ಭಗವದ್ಗೀತೆಯನ್ನು(Bhagavadgitha) ಮಕ್ಕಳಿಗೆ ಕುಟುಂಬದಲ್ಲಿ ಹೇಳಿಕೊಡಲಿ. ಸರ್ಕಾರ ಇರುವುದು ಮಕ್ಕಳ ಭವಿಷ್ಯ(Future) ರೂಪಿಸಲು. ಹೀಗಾಗಿ ಮಕ್ಕಳಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುವಂತ ಶಿಕ್ಷಣ ನೀಡಲಿ ಎಂದು ಮಾಜಿ(Former) ಸಿಎಂ(CM) ಕುಮಾರಸ್ವಾಮಿಯವರು(HD Kumarswamy) ಹೇಳಿದ್ದಾರೆ.
ಹಾಸನ ಜಿಲ್ಲೆ, ಹೊಳೇನರಸಿಪುರ ತಾಲೂಕಿನ ಟಿ.ಮಾಯಗೌಡನಹಳ್ಳಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸುವ ಕ್ರಮಕ್ಕೆ ಸರ್ಕಾರ ಮುಂದಾಗಬಾರದು.
ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಶಾಲಾ ಪಠ್ಯಕ್ರಮವನ್ನು ರೂಪಿಸಬೇಕು. ಆಧುನಿಕ ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಶಿಕ್ಷಣವನ್ನು ಸರ್ಕಾರ ನೀಡಬೇಕೆಂದು ಸಲಹೆ ನೀಡಿದರು.
ಇನ್ನು ನಾನು ಹುಟ್ಟಿರುವುದು ಕೂಡಾ ಹಿಂದೂ ಸಮಾಜದಲ್ಲಿ, ಹೀಗಾಗಿ ನಮ್ಮ ಕುಟುಂಬ ಅಪಾರ ದೈವಿಕ ಭಕ್ತಿಯನ್ನು ಹೊಂದಿದೆ. ಇಂದು ಕೇವಲ ಮತಬ್ಯಾಂಕ್‍ಗಾಗಿ ಈ ರೀತಿಯ ಕೆಲಸಗಳು ನಡೆಯುತ್ತಿವೆ. ಇದರಿಂದ ಅಭಿವೃದ್ದಿಯಾಗಲು ಸಾಧ್ಯವಿಲ್ಲ.
ಹಿಂದಿನ ಕಾಲದಲ್ಲಿ ವಿಧ್ಯೆ ಎಂಬುದು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ಅದೇ ಒಂದು ವರ್ಗದ ಜನರು ತಮ್ಮ ಶಿಕ್ಷಣವನ್ನು ಎಲ್ಲರ ಮೇಲೆ ಹೇರಲು ಹೊರಟಿದ್ದಾರೆ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ನೂನ್ಯತೆಗಳಿವೆ. ಅವುಗಳನ್ನು ಸರಿಪಡಿಸುವತ್ತ ಸರ್ಕಾರ ಗಮನ ಹರಿಸಬೇಕು. ಅದನ್ನು ಬಿಟ್ಟು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕಾರ್ಯಗಳನ್ನು ಮಾಡಬಾರದು. ಈ ರೀತಿಯ ಕ್ರಮಗಳಿಂದ ಮಕ್ಕಳ ಹಾಲಿನಂತ ಮನಸ್ಸನ್ನು ಒಡೆಯಬೇಡಿ ಎಂದರು. ಇನ್ನು ನಾನು ಹಿಜಾಬ್ ಕುರಿತು ನೀಡಿರುವ ಹೇಳಿಕೆಯನ್ನು ತಿರುಚಿದ್ದಾರೆ.
ಹೈಕೋರ್ಟ್ ನೀಡಿರುವ ತೀರ್ಪನ್ನು ಎಲ್ಲರೂ ಗೌರವಿಸಬೇಕೆಂದು ನಾನು ಹೇಳಿದ್ದೇನೆ ಹೊರತು, ನಾನು ಎಲ್ಲೂ ಸಹ ಹಿಜಾಬ್ ಕುರಿತು ವೈಯಕ್ತಿಕ ಚರ್ಚೆ ಮಾಡಿಲ್ಲ. ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಸರ್ಕಾರ ಗಂಭೀರವಾಗಿ ಯೋಚಿಸಬೇಕಿದೆ. ಸಾಧ್ಯವಾದಷ್ಡು ಬೇಗ ಹಿಜಾಬ್ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಪರೀಕ್ಷೆ ಹತ್ತಿರ ಬರುತ್ತಿದೆ. ಹೀಗಾಗಿ ಸರ್ಕಾರ ಮಕ್ಕಳ ಭವಿಷ್ಯಕ್ಕೆ ಪೂರಕವಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.