಳಿಸಿದ್ದು ಕೇವಲ ಹ್ಯಾಕ್‌ ಆಗಿರುವ ಕಾರಣವೇ ವಿನಃ ನನ್ನ ಯಾವುದೇ ಪೋಸ್ಟ್‌ಗಳ ಕಾರಣದಿಂದ ಅಲ್ಲ!

ನನ್ನ ಟ್ವಿಟರ್ ಖಾತೆಯನ್ನು ಟ್ವಿಟರ್‌ ಸಂಸ್ಥೆ ರದ್ದುಗೊಳಿಸಿಲ್ಲ! ಟ್ವಿಟರ್ ನನಗೆ ಅಗತ್ಯ ಕ್ರಮದ ಭರವಸೆ ನೀಡಿದೆ ಎಂದು ಹೇಳಿದ್ದಾರೆ. Twitter ಇಮೇಲ್‌ನಲ್ಲಿ ಕಿಶೋರ್‌ ಅವರಿಗೆ ಕಳಿಸಿರುವ ಮಾಹಿತಿಯನ್ನು ಅವರು ಸ್ಕ್ರೀನ್‌ ಶಾಟ್‌ ತೆಗೆದು ಪೋಸ್ಟ್‌ ಮಾಡಿ ತಿಳಿಸಿದ್ದಾರೆ.

ಇದನ್ನೂ ಓದಿ: https://vijayatimes.com/namma-metro-pre-scheduled-auto/

ಟ್ವಿಟ್ಟರ್ ನಿಯಮಗಳು ಅಥವಾ ಸೇವಾ ನಿಯಮಗಳ ಉಲ್ಲಂಘನೆಗಾಗಿ ಖಾತೆಯನ್ನು ಅಮಾನತುಗೊಳಿಸಿರುವುದಾಗಿ ಮೈಕ್ರೊಬ್ಲಾಗಿಂಗ್ ಸೈಟ್ ಮೇಲ್‌ನಲ್ಲಿ ಪುನರುಚ್ಚರಿಸಿದೆ.

ಕಳೆದ ವರ್ಷ ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್‌(The family man web series) ಸೇರಿದಂತೆ ತಮಿಳಿನ ಪೊನ್ನಿಯನ್‌ ಸೆಲ್ವನ್‌(Ponniyan selvan) ಭಾಗ ೧ರ ಸಿನಿಮಾದಲ್ಲಿ ನಟಿಸಿದ ನಟ ಕಿಶೋರ್‌,

ರಿಷಬ್‌ ಶೆಟ್ಟಿ(Rishab shetty) ನಿರ್ದೇಶಿಸಿ, ನಟಿಸಿದ ಬ್ಲಾಕ್‌ ಬಸ್ಟರ್‌ ಕಾಂತಾರ ಚಿತ್ರದಲ್ಲಿ ಅರಣ್ಯ ಅಧಿಕಾರಿಯ ಪಾತ್ರದಲ್ಲಿ ಮಿಂಚಿ ಸಿನಿಪ್ರೇಕ್ಷಕರ ಮನಗೆದ್ದರು.

ಕಾಂತಾರ ಚಿತ್ರದಲ್ಲಿನ ಅವರ ನಟನೆಗೆ ಭಾರಿ ಮೆಚ್ಚುಗೆಗಳು ವ್ಯಕ್ತವಾಗಿದ್ದು, ಈ ಚಿತ್ರದ ಮೂಲಕ ಸಿನಿಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ ಎಂದೇ ಹೇಳಬಹುದು.

Exit mobile version