ಜನ ಮನ ಗೆದ್ದ ಕಾಂತಾರದ ಭೂತಕೋಲದ ಕಥೆಗೆ ಧರ್ಮದ ಬಣ್ಣ ಬಳಿಯಬೇಡಿ : ನಟ ಕಿಶೋರ್

Bengaluru : ಕಾಂತಾರ (Kantara) ಚಿತ್ರ ಜನರ ಮನಸ್ಸನ್ನು ಸೂರೆಗೊಂಡು, ದೇಶ-ವಿದೇಶಗಳಲ್ಲಿ ನಮ್ಮ ಮಣ್ಣಿನ ಸಂಸ್ಕೃತಿಯ (Kishore Requests haters) ಬಗ್ಗೆ ತಿಳುವಳಿಕೆ ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ.

ಆದರೆ, ಕಾಂತಾರ ಚಿತ್ರದ ಅದ್ಭುತ ಯಶಸ್ಸಿನ ಬಳಿಕ ನಟ ಚೇತನ್ ಅಹಿಂಸಾ (Chethan Ahimsa) ನೀಡಿದ ಹೇಳಿಕೆಯೊಂದು ಬಿರುಗಾಳಿಯನ್ನೇ ಸೃಷ್ಟಿಸಿತ್ತು.

ಸಿನಿಮಾದ ಬಗ್ಗೆ ಚೇತನ್ ಹೀಗೆ ಹೇಳಿದ್ದರು, “ಭೂತಕೋಲ ಹಿಂದೂ ಸಂಸ್ಕೃತಿ ಎಂದು ಹೇಳಿರುವ ರಿಷಬ್ ಶೆಟ್ಟಿ(Rishab Shetty) ಅವರ ಮಾತು ಸುಳ್ಳು. ಆದರೆ, ನಮ್ಮ ಪಂಬದ, ನಲಿಕೆ, ಪರವರ ಬಹುಜನರ ಸಂಪ್ರದಾಯಗಳು. ವೈದಿಕ-ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು.

ಇದನ್ನೂ ಓದಿ : https://vijayatimes.com/rajnikanth-likes-kantara/

ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆ ಮತ್ತು ಹೊರಗೆ ಸತ್ಯದೊಂದಿಗೆ ಪ್ರದರ್ಶಿಸಬೇಕು ಎಂದು ನಾನು ಕೋರುತ್ತೇನೆ. ಭೂತಾರಾಧನೆ ಹಿಂದೂ ಧರ್ಮದ ಸಂಸ್ಕೃತಿಯೇ ಅಲ್ಲ” ಎಂದು ಚೇತನ್ ಹೇಳಿಕೆ ನೀಡಿದ್ದರು.

ಆದರೆ ಇದೀಗ, ಕಾಂತಾರ ಸಿನಿಮಾದಲ್ಲಿ ಮುರುಳೀಧರ್‌ ಎಂಬ ಪಾತ್ರವನ್ನು ನಿಭಾಯಿಸಿದ್ದ ಮುಖ್ಯ ಪಾತ್ರಧಾರಿ ಕಿಶೋರ್ ಕುಮಾರ್ ಅವರು ಸಾಮಾಜಿಕ ತಾಣದಲ್ಲಿ ಸಿನಿಮಾದ ಪರವಾಗಿ ಟ್ವೀಟ್(Tweet) ಮಾಡಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕಿಶೋರ್ “ನಮ್ಮ ಜನಪದೀಯರ ಕೋಲದ ಭೂತಕ್ಕೂ, ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಲಿ (Kishore Requests haters) ಕಳಕಳಿಯ ಮನವಿ.

ಅದೇ ದೈವದ ವೇಷ ಧರಿಸುವವನನ್ನು ಅಸ್ಪೃಷ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪೃಷ್ಯತೆಯ ಆಚರಣೆಯಲ್ಲಿ ನಮಗೆ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕೆ?

ಇದನ್ನೂ ಓದಿ : https://vijayatimes.com/bombay-highcourt-verdict/

ಜನರಿಗಾಗಿ ಬಾಂಬು ಸಿಡಿಸಿ ಜೀವತೆತ್ತ ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ?? ಎಲ್ಲ ಒಳ್ಳೆಯ ಸಿನಿಮಾಗಳಂತೆ “ಕಾಂತಾರ” ಜಾತಿ, ಧರ್ಮ, ಭಾಷೆಗಳನ್ನು ಮೀರಿ ದೇಶದ ಜನಗಳನ್ನು ಬೆಸೆಯುತ್ತಿದೆ. ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದೆ.

ಅಂಥ ಸಿನಿಮಾವನ್ನು ಬಳಸಿ ಮೂಢನಂಬಿಕೆಯನ್ನೋ, ಧರ್ಮಾಂಧತೆಯನ್ನೋ ಪ್ರಚೋದಿಸಿ ಜನಗಳನ್ನು ವಿಭಜಿಸುವ ಮಟ್ಟಕ್ಕೆ ಇಳಿದು ಬಿಟ್ಟರೆ ಇಂಥಾ ದೊಡ್ಡ ಗೆಲುವೂ ಮನುಷ್ಯತ್ವದ ದೊಡ್ಡ ಸೋಲಾಗಿಹೋದೀತು”.

“ಕೇವಲ ವೋಟ್ ಗಾಗಿ ಪಟೇಲ್, ಗಾಂಧಿ, ಬೋಸ್, ನೆಹರೂ ಸಹಿತ ಕೋಟಿ ಕೋಟಿ ಸ್ವತಂತ್ರ್ಯ ಹೋರಾಟಗಾರರನ್ನೂ ಬಳಸುವ, ಬೈಯ್ಯುವ, ರಾಷ್ಟ್ರಗೀತೆ, ಧ್ವಜ, ಲಾಂಛನ, ಕವಿಗಳನ್ನೂ ಬಿಡದೆ ಕಬಳಿಸಿದ ದ್ವೇಷದ ದಲ್ಲಾಳಿಗಳು ಸಿನಿಮಾಗಳನ್ನೂ ಕಬಳಿಸುವ ಮುನ್ನ ಒಂದು ಕ್ಷಣ ಯೋಚಿಸಿ.

https://youtu.be/lLC_P0d_2kQ ಮಾರುಕಟ್ಟೆಗೆ ಕೃತಕ ಮಾಂಸ ! Watch out meat lovers!

ನಮ್ಮ ಸಿನಿಮಾಗಳು ನಮ್ಮ ಹೆಮ್ಮೆ. ಅವುಗಳನ್ನು ಧರ್ಮಾಂಧ ರಾಜಕಾರಣದ ದಾಳಗಳನ್ನಾಗಿ ಮಾಡುವುದು ಬೇಡ” ಎಂದು ಮನವಿ ಮಾಡಿದ್ದಾರೆ.
Exit mobile version