ವಕೀಲರು ಮುಷ್ಕರ ನಡೆಸುವಂತಿಲ್ಲ ಅಷ್ಟೇ ಅಲ್ಲ, ಯಾವುದೇ ನ್ಯಾಯಾಂಗ ಕಾರ್ಯಗಳಿಂದ ದೂರವಿರುವಂತಿಲ್ಲ: ಸು. ಕೋರ್ಟ್ ಆದೇಶ

New Delhi: ವಕೀಲರು ಯಾವುದೇ ಮುಷ್ಕರ ನಡೆಸುವಂತಿಲ್ಲ ಅಥವಾ ನ್ಯಾಯಾಂಗದ ಯಾವುದೇ ಕಾರ್ಯಗಳಿಂದ ದೂರವಿರುವಂತಿಲ್ಲ, ಅಡ್ವಕೇಟ್‌ಗಳ ಎಲ್ಲಾ ರೀತಿಯ ನೈಜ ಸಮಸ್ಯೆಗಳ ಪರಿಹಾರಕ್ಕಾಗಿ ಕುಂದುಕೊರತೆ ಪರಿಹಾರ ಸಮಿತಿಯನ್ನು ರಚಿಸುವಂತೆ ಎಲ್ಲಾ ಹೈಕೋರ್ಟ್‌ (High Court) ಗಳಿಗೆ ಏ.20 ರಂದು ಸುಪ್ರೀಂ ಕೋರ್ಟ್ (Supreme Court) ಆದೇಶ ನೀಡಿದೆ.


ನ್ಯಾಯಮೂರ್ತಿಗಳಾದ ಎಂ ಆರ್ ಷಾ (M.R.Shah) ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ (Ahsanuddin Amanullah) ನೇತೃತ್ವದ ಪೀಠವು ಎಲ್ಲಾ ಹೈಕೋರ್ಟ್‌ಗಳಿಗೆ ಜಿಲ್ಲಾ ಕೋರ್ಟ್‌ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಕುಂದುಕೊರತೆ ಪರಿಹಾರ ಸಮಿತಿ ರಚನೆಯಾಗುವಂತೆ ಎಲ್ಲಾ ಹೈಕೋರ್ಟ್‌ಗಳಿಗೆ ನಿರ್ದೇಶಿಸಿದೆ. ಈ ಮೂಲಕವಾಗಿ ವಕೀಲರು ಪ್ರಕರಣಗಳ ಪಟ್ಟಿ,ಫೈಲಿಂಗ್‌,ಕಾರ್ಯವಿಧಾನದ ಬದಲಾವಣೆಗೆ ಸಮಬಂಧಿಸಿದ ಸಮಸ್ಯೆಗಳು,ನ್ಯಾಯಾಂಗದ ಸದಸ್ಯರುಗಳ ದುವರ್ತನೆ ಇನ್ನಿತರ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಬಹುದು.


ಡೆಹ್ರಾಡೂನ್‌ನ (Dehradun) ಜಿಲ್ಲಾ ವಕೀಲರ ಸಂಘವು ತಮ್ಮ ದೂರುಗಳ ಪರಿಹಾರಕ್ಕೆ ಸೂಕ್ತ ವೇದಿಕೆಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿತ್ತು, ಈ ಅರ್ಜಿಯನ್ನು ನ್ಯಾಯಾಲಯವು ವಿಲೇವಾರಿ ಮಾಡಿ ,ಪ್ರತಿಯೊಂದು ಜಿಲ್ಲಾ ನ್ಯಾಯಾಲಯದ ಮಟ್ಟದಲ್ಲಿ ಪ್ರತ್ಯೇಕ ದೂರು ಪರಿಹಾರ ಸಮಿತಿಗಳನ್ನು ರಚಿಸಲಾಗುವುದು. ಬಾರ್‌ ಕೌನ್ಸಿಲ್‌ನ ಯಾವುದೇ ಸದಸ್ಯರು ಮುಷ್ಕರ ನಡೆಸುವಂತಿಲ್ಲ ,ವಕೀಲರು ಮುಷ್ಕರ ನಡೆಸುವುದು ಅಥವಾ ಅವರ ಕೆಲಸದಿಂದ ದೂರವಿರುವುದು ನ್ಯಾಯಾಂಗ ಕೆಲಸಕ್ಕೆ ಅಡ್ಡಿಯಾಗುತ್ತದೆ ಎಂದು ಸುಪ್ರಿಮ್‌ಕೋರ್ಟ್‌ನ ನ್ಯಾಯ ಪೀಠ ಆದೇಶ ಮಾಡಿದೆ.ಮತ್ತು ಈ ಆದೇಶದ ಪ್ರತಿಯನ್ನು ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗೆ (Register General) ಕಳುಹಿಸುವಂತೆ ನೋಂದಾವಣೆಗೆ ನಿರ್ದೇಶಿಸಿದೆ.


ಆದ್ದರಿಂದ, ಇನ್ನು ಮುಂದೆ ಎಲ್ಲಾ ಹೈಕೋರ್ಟ್‌ಗಳು (High Cout) ತಮ್ಮ ತಮ್ಮ ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಕುಂದುಕೊರತೆ ಪರಿಹಾರ ಸಮಿತಿಯನ್ನು ರಚಿಸಲಾಗುತ್ತದೆ ಹಾಗೂ ದೂರು ಪರಿಹಾರ ಸಮಿತಿಯು ಇಬ್ಬರು ಹಿರಿಯ ನ್ಯಾಯಾಧೀಶರನ್ನು ಒಳಗೊಂಡಿರಬೇಕು.ಅದರಲ್ಲಿ ತಲಾ ಒಬ್ಬರು ನ್ಯಾಯಾಂಗ ಸೇವೆಗಳಿಂದ ಮತ್ತು ಇನ್ನೊಬ್ಬರು ಬಾರ್ ಕೌನ್ಸಿಲ್‌ (Bar Council) ಮುಖ್ಯ ನ್ಯಾಯಾಧೀಶರು. ಯಾವುದೇ ಸದಸ್ಯರು ದೂರುಗಳನ್ನು ಒದಗಿಸಿದರೆ ಅದು ನಿಜವಾಗಿರಬೇಕು ಮತ್ತು ಯಾವುದೇ ನ್ಯಾಯಾಂಗ ಅಧಿಕಾರಿಯ ಮೇಲೆ ಯಾವುದೇ ಒತ್ತಡವನ್ನು ಹೇರಬಾರದು” ಎಂದು ಪೀಠ ಹೇಳಿದೆ.

Exit mobile version