ಕಿಡ್ನಿ ಕಸಿ ನಂತರ ಲಾಲು ಪುತ್ರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

Patna : ಕೇಂದ್ರ ಸಚಿವ ಗಿರಿರಾಜ್ ಸಿಂಗ್(Giriraj singh) ಅವರು ಇತ್ತೀಚೆಗೆ ತನ್ನ ತಂದೆಗೆ ಕಿಡ್ನಿ ದಾನ ಮಾಡಿದ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್(Lalu prasad tweet) ಅವರ ಪುತ್ರಿ ರೋಹಿಣಿ ಆಚಾರ್ಯ ಅವರ ಫೋಟೋವನ್ನು ಹಂಚಿಕೊಂಡು,

“ರೋಹಿಣಿ ಆಚಾರ್ಯ ಜೈಸಿಗೆ(Rohini Acharya Jaisi) ಬೇಟಿ ಹೋ “ಮಗಳು ನಿಮ್ಮಂತೆ ಇರಬೇಕು” ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ .. ನೀವು ಮುಂದಿನ ಪೀಳಿಗೆಗೆ ಉದಾಹರಣೆಯಾಗುತ್ತೀರಿ.” ಎಂದು ಟ್ವೀಟ್‌ ಮಾಡಿದ್ದಾರೆ.

ಫೋಟೋದಲ್ಲಿ ಲಾಲು ಅವರ ಮಗಳು ತನ್ನ ಒಂದು ಮೂತ್ರಪಿಂಡವನ್ನು ದಾನ ಮಾಡಿದ ನಂತರ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದಾರೆ.

ಅವಳ ಅಕ್ಕ ಮಿಸಾ ಭಾರತಿ ಅವಳ ಪಕ್ಕದಲ್ಲಿ ನಿಂತಿದ್ದಾಳೆ. ಆರ್‌ಜೆಡಿ(RJD) ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಶಸ್ತ್ರ ಚಿಕಿತ್ಸೆಯನ್ನು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು,

ಅವರ ಮಕ್ಕಳಾದ ತೇಜಸ್ವಿ ಯಾದವ್ ಮತ್ತು ಮಿಸಾ ಭಾರ್ತಿ ಅವರ ಜೊತೆಗಿದ್ದರು. ಕಸಿ ಮಾಡುವ ಮೊದಲು,

ಇದನ್ನೂ ಓದಿ : https://vijayatimes.com/c-t-ravi-about-rahul-gandhi/

ಆಚಾರ್ಯ ಅವರು ಲಾಲು ಅವರೊಂದಿಗಿನ ಒಂದೆರಡು ಫೋಟೋಗಳ ಜೊತೆಗೆ “ರಾಕ್ ಅಂಡ್ ರೋಲ್ ಮಾಡಲು ಸಿದ್ಧರಾಗಿದ್ದಾರೆ. ನನಗೆ ಶುಭವಾಗಲಿ” ಎಂದು ಟ್ವೀಟ್(Tweet) ಮಾಡಿದ್ದರು.

ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ತಂದೆ ಮತ್ತು ಸಹೋದರಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತೇಜಸ್ವಿ ಯಾದವ್(tejashwi yadav) ಘೋಷಿಸಿದ್ದಾರೆ.

“ನನ್ನ ತಂದೆಯ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ(ICU) ಸ್ಥಳಾಂತರಿಸಲಾಗಿದೆ.

ಅಕ್ಕ ರೋಹಿಣಿ ಆಚಾರ್ಯ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಇಬ್ಬರೂ ಆರೋಗ್ಯವಾಗಿದ್ದಾರೆ. ನಿಮ್ಮ ಪ್ರಾರ್ಥನೆ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು” ಎಂದು ಅವರು ಟ್ವೀಟ್ ಮಾಡಿದ್ದಾರೆ.

 “ಕುಟುಂಬದಿಂದ ಯಾರಾದರೂ ನನ್ನ ತಂದೆಗೆ ಕಿಡ್ನಿ ದಾನ ಮಾಡಬೇಕೆಂದು ವೈದ್ಯರು ಬಯಸಿದ್ದರು. ನನ್ನ ಸಹೋದರಿ ರೋಹಿಣಿ ಅವರ ಕಿಡ್ನಿ ಅತ್ಯುತ್ತಮವಾಗಿ ಹೊಂದಿಕೆಯಾಯಿತು, ಆದ್ದರಿಂದ ರೋಹಿಣಿ ತಂದೆಗೆ ಕಿಡ್ನಿ ನೀಡಿದ್ದಾರೆ” ಎಂದು ತೇಜಸ್ವಿ ಹೇಳಿದ್ದಾರೆ.

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಮೂತ್ರಪಿಂಡದ ತೊಂದರೆಗಳಿಂದ ಬಳಲುತ್ತಿದ್ದರು. ಅವರಿಗೆ ಮೂತ್ರಪಿಂಡ ಕಸಿ ಮಾಡುವಂತೆ ಸಲಹೆ ನೀಡಲಾಯಿತು.

ಇದನ್ನೂ ನೋಡಿ : https://fb.watch/hddduJyLLi/ ಸಂಪಿಗೆ ರಸ್ತೆ ದುಸ್ಥಿತಿ! ಇದು ಏನು ಫುಟ್ ಪಾತ್ ಅಥವಾ ಬಿಬಿಎಂಪಿ ಕಸದ ತೊಟ್ಟಿಯ?

ಅವರ ಮಗಳು ರೋಹಿಣಿ ಅವರು ತಂದೆಗೆ ಕಿಡ್ನಿ ನೀಡಲು ಮುಂದೆ ಬಂದರು. ಆಕೆಯ ಒತ್ತಾಯದ ನಂತರ, ಕುಟುಂಬವು ಶಸ್ತ್ರಚಿಕಿತ್ಸೆಗಾಗಿ ಸಿಂಗಾಪುರವನ್ನು ಆಯ್ಕೆ ಮಾಡಿತು.

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ರೋಹಿಣಿ ಆಚಾರ್ಯ ಸಿಂಗಾಪುರದಲ್ಲಿ ವಾಸವಾಗಿದ್ದು, ರಾವ್ ಸಮರೇಶ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.

Exit mobile version