Sports News : 2023ರ ವಿಶ್ವಕಪ್ ಈ ವರ್ಷ ಭಾರತದಲ್ಲಿ ನಡೆಯಲಿದೆ ಐಸಿಸಿ ಯು(Kohlis birthday day WorldCup) ಇದರ ವೇಳಾಪಟ್ಟಿಯನ್ನು ಈಗಾಗಲೇ ಹಂಚಿಕೊಂಡಿದೆ. ಇದರೊಂದಿಗೆ ಟೀಂ ಇಂಡಿಯಾ
(Team India) ವಿಶ್ವಕಪ್ ಲೀಗ್ ಹಂತದಲ್ಲಿ ಆಡಲಿರುವ 9 ಪಂದ್ಯಗಳ ಬಗ್ಗೆಯೂ ಚಿತ್ರಣ ಸ್ಪಷ್ಟವಾಗಿದೆ. ಭಾರತವು ದೇಶದ ವಿವಿಧ ನಗರಗಳಲ್ಲಿ 9 ಪಂದ್ಯಗಳನ್ನು ಆಡಲಿದೆ.

ಆದರೆ ಟೀಂ ಇಂಡಿಯಾ ಅಭಿಮಾನಿಗಳಿಗೆ ಕೋಲ್ಕತ್ತಾದ (Kolkata) ಈಡನ್ ಗಾರ್ಡನ್ಸ್ನಲ್ಲಿ ನವೆಂಬರ್ 5 ರಂದು ನಡೆಯಲಿರುವ ಪಂದ್ಯ ಬಹಳ ವಿಶೇಷವಾಗಿದೆ. ಏಕೆಂದರೆ ಭಾರತ ಕ್ರಿಕೆಟ್ ತಂಡದ
ನಾಯಕ ವಿರಾಟ್ ಕೊಹ್ಲಿ (Virat Kohli) ಅಂದು ಅಂದರೆ ನವೆಂಬರ್ 5 ರಂದು ತಮ್ಮ 35ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅಂದು ನಡೆಯುವ ವಿಶ್ವಕಪ್ ಪಂದ್ಯ ಹೀಗಾಗಿ ಕೊಹ್ಲಿ ಪಾಲಿಗೆ ಅವಿಸ್ಮರಣೀಯವೆನಿಸಲಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಟೀಂ ಇಂಡಿಯಾ ತಂಡ ಕೊಹ್ಲಿ ಹುಟ್ಟು ಹಬ್ಬದಂದು ದಕ್ಷಿಣ ಆಫ್ರಿಕಾ (South Africa) ತಂಡವನ್ನು ಎದುರಿಸಲಿದೆ. ಐಸಿಸಿ ಈವೆಂಟ್ವೊಂದರಲ್ಲಿ ಇದರೊಂದಿಗೆ ಸತತ
ಮೂರನೇ ವರ್ಷ ಕೊಹ್ಲಿ ತಮ್ಮ ಹುಟ್ಟುಹಬ್ಬವನ್ನು (Kohlis birthday day WorldCup) ಆಚರಿಸಿಕೊಳ್ಳಲಿದ್ದಾರೆ.

ಭಾರತ ತಂಡ ಜಿಂಬಾಬ್ವೆಯನ್ನು(Zimbabwe) ಮೆಲ್ಬೋರ್ನ್ ಮೈದಾನದಲ್ಲಿ ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಜನ್ಮದಿನದಂದು ಎದುರಿಸಿತ್ತು. ಅದಕ್ಕೂ ಮೊದಲು ಕೊಹ್ಲಿಯ ಜನ್ಮದಿನದಂದು
2021 ರ ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್‌ಲ್ಯಾಂಡ್ ತಂಡವನ್ನು ಭಾರತವು ಎದುರಿಸಿತ್ತು.

ಈ ಹಿಂದೆ 2011ರ ವಿಶ್ವಕಪ್ ವಿಜೇತ ಕೊಹ್ಲಿ ಭಾರತ ತಂಡದ ಭಾಗವಾಗಿದ್ದರು.ಅಲ್ಲದೆ ಕೊಹ್ಲಿ ಈ ವಿಶ್ವಕಪ್‌ನಲ್ಲಿ ಕಣಕ್ಕಿಳಿಯವುದರೊಂದಿಗೆ ಕೊಹ್ಲಿ, ನವಜೋತ್ ಸಿಂಗ್ ಸಿದ್ದು, ಮನೋಜ್ ಪ್ರಭಾಕರ್,
ಮೊಹಮ್ಮದ್ ಅಜರುದ್ದೀನ್, ಮತ್ತು ಸಚಿನ್ ತೆಂಡೂಲ್ಕರ್ ನಂತರ ಮಾರ್ಕ್ಯೂ ಈವೆಂಟ್ ಆಡಿದ ಐದನೇ ಭಾರತೀಯ ಎಂಬ ಇತಿಹಾಸವನ್ನು ರಚಿಸಲಿದ್ದಾರೆ.

ಇನ್ನು ವಿರಾಟ್ ಕೊಹ್ಲಿಗೆ ಈ ಬಾರಿಯ ವಿಶ್ವಕಪ್ ಬಹಳ ವಿಶೇಷವಾಗಿದ್ದು, ಟೀಂ ಇಂಡಿಯಾ ವಿರಾಟ್ ಕೊಹ್ಲಿಗಾಗಿ ಏಕದಿನ ವಿಶ್ವಕಪ್ ಗೆಲ್ಲಬೇಕು ಎಂಬ ಹೇಳಿಕೆಯನ್ನು ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವಿರೇಂದ್ರ
ಸೆಹ್ವಾಗ್ ವಿಶ್ವಕಪ್ ಆರಂಭಕ್ಕೂ ಮುನ್ನವೇ ನೀಡಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಪರ ತನ್ನ ಜನ್ಮದಿನದಂದು ಸ್ಮರಣೀಯ ಇನ್ನಿಂಗ್ಸ್ ಆಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಪಾಕ್ ನಾಯಕ ಬಾಬರ್ ಆಜಮ್ ಕೂಡ ಇದೇ ವಿಶ್ವಕಪ್‌ನಲ್ಲಿ ತಮ್ಮ 29ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಪಾಕ್ ತಂಡ ಭಾರತವನ್ನು ಅಹಮದಾಬಾದ್‌ನ ನರೇಂದ್ರ ಮೋದಿ
ಕ್ರೀಡಾಂಗಣದಲ್ಲಿ ಅವರ ಜನ್ಮದಿನದಂದೇ (ಅಕ್ಟೋಬರ್ 15) ಎದುರಿಸಲಿದೆ.
ರಶ್ಮಿತಾ ಅನೀಶ್