ಇಳಿಜಾರಿನಲ್ಲಿದ್ದೂ ಒಂದಿಂಚೂ ಕದಲದೇ ನಿಂತಿರುವ ವಿಸ್ಮಯಕಾರಿ ಕೃಷ್ಣನ ಬೆಣ್ಣೆ ಬಂಡೆ ; ಇದು ಎಲ್ಲಿದೆ ಗೊತ್ತಾ?

KRISHNA

ಕೃಷ್ಣನ ಬಂಡೆ(Butter Ball) ಎಂದೇ ಪ್ರಸಿದ್ಧವಾಗಿರುವ, ಸುಮಾರು 15 ಅಡಿಗಳಷ್ಟು ಎತ್ತರದಲ್ಲಿರುವ ಈ ಬಂಡೆಯು ಗುರುತ್ವಾಕರ್ಷಣೆಗೆ(Gravitational Force) ಸವಾಲೆಸೆದು ಹಲವಾರು ವರ್ಷಗಳಿಂದ ಅಲ್ಲಿಯೇ ಸ್ಥಿರವಾಗಿ ನಿಂತಿದೆ. ದಂತ ಕಥೆಗಳ ಪ್ರಕಾರ ಶ್ರೀ ಕೃಷ್ಣ(Lord Krishna) ಕದಿಯುತ್ತಿದ್ದ ಬೆಣ್ಣೆಯ ಮುದ್ದೆಯ ಸಂಗ್ರಹವೇ ಈ ಬಂಡೆ ಎಂದು ಹೇಳುತ್ತಾರೆ. ಹಾಗಾಗಿಯೇ ಇದನ್ನು ಶ್ರೀ ಕೃಷ್ಣನ ಬಂಡೆ ಎಂದು ಕರೆಯುತ್ತಾರೆ.

ಈ ಆಚ್ಚರಿಯ ಬಂಡೆ ಇರುವುದು ತಮಿಳುನಾಡಿನ(Tamilnadu) ಚೆನ್ನೈ(Chennai) ಬಳಿಯಿರುವ ಮಹಾಬಲಿಪುರಂನಲ್ಲಿ(Mahabalipuram), ಸಾವಿರಾರು ವರ್ಷಗಳಿಂದಲೂ ಈ ಬಂಡೆ ಇಲ್ಲಿಯೇ ನೆಲೆಸಿದೆ ಎಂದು ಕೆಲವರು ಹೇಳುತ್ತಾರೆ. ಹಿಂದೂ ಪುರಾಣಗಳ ಪ್ರಕಾರ, ಕೃಷ್ಣ ಮಗುವಾಗಿದ್ದಾಗ ಬೆಣ್ಣೆಯನ್ನು ಕದಿಯಲು ಇಷ್ಟಪಡುತ್ತಿದ್ದನು. ಈ ಕಾರಣದಿಂದಾಗಿ ದೊಡ್ಡ ಬೆಣ್ಣೆ ಕಲ್ಲನ್ನು ದೇವರು ಭೂಮಿಗೆ ಹಾಕಿದನು, ಹಾಗಾಗಿ ಇದನ್ನು ಕೃಷ್ಣನ ಬಟರ್ ಬಾಲ್ ಎಂದು ಕರೆಯಲಾಗುತ್ತದೆ. ಕೃಷ್ಣನ ಬೆಣ್ಣೆ ಚೆಂಡು ಇರುವ ಸ್ಥಳ ಈಗ ಜನಪ್ರಿಯ ಪ್ರವಾಸಿ ತಾಣವಾಗಿದೆ.

ಜಾರು ಕಲ್ಲಿನ ಇಳಿಜಾರನ್ನು ಸ್ಥಳೀಯ ಮಕ್ಕಳು ಸ್ಲೈಡ್‌ನಂತೆ ಬಳಸುತ್ತಾರೆ, ಈ ಸ್ಥಳಕ್ಕೆ ಭೇಟಿ ನೀಡುವವರು ಕಲ್ಲಿನ ಹಿಂದೆ ಹೋಗಿ ಅದನ್ನು ಬೆಟ್ಟದ ಕೆಳಗೆ ತಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಇಲ್ಲಿಯವರೆಗೆ ಯಾರಿಗೂ ಕೂಡ ಬೆಣ್ಣೆಯ ಬಂಡೆಯನ್ನು ಒಂದಿಂಚೂ ಸರಿಸಲೂ ಸಾಧ್ಯವಾಗಿಲ್ಲ! ಈ ಬಂಡೆ 20 ಅಡಿ ಎತ್ತರ ಮತ್ತು 5 ಮೀಟರ್ ಅಗಲವಾಗಿದ್ದು, ಬರೋಬ್ಬರಿ 250 ಟನ್‌ಗಳಷ್ಟು ಭಾರವನ್ನು ಹೊಂದಿದೆ. ಈ ಬಂಡೆಯು ಬೆಟ್ಟದ ಇಳಿಜಾರಿನಲ್ಲಿ 4 ಅಡಿಗಿಂತಲೂ ಕಡಿಮೆ ತಳದಲ್ಲಿದೆ. ನಮಗೆಲ್ಲ ತಿಳಿದಿರುವಂತೆ ಇಳಿಜಾರು ಪ್ರದೇಶದಲ್ಲಿ ಯಾವುದೇ ವಸ್ತುವಿದ್ದರೂ ಅದು ಸ್ವಾಭಾವಿಕವಾಗಿ ಕೆಳಗೆ ಜಾರುತ್ತದೆ, ಇದು ಗುರುತ್ವಾಕರ್ಷಣೆಯ ಬಲದಿಂದಲೂ ಆಗಿರಬಹುದು.

ಆದರೆ ಕೃಷ್ಣನ ಬಂಡೆ ಎಂದೇ ಜನರು ವರ್ಷಗಳಿಂದ ನಂಬಿಕೊಂಡು ಬರುತ್ತಿರುವ ಈ ಬಂಡೆ ಮಾತ್ರ ಇಳಿಜಾರಲ್ಲಿ ಸ್ಥಿರವಾಗಿ ನಿಂತಿದೆ.
ಬಂಡೆಯು ನಿಂತಿರುವ ಸ್ಥಾನವು ಎಷ್ಟು ಆಶ್ಚರ್ಯಕರವಾಗಿದೆಯೆಂದರೆ ಅದು ಇಳಿಜಾರಿನಲ್ಲಿ ಕೆಳಗೆ ಉರುಳುತ್ತಿದೆ ಎಂದೇ ಅನಿಸುತ್ತದೆ. ಆದರೆ, ಬಂಡೆ ಮಾತ್ರ ಇಳಿಜಾರಿನಲ್ಲಿಯೂ ಕದಲದೇ ದೃಢವಾಗಿ ನಿಂತಿದೆ. ದೇವಾಲಯಕ್ಕೆ ಆಗಮಿಸುವ ಪ್ರವಾಸಿಗರು ಬಂಡೆಯ ಅಡಿಯಲ್ಲಿಯೇ ವಿಶ್ರಾಂತಿ ಪಡೆಯುತ್ತಾರೆ. ಈ ಬಂಡೆ ಸುಮಾರು 1200 ವರ್ಷಗಳಷ್ಟು ಹಳೆಯದಾಗಿದ್ದು, ಸುನಾಮಿ, ಭೂಕಂಪಗಳು ಅಥವಾ ಚಂಡಮಾರುತಗಳು ಬಂದರೂ ಕದಲದೆ ಗಟ್ಟಿಯಾಗಿ ನಿಂತಿದೆ.

Exit mobile version