ಜನ ಹೆಚ್ಚಿನ ಸಂಖ್ಯೆಯಲ್ಲಿ ಬಳಸುವ ಕೋಲ್ಗೆಟ್ ಟೂತ್ ಪೇಸ್ಟ್ ಕಂಡುಹಿಡಿದವರು ಇವರೇ ನೋಡಿ

colgate

ಬೆಳಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಕುಡಿಯುವ ಬದಲು ಟೂತ್ ಪೇಸ್ಟ್(Tooth Paste) ಉಪಯೋಗಿಸಿಕೊಂಡು ಹಲ್ಲುಜ್ಜಿ ಬಾಯಿ ತೊಳೆದುಕೊಂಡು ಆನಂತರ ಏನಾದರೂ ಸೇವನೆ ಮಾಡುವುದು ಒಂದು ಆರೋಗ್ಯಕರವಾದ ಜೀವನ ಶೈಲಿ ಎಂದು ಹೇಳಬಹುದು.

ಏಕೆಂದರೆ ಇಡೀ ರಾತ್ರಿ ನಮ್ಮ ಬಾಯಿಯ ಒಳ ಭಾಗದಲ್ಲಿ ಬ್ಯಾಕ್ಟೀರಿಯಾ(Bacteria) ಹಾಗೂ ಇನ್ನಿತರ ರೋಗಕಾರಕ ಸೂಕ್ಷ್ಮಾಣುಗಳ ಬೆಳವಣಿಗೆ ಹೆಚ್ಚಾಗಿರುತ್ತದೆ. ಮತ್ತು ನಾವು ಬೆಳಗಿನ ಸಮಯದಲ್ಲಿ ಬಾಯಿ ತೊಳೆಯದೆ ಏನನ್ನಾದರೂ ತೆಗೆದುಕೊಂಡರೆ, ನಾವು ತಿನ್ನುವ ಆಹಾರದ ಜೊತೆಗೆ ಬ್ಯಾಕ್ಟೀರಿಯಾಗಳು ಕೂಡ ನಮ್ಮ ದೇಹ ಪ್ರವೇಶ ಮಾಡಿ, ಹಲ್ಲುಗಳಿಗೆ ಹಾಗೂ ವಸಡುಗಳಿಗೆ ತೊಂದರೆ ಉಂಟು ಮಾಡುತ್ತವೆ.

ಹಾಗಾಗಿ ಇದರಿಂದ ಹೊರಬರಲು ಒಳ್ಳೆಯ ಟೂತ್ಪೇಸ್ಟ್ ಬಳಕೆ ಮಾಡುವುದು ಅತ್ಯವಶ್ಯಕವಾಗಿದೆ. ಟೂತ್ ಪೇಸ್ಟ್ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಕೋಲ್ಗೆಟ್(Colgate). ಹೌದು, ನಮಗೆಲ್ಲ ತಿಳಿದಿರುವ ಹಾಗೆ ಕೋಲ್ಗೇಟ್ ಕಂಪನಿ ನಾವು ಹುಟ್ಟುವ ಮುಂಚಿನಿಂದಲೂ ಇರುವಂತಹ ಟೂತ್ ಪೇಸ್ಟ್ ಕಂಪನಿಯಾಗಿದೆ.

ಅಂದಿನಿಂದ ಇಂದಿನವರೆಗೆ ಗ್ರಾಹಕರ(Customers) ಬಳಿ ಅದೇ ಹೆಸರನ್ನು ಮತ್ತು ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಟೂತ್ ಪೇಸ್ಟ್ ಅನ್ನು ಅಮೈನೋ ಶಕ್ತಿ ಉಪಯೋಗಿಸಿ ತಯಾರು ಮಾಡಲಾಗಿದೆ. ನೈಸರ್ಗಿಕವಾದ ಕ್ಯಾಲ್ಸಿಯಂ ಅಂಶವನ್ನು ನಿಮ್ಮ ಹಲ್ಲುಗಳಿಗೆ ನೀಡುವಲ್ಲಿ ಇದು ಯಶಸ್ವಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಚಿಕ್ಕವಯಸ್ಸಿನಿಂದಲೂ ಹುಳುಕು ಹಲ್ಲು ಸಮಸ್ಯೆ ಇರುವ ಜನರಿಗೆ ಇದು ಬೆಸ್ಟ್ ಟೂತ್ ಪೇಸ್ಟ್ ಎಂಬ ಮಾತಿದೆ. ಈ ಪೇಸ್ಟ್ ಬಳಸಿ ನಿಮ್ಮ ಹಲ್ಲುಗಳನ್ನು ದಿನದಲ್ಲಿ ಎರಡು ಬಾರಿ ಉಜ್ಜುವುದರಿಂದ, ಕೇವಲ ಹಲ್ಲುಗಳು ಬೆಳ್ಳಗಾಗುವುದು ಮಾತ್ರವಲ್ಲದೆ, ಹುಳುಕು ಹಲ್ಲು ಮತ್ತು ಸೂಕ್ಷ್ಮಾಣುಗಳ ನಿವಾರಣೆ ಉಂಟಾಗುತ್ತದೆ.

ಇದರ ನಿರಂತರ ಬಳಕೆಯಿಂದ ವಯಸ್ಸಾದ ಮೇಲೂ ಕೂಡ ಹಲ್ಲುಗಳು ಗಟ್ಟಿಯಾಗಿ ಇರಲು ಮತ್ತು ಯಾವುದಾದರೂ ಗಟ್ಟಿ ಪದಾರ್ಥವನ್ನು ಸುಲಭವಾಗಿ ಜಗಿಯಲು ಅನುಕೂಲವಾಗುತ್ತದೆ. ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಕೋಲ್ಗೆಟ್ ಟೂತ್ ಪೇಸ್ಟ್ ಅನ್ನು ಕಂಡುಹಿಡಿದವರು ಯಾರು ಎಂದು ಯೋಚಿಸಿದ್ದೀರಾ?

ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಕೋಲ್ಗೆಟ್ ಟೂತ್ ಪೇಸ್ಟ್ ನ್ನು ಕಂಡುಹಿಡಿದವರು ‘ವಿಲಿಯಂ ಕೋಲ್ಗೇಟ್’ ಇವರ ಜನನ ಜನವರಿ 25, 1783 ಹಾಗೂ ಮರಣ ಮಾರ್ಚ್ 25, 1857 ರಂದು ಸಂಭವಿಸಿತು. ಇವರು ಒಬ್ಬ ಇಂಗ್ಲಿಷ್-ಅಮೇರಿಕನ್ ಸೋಪ್ ಕೈಗಾರಿಕೋದ್ಯಮಿಯಾಗಿದ್ದು, ಅವರು 1806 ರಲ್ಲಿ ಸ್ಥಾಪಿಸಿದ್ದೇ ಕೋಲ್ಗೇಟ್-ಪಾಮೋಲಿವ್ ಕಂಪನಿ. ಈ ಕಂಪನಿಯ ಉತ್ಪನ್ನವೇ ಜನರ ಮನೆಮಾತಾಗಿರುವ ಕೋಲ್ಗೆಟ್ ಟೂತ್ ಪೇಸ್ಟ್.

Exit mobile version