ಕೆಪಿಸಿಸಿ ಯುವ ಅಧ್ಯಕ್ಷರಾಗಿ ನಲಪಾಡ್ ಅಧಿಕಾರ ಸ್ವೀಕಾರ!

nalpad

KPCC ಯೂತ್ ಕಾಂಗ್ರೆಸ್ನ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ ಇಂದು ಅಧಿಕಾರ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರಿಸಬೇಕಿದ್ದ ರಕ್ಷಾ ರಾಮಯ್ಯು ಗೈರಾಗಿದ್ದು, ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾಯಿತು. ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಿಚಾರವಾಗಿ ನಲಪಾಡ್ ಹಾಗೂ ರಕ್ಷಾ ರಾಮಯ್ಯ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ನಲಪಾಡ್ ಹೆಚ್ಚಿನ ಮತ ಬಂದಿದ್ದರೂ ಅಧ್ಯಕ್ಷ ಸ್ಥಾನ ಸಿಕ್ಕಿರಲಿಲ್ಲ.

ಭಾರೀ ಮತಗಳಿಕೆ ಹಿಂದೆ ಮೊಹಮ್ಮದ್ ನಲಪಾಡ್ ಗೆಳೆಯ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಭಟ್ ಕೈವಾಡ ಇರುವ ಗುಮಾನಿಯೂ ಇತ್ತು. ಹ್ಯಾಕ್ ಮಾಡಿ ನಕಲಿ ಮತದಾನ ಮಾಡಲಾಗಿದೆ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಈ ಬಗ್ಗೆ ಗಂಭೀರವಾದ ಚರ್ಚೆಗಳು ನಡೆದಿದ್ದವು. ಇನ್ನೊಂದೆಡೆ ನಲಪಾಡ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ರಕ್ಷಾ ರಾಮಯ್ಯಗೆ ಅಧಿಕಾರ ನೀಡಲು ನಿರ್ಧಾರ ಮಾಡಿದ್ದರು. ಇದೀಗ ಕೊನೆಗೂ ನಲಪಾಡ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.


ಜ 31ರಂದು ಆಯ್ಕೆ ಇಂದು ಅಧಿಕಾರ ಸ್ವೀಕಾರ : ಜ31 ರಂದು ಸೋಮವಾರ ನಲಪಾಡ್ ಅವರನ್ನು ಆಯ್ಕೆ ಮಾಡಿದ್ದ ಕಾಂಗ್ರೆಸ್, ಮಂಗಳವಾರ ಅಮಾವಾಸ್ಯೆ ಇದೆ. ಹಾಗಾಗಿ ಇಂದೇ ಕಚೇರಿ ಪೂಜೆ ಮಾಡಿದ್ದೇವೆ. ಫೆಬ್ರವರಿ 10 ರಂದು ಅಧಿಕೃತವಾಗಿ ಅಧಿಕಾರ ಹಸ್ತಾಂತರವಿದೆ. ಕೆಪಿಸಿಸಿ ಕಚೇರಿಯಲ್ಲೇ ಮಾಡಿಕೊಳ್ತೇನೆ ಎಂದರು. ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕುರಿತಾಗಿ ಎಐಸಿಸಿಯಿಂದಲೂ ಅಧಿಕೃತ ಆದೇಶವಿದೆ. ರಕ್ಷಾ ರಾಮಯ್ಯ ಅನುಮತಿ ಮೇಲೆಯೇ ಪೂಜೆ ಮಾಡಿದ್ದೇನೆ. ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುತ್ತೇನೆ ಎಂದು ಅವರು ತಿಳಿಸಿದರು.


ರಕ್ಷಾ ರಾಮಯ್ಯಗೆ ರಾಷ್ಟ್ರೀಯ ಜವಾಬ್ದಾರಿ ? ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ವಿಚಾರದಲ್ಲಿ ಒಲ್ಲದ ಮನಸ್ಸಿನಿಂದಲೇ ಅರ್ಧ ಭಾಗ ಅಧಿಕಾರ ನಡೆಸಿ ಹುದ್ದೆ ಬಿಟ್ಟುಕೊಟ್ಟು ಬೇಸರದಲ್ಲಿರುವ ರಕ್ಷಾ ರಾಮಯ್ಯ ಅವರನ್ನು ಕೇಂದ್ರ ಸಮಿತಿಗೆ ಪದನ್ನೋತಿ ನೀಡಲು ಪಕ್ಷ ಮುಂದಾಗಿದೆ.

Exit mobile version