ಲ್ಯಾಂಡ್‌ಲೈನ್‌ನಿಂದ ಕರೆ ಮಾಡಲು ಹೊಸ ಬದಲಾವಣೆ

ನವದೆಹಲಿ, ನ. 25: ಈಗಂತೂ ಸ್ಮಾರ್ಟ್​ಫೋನ್ಗಳದ್ದೇ ಯುಗ, ಸ್ಮಾರ್ಟ್‌ ಫೋನ್‌ಗಳ ನಿರಂತರ ಬಳಕೆಯ ನಂತರ ಲ್ಯಾಂಡ್​ಲೈನ್​ ಬಳಕೆ ಕಡಿಮೆಯಾಗಿದ್ದರೂ, ಅನೇಕ ಕಚೇರಿಗಳಲ್ಲಿ ಹಾಗೂ ಕೆಲವೊಂದು ಮನೆಗಳಲ್ಲಿ ಇನ್ನೂ ಲ್ಯಾಂಡ್​ಲೈನ್​ಗಳು ಬಳಕೆಯಲ್ಲಿವೆ. ಇಂಥ ಲ್ಯಾಂಡ್​ಲೈನ್​ಗಳಲ್ಲಿ ಒಂದು ಹೊಸ ಬದಲಾವಣೆಯನ್ನು ಮಾಡಲಾಗಿದ್ದು, ಜನವರಿ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಶಿಫಾರಸು ಮಾಡಿದ್ದು, ಅದನ್ನು ಟೆಲಿಕಾಂ ಇಲಾಖೆ ಒಪ್ಪಿಗೆ ಸೂಚಿಸಿದೆ.

ಯಾವುದೇ ಲ್ಯಾಂಡ್‌ಲೈನ್ ಫೋನ್‌ನಿಂದ ಮೊಬೈಲ್ ಫೋನ್‌ಗೆ ಕರೆ ಮಾಡುವಾಗ ಆರಂಭದಲ್ಲಿ ಜೀರೊ (0) ಸೇರಿಸುವುದು ಕಡ್ಡಾಯ. ವ್ಯಕ್ತಿಯು ಲ್ಯಾಂಡ್​​ಲೈನ್​ನಲ್ಲಿ ಸೊನ್ನೆ ಒತ್ತದೇ ನೇರವಾಗಿ, ಮೊಬೈಲ್ ನಂಬರ್​ಗೆ ಕರೆ ಮಾಡಿದರೆ ಆಗ ಸೊನ್ನೆ ಒತ್ತಬೇಕೆಂಬ ಬಗ್ಗೆ ವಾಯ್ಸ್​ ರೆಕಾರ್ಡ್​ ಪ್ಲೇ ಮಾಡುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಟೆಲಿಕಾಮ್​​ ಸೇವೆಯಲ್ಲಿ ಸೂಕ್ತ ನಂಬರಿಂಗ್ ಸ್ಪೇಸ್​ ಸೃಷ್ಟಿಸುವ ಸಲುವಾಗಿ ಇಂಥದ್ದೊಂದು ಬದಲಾವಣೆಮಾಡಲಾಗಿದ್ದು, ಮೊಬೈಲ್​ ಫೋನ್​ ಬಳಕೆದಾರರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಡಯಲಿಂಗ್ ವಿಧಾನದಲ್ಲಿ ಈ ಬದಲಾವಣೆ ಮಾಡಿದರೆ ಟೆಲಿಕಾಂ ಕಂಪೆನಿಗಳು ಮೊಬೈಲ್ ಸೇವೆಗಳಿಗಾಗಿ 254.4 ಕೋಟಿ ಹೆಚ್ಚುವರಿ ಸಂಖ್ಯೆಗಳನ್ನು ರಚಿಸುವ ಸೌಲಭ್ಯವನ್ನು ಪಡೆಯಬಹುದಾಗಿದೆ.

Exit mobile version