ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ(KSRTC) ಇನ್ಮುಂದೆ ಎಲೆಕ್ಟ್ರಿಕ್(Electric Bus) ಬಸ್‍ಗಳನ್ನು ರಸ್ತೆಗಿಳಿಸಲು ಹಲವು ತಯಾರಿ ಮಾಡಿಕೊಂಡಿದೆ.

ಹೌದು, ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಉಂಟಾದ ಇಂಧನ(Oil) ಬೆಲೆ ಏರಿಕೆ ಸಾರಿಗೆ ಇಲಾಖೆಗೂ ಭಾರಿ ಪ್ರಮಾಣದ ಹೊಡೆತ ನೀಡಿದೆ. ಡಿಸೇಲ್(Diesel) ಬೆಲೆ ಏರಿಕೆಯ ಹೊಡೆತದಿಂದ ಚೇತರಿಸಿಕೊಳ್ಳಲಾಗದ ಹಂತದಲ್ಲಿರುವ ಸಾರಿಗೆ ಇಲಾಖೆ ಹೊಸ ಅವಿಷ್ಕಾರದ ಮುಖೇನ ಪರ್ಯಾಯ ವ್ಯವಸ್ಥೆಗೆ ಹೊಂದಿಕೊಳ್ಳುವುದರ ಕುರಿತು ಯೋಚಿಸುತ್ತಿದೆ. ಬೆಂಗಳೂರಿನ(Bengaluru) ಮೆಜೆಸ್ಟಿಕ್(Majestic) ಬಸ್ ನಿಲ್ದಾಣದಿಂದ ರಾಜ್ಯ ಸಾರಿಗೆ ಸಂಸ್ಥೆಯ ಸುಸಜ್ಜಿತ ಇ-ಬಸ್‍ಗಳ ಸಂಚಾರವನ್ನು ಈ ಮಾರ್ಗಗಳಿಗೆ ಬಿಡಲು ಯೋಜಿಸಿದೆ.
ದಾವಣಗೆರೆ, ಚಿಕ್ಕಮಗಳೂರು, ಮಡಿಕೇರಿ, ವಿರಾಜಪೇಟೆ ಮತ್ತು ಮೈಸೂರು ಮಾರ್ಗಗಳಿಗೆ ಬಸ್‍ಗಳನ್ನು ಬಿಡಲು ನಿಗಮ ನಿರ್ಧರಿಸಿದೆ ಎನ್ನಲಾಗಿದೆ. ಈ ಹಿಂದೆಯೇ ಎಲೆಕ್ಟ್ರಿಕ್ ಬಸ್‍ಗಳು ಬೆಂಗಳೂರಿನಲ್ಲಿ ಸೇವೆ ಆರಂಭಿಸಿದೆ. ಆದ್ರೆ, ಬೆಂಗಳೂರು ಹೊರೆತುಪಡಿಸಿ ಇನ್ಯಾವ ನಗರಗಳಲ್ಲೂ ಇ-ಬಸ್ಗಳ ಸೇವೆ ಇರಲಿಲ್ಲ! ಸದ್ಯ ಈಗ ಸಾರಿಗೆ ಇಲಾಖೆ ಹೆಚ್ಚುವರಿ ಎಲೆಕ್ಟ್ರಿಕ್ ಬಸ್‍ಗಳನ್ನು ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೇವೆ ಆರಂಭಿಸಲು ಚಿಂತನೆ ನಡೆಸಿದೆ.

ಉದ್ದ ಮಾರ್ಗಗಳಾದ ಮೈಸೂರು, ಚಿಕ್ಕಮಗಳೂರು, ದಾವಣಗೆರೆಗೆ ಇ-ಬಸ್‍ಗಳನ್ನು ಸಂಚರಿಸಲು ಅನುಮತಿ ನೀಡುವುದರಿಂದ ಡಿಸೇಲ್ ಬೇಡಿಕೆ, ಅವಲಂಬನೆಯನ್ನು ತಪ್ಪಿಸಬಹುದು ಎಂಬುದು ಇಲಾಖೆಯ ಲೆಕ್ಕಾಚಾರ. ಈ ಬಸ್‍ಗಳು ಒಮ್ಮೆ ಚಾರ್ಚ್ ಮಾಡಿದರೆ 250-300 ಕಿ.ಮೀ ಪ್ರಯಾಣವನ್ನು ಮಾಡುತ್ತದೆ. ಹೀಗಾಗಿಯೇ ಇಲಾಖೆ ಈಗಾಗಲೇ ಈ ಯೋಜನೆ ರೂಪಿಸಿದ್ದು, ಇ-ಬಸ್‍ಗಳು ಸಂಸ್ಥೆಯನ್ನು ತಲುಪಿದ ನಂತರ ಅಧಿಕೃತವಾಗಿ ರಸ್ತೆಗೆ ಇಳಿಯಲಿವೆ.
ಹೈದ್ರಾಬಾದ್‍ನ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ಸಂಸ್ಥೆಯೊಂದಿಗೆ ಕೆಎಸ್‍ಆರ್‍ಟಿಸಿ ನಿಗಮವೂ ಸಹಭಾಗಿತ್ವದಲ್ಲಿ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.