ಪ್ರವಾಸಿಗರ ಕಣ್ಮನ ಸೆಳೆಯುವ ಕುಂದಾಬೆಟ್ಟ ; ಈ ಪ್ರೇಕ್ಷಣೀಯ ಸ್ಥಳ ಯಾವ ಜಿಲ್ಲೆಯಲ್ಲಿದೆ ಗೊತ್ತಾ?

ಬಹು ಪ್ರೇಕ್ಷಣೀಯ ಸ್ಥಳಗಳಲ್ಲಿ ನಮ್ಮ ಮನಸಿಗೆ ಹತ್ತಿರವಾಗುವುದು ಕೆಲವೇ ಕೆಲ ಸುಂದರ ತಾಣಗಳು ಮಾತ್ರ. ಈ ಸಾಲಿಗೆ ಸೇರುವ ಅನೇಕ ಸುಂದರ ಬೆಟ್ಟಗಳಲ್ಲಿ ಕುಂದಾಬೆಟ್ಟವು ಕೂಡ ಒಂದಾಗಿದೆ.
ಕೊಡಗು ಜಿಲ್ಲೆಯಲ್ಲಿರುವ ಕುಂದಾಬೆಟ್ಟವೂ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಪ್ರಮುಖವಾದದ್ದು. ಪ್ರತಿ ಬೆಟ್ಟವು ಕೂಡ ಒಂದಲ್ಲ ಒಂದು ರೀತಿ ತನ್ನದೇ ಆದ ವಿಶೇಷ ಸ್ಥಾನಮಾನವನ್ನು ಹೊಂದಿದೆ. ಅದರಲ್ಲಿ ಈ ಕುಂದಾಬೆಟ್ಟವು ಕೂಡ ಒಂದಾಗಿದೆ. ಈ ಕುಂದಾಬೆಟ್ಟವು ತನ್ನ ಅದ್ಭುತ ಸೌಂದರ್ಯದಿಂದ ಅನೇಕ ಪ್ರವಾಸಿಗರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ. ಅದರಲ್ಲೂ ಕೂಡ ಟ್ರೆಕಿಂಗ್ ಬರುವವರಿಗೆ ಈ ಬೆಟ್ಟವು ಯೋಗ್ಯವಾದ ಬೆಟ್ಟವಾಗಿದೆ. ಈ ಕುಂದಾಬೆಟ್ಟದ ಸುಂದರ ದೃಶ್ಯವನ್ನು ನೋಡಲು ಅದೆಷ್ಟೋ ದೂರದಿಂದ ಪ್ರೇಕ್ಷಕರು ಬರುತ್ತಾರೆ ಮತ್ತು ಈ ಬೆಟ್ಟದ ಸೌಂದರ್ಯವನ್ನು ವರ್ಣಿಸುತ್ತಾರೆ.


ಇಲ್ಲಿ ಕೇವಲ ಪ್ರವಾಸಿಗರು ಮಾತ್ರವಲ್ಲದೆ, ಟ್ರೆಕಿಂಗ್ಗೂ ಕೂಡ ಅನೇಕರು ಬರುತ್ತಾರೆ. ಬೆಟ್ಟ ಹತ್ತಿ ತಮ್ಮ ಅಮೂಲ್ಯವಾದ ಸಮಯವನ್ನು ಈ ಬೆಟ್ಟದಲ್ಲಿ ಕಳೆಯುತ್ತಾರೆ. ಈ ಬೆಟ್ಟವು ಕೊಡಗು ಜಿಲ್ಲೆಯ ಮಡಿಕೇರಿ ಇಂದ 60 ಕಿ.ಮೀ ದೂರದಲ್ಲಿದೆ. ಈ ಬೆಟ್ಟವು ಕೊಡಗಿನಲ್ಲೇ ಬಹಳ ಸುಂದರ ಬೆಟ್ಟ ಎಂದೇ ಹೇಳಬಹುದು. ಈ ಬೆಟ್ಟವನ್ನು ‘ಕುಂದ್’ ಬೆಟ್ಟ ಎಂದು ಕೂಡ ಕರೆಯುತ್ತಾರೆ. ಕುಂದ್ ಎಂದರೆ ಬೆಟ್ಟ ಎಂಬ ಅರ್ಥವನ್ನು ನೀಡುತ್ತದೆ. ಅದರಲ್ಲೂ ಕೂಡ ಈ ಕುಂದಾಬೆಟ್ಟದಲ್ಲಿನ ಪರಿಸರ, ಪರಿಶುದ್ಧವಾದ ಗಾಳಿ, ಎಲ್ಲೆಲ್ಲೂ ಕಾಣಸಿಗುವ ಹಸಿರು, ಆವರಿಸಿರುವ ವಾತಾವರಣ, ನಿಶ್ಯಬ್ದ ತುಂಬಿದ ಪರಿಸರ, ಬೆಟ್ಟ ಹತ್ತಿದ ನಂತರ ದೂರದಲ್ಲಿ ಕಾಣುವ ಪರ್ವತಶ್ರೇಣಿಗಳು ಹಾಗೆ ಕಾಫಿ ತೋಟಗಳು ಮತ್ತು ಆ ಗ್ರಾಮದ ಗದ್ದೆಗಳು, ಹೀಗೆ ಅನೇಕ ರೀತಿಯ ಸುಂದರ ನೋಟಗಳು ಪ್ರವಾಸಿಗರು ಹಾಗೂ ಟ್ರೆಕ್ಕಿಂಗ್ ಬರುವವರಿಗೆ ಇನ್ನಷ್ಟು ಉತ್ಸಾಹವನ್ನು ಒದಗಿಸುತ್ತದೆ.

ಕುಂದಾಬೆಟ್ಟವು ಒoದು ಚಿಕ್ಕ ಬೆಟ್ಟವಾದರೂ ಕೂಡ ಅಲ್ಲಿನ ಬೆಟ್ಟ ಮತ್ತು ಅಲ್ಲಿರುವ ದೇವಾಲಯವನ್ನು ವೀಕ್ಷಿಸಲು ಬೇರೆ ಬೇರೆ ಊರಿನಿಂದ ಅನೇಕ ಪ್ರವಾಸಿಗರು ಬರುತ್ತಾರೆ. ಈ ಬೆಟ್ಟದ ತುದಿಯಲ್ಲಿ ಶಿವನ ದೇವಾಲಯವಿದೆ. ಆ ಶಿವನ ದೇವಾಲಯವು ಅತ್ಯಂತ ಪುರಾತನ ಮತ್ತು ಪ್ರೇಕ್ಷಣೀಯ ಸ್ಥಳವಾಗಿದೆ. ಈ ಕುಂದಾಬೆಟ್ಟವನ್ನು ಹತ್ತುವವರೆಗೂ ಕೂಡ ಈ ಬೆಟ್ಟದ ಸೌಂದರ್ಯವನ್ನು ಸವಿಯುತ್ತಲೇ ಹೋಗಬಹುದು. ಈ ಬೆಟ್ಟದಲ್ಲಿ ಸೂರ್ಯ ಉದಯಿಸುವ ದೃಶ್ಯ ನೋಡಲು ಬಹಳ ಸುಂದರವಾಗಿರುತ್ತದೆ. ಈ ಕುಂದಾಬೆಟ್ಟವು ಬೆಟ್ಟವೂ ಹೌದು ಹಾಗೆಯೇ ದೇವಾಲಯವೂ ಕೂಡ ಹೌದು. ಈ ಕುಂದಾಬೆಟ್ಟವು ಕೇವಲ ಬೆಟ್ಟವಾಗಿ ಮಾತ್ರ ಉಳಿದಿಲ್ಲ. ಇದು ಪುರಾತನ ಪವಿತ್ರ ದೇವಾಲಯವೂ ಕೂಡ ಆಗಿದೆ.

ಇಲ್ಲಿ ಈಶ್ವರ ದೇವಾಲಯ, ಭೀಮನಕಲ್ಲು, ದೇರಟೆಕಲ್ಲು, ನರಿಗುಡ್ಡೆ, ಮೊಟ್ಲಪ್ಪು, ಮುಂತಾದ ಅನೇಕ ದೇವಾಲಯಗಳಿವೆ. ಇಲ್ಲಿರುವ ಈಶ್ವರ ದೇವಾಲಯವು ಅತ್ಯಂತ ಪುರಾತನ ಕಾಲದಾಗಿದ್ದು, ಇದು ತನ್ನದೇ ಆದ ವೈಶಿಷ್ಟ್ಯತೆಯನ್ನು ಒಳಗೊಂಡಿದೆ. ಈ ಬೆಟ್ಟದ ಗ್ರಾಮದ ಜನರೆಲ್ಲಾ ಈಶ್ವರ ದೈವ ನಮ್ಮ ಗ್ರಾಮವನ್ನು ಕಾಯುತ್ತಿದ್ದಾನೆ ಎಂಬ ನಂಬಿಕೆಯಿಟ್ಟಿದ್ದಾರೆ. ಈ ಗ್ರಾಮದ ಜನರಿಗೆ ಅದೆಷ್ಟೇ ಸಮಸ್ಯೆ ಬಂದರು ಕೂಡ ಅದನ್ನು ಕುಂದಾಬೆಟ್ಟದ ಮೇಲೆ ನೆಲೆಸಿರುವ ಈಶ್ವರನೇ ಕಾದು ಸಲಹುತ್ತಾನೆ ಎಂಬ ಅಪಾರ ವಿಶ್ವಾಸ ಅಲ್ಲಿನ ಜನರಿಗಿದೆ. ಈ ದೇವಾಲಯದ ಮುಂದೆ ಒಂದು ದೊಡ್ಡ ಬಂಡೆಯಿದೆ. ಆ ಬಂಡೆಯ ಮೇಲೆ ಒಂದು ಚಿಕ್ಕ ಕಲ್ಲಿದೆ. ಆ ಕಲ್ಲಿನ ಮೇಲೆ ನಿಂತು ಮೂರು ಭಾರಿ ಪ್ರದಕ್ಷೀಣೆ ಹಾಕಿದರೆ, ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತದೆ. ಎಂಬ ನಂಬಿಕೆ ಇಲ್ಲಿನ ಜನರಿಗಿದೆ.


ಈ ಕಲ್ಲಿನ ಮೇಲೆ ಸುಬ್ರಹ್ಮಣ್ಯ ಸ್ವಾಮಿಯ ವಾಹನವಾದ ನವಿಲು ನಾಟ್ಯ ಮಾಡುತ್ತಿತ್ತು ಎಂದು ಅಲ್ಲಿನ ಜನರು ಹೇಳುತ್ತಾರೆ. ಆದ್ದರಿಂದ ಇದನ್ನು ದೇರಟೆಕಲ್ಲು ಎಂದು ಕೂಡ ಹೇಳುತ್ತಾರೆ. ಈ ಕುಂದಾಬೆಟ್ಟದಲ್ಲಿ ಪ್ರತಿವರ್ಷ ನಡೆಸುವ ತುಲಸಂಕ್ರಮಣದ ಮಾರನೇ ದಿನ ಈ ಬೆಟ್ಟದಲ್ಲಿ ಜಾತ್ರೆಯನ್ನು ಮಾಡುತ್ತಾರೆ. ಇಲ್ಲಿಗೆ ಗ್ರಾಮದ ಜನರು ಮಾತ್ರವಲ್ಲದೆ ಬೇರೆ ಬೇರೆ ಊರಿನ ಪ್ರವಾಸಿಗರೆಲ್ಲ, ಆ ಬೆಟ್ಟದ ಜಾತ್ರೆಯ ಸೌಂದರ್ಯ ಸವೆಯಲು ಬರುತ್ತಾರೆ. ಈ ಕುಂದಾಬೆಟ್ಟದ ಜಾತ್ರೆಯನ್ನು ಕುದುರೆ ಜಾತ್ರೆ ಎಂದು ಕೂಡ ಕರೆಯುತ್ತಾರೆ.

ಕೊಡಗಿನ ಈ ಕುಂದಾಬೆಟ್ಟವನ್ನು ಪ್ರಕೃತಿಪ್ರಿಯರು ತುಂಬಾನೇ ಪ್ರೀತಿಸುತ್ತಾರೆ. ಈ ಕುಂದಾಬೆಟ್ಟವನ್ನು ವೀಕ್ಷಿಸುವ ಜನರು ತಮ್ಮನ್ನು ತಾವೇ ಮರೆಯುತ್ತಾರೆ. ಅಷ್ಟು ಸುಂದರವಾಗಿದೆ ಈ ಕುಂದಾಬೆಟ್ಟ. ಈ ಬೆಟ್ಟಕ್ಕೆ ಸಾಗುವುದೆಂದರೆ ಅದೆಷ್ಟೋ ಜನರಿಗೆ ಬಹಳ ಆನಂದವಾಗುತ್ತದೆ. ಈ ಕುಂದಾಬೆಟ್ಟವು ತನ್ನದೇ ಅದ ಸೌಂದರ್ಯ ಮತ್ತು ವಿಶೇಷತೆಯನ್ನು ಒಳಗೊಂಡಿದ್ದು, ಇದು ಪವಿತ್ರ ದೈವಿಕ ತಾಣವು ಕೂಡ ಆಗಿದೆ. ಇದು ಪ್ರವಾಸಿಗರಿಗೆ ಮತ್ತು ಟ್ರೆಕಿಂಗ್ ಬರುವವರಿಗೆ ಈ ಕುಂದಾಬೆಟ್ಟವು ಉತ್ತಮವಾಗಿದೆ. ಹಸಿರ ರಾಶಿಯ ರಮಣಿಯ ಸೌಂದರ್ಯಕ್ಕೆ ದೃಷ್ಟಿ ಬೊಟ್ಟಿನಂತೆ ಗೋಚರಿಸುವ ಬೆಟ್ಟವನ್ನು ನೋಡೋ ಆಸೆ ನಿಮ್ಮದಾಗಿದ್ದರೇ ಈ ಕೂಡಲೇ ಭೇಟಿ ನೀಡಿ ಕೊಡಗಿನ ಕುಂದಾಬೆಟ್ಟಕ್ಕೆ.

Exit mobile version