ಯಾರೀತ ಸ್ಯಾಂಟ್ರೋ ರವಿ ? ಇವನಿಗೂ ಹಾಗೂ BJP ನಾಯಕರಿಗೆ ಇರುವ ಸಂಬಂಧವೇನು?

Bidar : ಸ್ಯಾಂಟ್ರೋ ರವಿ(Santro Ravi.). ಕಳೆದ ಕೆಲವು ದಿನಗಳಿಂದ ಭಾರೀ ಟ್ರೆಂಡಿಂಗ್‌ನಲ್ಲಿರೋ ಹೆಸರು. ಡಿವೈಎಸ್‌ಪಿ ಅರಗಜ್ಞಾನೇಂದ್ರ ಹಾಗೂ ಸ್ಯಾಂಟ್ರೋ (kumaraswamy statement) ರವಿಯ ಸಂಭಾಷಣೆ ಯಾವಾಗ ಬಹಿರಂಗವಾಯ್ತೋ ಆವತ್ತಿನಿಂದ ಈ ಸ್ಯಾಂಟ್ರೋ ರವಿಯ ಒಂದೊಂದೇ ಅವತಾರಗಳು ಬಯಲಾಗ ತೊಡಗಿವೆ.

ಈತನಿಗೂ ಬಿಜೆಪಿ ನಾಯಕರಿಗೂ ಇರೋ ಸಂಬಂಧಗಳು ಬೆಳಕಿವೆ ಬರುತ್ತಿವೆ.


ಯಾರೀ ಸ್ಯಾಂಟ್ರೀ ರವಿ. ಸ್ಯಾಂಟ್ರೋ ರವಿ ಮೂಲತಃ ಮೈಸೂರಿನವನು(Mysore). ವಯಸ್ಸು 52. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ, ಇವನ ತಂದೆ ಅಬಕಾರಿ ಇಲಾಖೆಯಲ್ಲಿ ಡಿವೈಎಸ್‌ಪಿ(DYSP) ಆಗಿದ್ದರು.

ಈತ ವೇಶ್ಯಾವಾಟಿಕೆ ದಂಧೆಯಲ್ಲಿ ಪಿಂಪ್ ಆಗಿ ಕೆಲಸ ಮಾಡುತ್ತಿದ್ದ. ಜೊತೆಗೆ ಈತ ಪತ್ರಕರ್ತ ಅಂತಲೂ ಹೇಳಿಕೊಳ್ಳುತ್ತಿದ್ದ.

ಅವನ ಬಳಿ ಪ್ರೆಸ್‌ ಐಡಿ ಕಾರ್ಡೂ ಇದೆ. ಈತ ತನ್ನ ಘನಂದಾರಿ ಕೆಲಸಗಳಿಂದ ಪ್ರಭಾವಿ ರಾಜಕಾರಣಿಗಳ ಸ್ನೇಹ ಬೆಳೆಸಿಕೊಂಡಿದ್ದ.


ಸ್ಯಾಂಟ್ರೋ ರವಿ ಜೊತೆಗೆ ಬಿಜೆಪಿ (BJP) ನಾಯಕರು ಹಾಗೂ ಸಚಿವರು ಇರುವ ಫೋಟೋ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಅರಗಜ್ಞಾನೇಂದ್ರ ನಿವಾಸದಲ್ಲಿ ಸ್ಯಾಂಟ್ರೋ ರವಿಯ ಕಂತೆ-ಕಂತೆ ಹಣ ಎಣಿಕೆ ಮಾಡುತ್ತಿರುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ(Kumaraswamy) ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : https://vijayatimes.com/kharge-statement-about-ram-mandir/

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಜನವರಿ 08 ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ,

ಜ್ಞಾನೇಂದ್ರರವರ(kumaraswamy statement) ಮನೆಯಲ್ಲಿ ಹಣದ ಲೆಕ್ಕ ಹಾಕುತ್ತಿರುವ ಫೋಟೋ ಹರಿದಾಡುತ್ತಿದೆ.

ಎಸಿಪಿ ವರ್ಗಾವಣೆ ಮಾಡಿಸಲು 15 ಲಕ್ಷ ಹಣ ಎಣಿಸುತ್ತಿದ್ದ ಈ ಫೋಟೋ ತೆಗೆದವರು ಯಾರು?

ಇದು ಗೃಹಸಚಿವರ ನಿವಾಸದಲ್ಲೇ ನಡೆದಿದೆ, ಅದಲ್ಲದೆ ಸಚಿವ ಸೋಮಶೇಖರ್ ಜೊತೆ ಸ್ಯಾಂಟ್ರೋ ರವಿ ವರ್ಗಾವಣೆ ಬಗ್ಗೆಯೂ ಚರ್ಚೆ ಮಾಡುತ್ತಿದ್ದ ಆ ವಿಡಿಯೋ ರೆಕಾರ್ಡ್ ನಾನು ಮಾಡಿಸಿದ್ದಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇಂತಹ ವಿಷಯ ಇಟ್ಟುಕೊಂಡು ರಾಜಕೀಯ ಮಾಡುವ ಕರ್ಮ ನನಗಿಲ್ಲ, ದಲ್ಲಾಳಿಗಳೇ ಸರ್ಕಾರದಲ್ಲಿ(Government) ಆಡಳಿತ ನಡೆಸುವ ದುಸ್ಥಿತಿಯನ್ನು,

ಸಿಎಂ ಸೃಷ್ಟಿ ಮಾಡಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ಕುಮಾರಕೃಪಾ ಹೊಸ ಕಟ್ಟಡದಲ್ಲಿ ಏನೆಲ್ಲಾ ನಡೆಯುತ್ತಿತ್ತು ಗೊತ್ತಾ? ಅಲ್ಲಿ ಉಸ್ತುವಾರಿಯಾಗಿದ್ದ ದೇವರಾಜು ಎನ್ನುವ ವ್ಯಕ್ತಿಯನ್ನು ಯಾಕೆ ಎತ್ತಂಗಡಿ ಮಾಡಿದರು?

ಸಿಎಂ ಹೆಚ್ಚುವರಿ ಕಾರ್ಯದರ್ಶಿ ಜಗದೀಶನ ಎತ್ತಂಗಡಿ ಯಾಕೆ ಆಯ್ತು? ಜಗದೀಶ್ಗೆ ಹೆಚ್ಚುವರಿ ಹೊಣೆ ಇತ್ತು, ಬೆಂಕಿ ಇಲ್ಲದೆ ಹೊಗೆ ಬರುತ್ತಾ? ನಿಮ್ಮ ತಂದೆಯವರು ನಿಮಗೆ ಹೇಳಿಕೊಟ್ಟಿದ್ದು ಇದೇನಾ ಬೊಮ್ಮಾಯಿ ಅವರೇ?

ನಿಮ್ಮ ತಂದೆ ರಾಯಿಸ್ಟ್ ಎಸ್.ಆರ್.ಬೊಮ್ಮಾಯಿರಿಂದ(Royest SR Bommai) ಕಲಿತದ್ದು ಇದೇನಾ ಮಿಸ್ಟರ್ ಬಸವರಾಜ್ ಬೊಮ್ಮಾಯಿರವರೇ? ಸ್ಯಾಂಟ್ರೋ ರವಿಯನ್ನು ಹಿಡಿಯುವುದು ಸರ್ಕಾರದ ಕೆಲಸ. ಎಲ್ಲಾ ನಾವೇ ಹೇಳುವುದಾದರೆ ಗೃಹ ಸಚಿವರು ಯಾಕೆ ಬೇಕು? ದಾಖಲೆ ಇದ್ದರೆ ಕೊಡಲಿ ಎನ್ನುತ್ತಾರೆ?

ಸ್ಯಾಂಟ್ರೋ ರವಿ ಹುಡುಕುತ್ತಿದ್ದೇವೆ ಎನ್ನುತ್ತಾರೆ. ಇಂತಹ ಪ್ರಕರಣವನ್ನು ಹಳ್ಳ ಹಿಡಿಸಲು ಇದಕ್ಕಿಂತ ಒಳ್ಳೆಯ ಉದಾಹರಣೆ ಇದೆಯಾ? ಎಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳನ್ನು ನೇರವಾಗಿ ಪ್ರಶ್ನಿಸಿದ್ದಾರೆ.

Exit mobile version