ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್ ರಾಹುಲ್‌ಗೆ 24 ಲಕ್ಷ ರೂ. ದಂಡ!

kannadiga

ಭಾನುವಾರ(Sunday) ಮುಂಬೈನ(Mumbai) ವಾಂಖೆಡೆ ಸ್ಟೇಡಿಯಂನಲ್ಲಿ(Wankhade Stadium) ನಡೆದ ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧದ ಟಾಟಾ ಐಪಿಎಲ್ 2022(Tata IPL 2022) ಪಂದ್ಯದಲ್ಲಿ ನಿಧಾನಗತಿಯ ವೇಗವನ್ನು ಕಾಯ್ದುಕೊಂಡಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್(Lucknow Super Giants)ನಾಯಕ ಕೆ.ಎಲ್ ರಾಹುಲ್(KL Rahul) ಅವರಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ರಾಹುಲ್ ಜೊತೆಗೆ ತಂಡದ ಇತರ ಸದಸ್ಯರಿಗೂ ತಲಾ 6 ಲಕ್ಷ ಅಥವಾ ಅವರ ಪಂದ್ಯ ಶುಲ್ಕದ 25 ಪ್ರತಿಶತ ದಂಡವನ್ನು ವಿಧಿಸಲಾಗಿದೆ. ಕೆ.ಎಲ್ ರಾಹುಲ್ ಭಾನುವಾರದಂದು ಲಕ್ನೋ ಸೂಪರ್ ಜೈಂಟ್ಸ್‌ಗೆ 36 ರನ್‌ಗಳ ಗೆಲುವಿಗೆ ನೀಡುವ ಮೂಲಕ ಈ ಸೀಸನ್‌ ನಲ್ಲಿ ತಮ್ಮ ಎರಡನೇ ಶತಕವನ್ನು ಬಾರಿಸಿದರು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸರಣಿ ಸೋಲಿಗೆ ಕಾರಣರಾದರು. ರಾಹುಲ್ ಔಟಾಗದೆ 103 ರನ್ ಗಳಿಸಿದರು. ಲಕ್ನೋ ತಂಡ 20 ಓವರ್‌ಗಳಲ್ಲಿ 168/6 ಗಳಿಸಿ ಮುಂಬೈಯನ್ನು 132/8 ಗೆ ನಿರ್ಬಂಧಿಸುವ ಮೂಲಕ ಗೆಲುವಿನ ಕೇಕೆ ಹಾಕಿತು.

ಲಕ್ನೋ 10 ಅಂಕಗಳೊಂದಿಗೆ ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಿಂದಿಕ್ಕಿ 4ನೇ ಸ್ಥಾನವನ್ನು ಅಲಂಕರಿಸಿದೆ. ಮುಂಬೈ ತನ್ನ ಮೊದಲ ಎಂಟು ಪಂದ್ಯಗಳಲ್ಲಿ ಜಯಗಳಿಸದೆ, ಈ ಬಾರಿಯ ಟಾಟಾ ಐಪಿಎಲ್ 15ನೇ ಆವೃತ್ತಿಯಲ್ಲಿ ಸೋಲಿನ ಕಂತೆಯನ್ನು ಹೊತ್ತು ತಿರುಗುತ್ತಿದೆ.

Exit mobile version