ಚಿಪ್ಸ್ ಬದಲು ಗಾಳಿಯೇ ಹೆಚ್ಚಿರುತ್ತದೆ ಎಂದೇಳುವ ಲೇಸ್ ಕಂಪನಿ ಕಟ್ಟಿದ ದಂಡ 85,000 ರೂ!

ನಮ್ಮ ಜನರು ಬಹಳ ಆಸೆಪಟ್ಟು ತಿನ್ನುವ ಚಿಪ್ಸ್‍ಗಳಲ್ಲಿ(Potato Chips) ಲೇಸ್(Lays) ಕಂಪನಿಯ ವಿವಿಧ ಫ್ಲೇವರ್‍ಗಳ ಚಿಪ್ಸ್ ಕೂಡ ಒಂದು. ಸದ್ಯ ಲೇಸ್ ಕಂಪನಿ ಚಿಪ್ಸ್ ಈ ಹಿಂದೆಯೂ ಕೂಡ ಇದೇ ರೀತಿ ಚಿಪ್ಸ್‍ಗಿಂತಲೂ ಗಾಳಿಯೇ ಹೆಚ್ಚಾಗಿರುತ್ತದೆ ಎಂಬ ಆರೋಪವನ್ನು ಹೊತ್ತುಕೊಂಡಿತ್ತು.

ಆದ್ರೆ, ಯಾವುದೇ ರೀತಿ ಸಾಬೀತಾಗಿರಲಿಲ್ಲ ಮತ್ತು ಪ್ರಕರಣದ ರೀತಿ ಹೊರಬಂದಿರಲಿಲ್ಲ. ಈ ಚಿಪ್ಸ್ ಖರೀದಿ ಮಾಡಿ ತಿಂದ ಅದೇಷ್ಟೋ ಗ್ರಾಹಕರು(Customers) ಇದರಲ್ಲಿ ಚಿಪ್ಸ್ ಬದಲು ಗಾಳಿಯೇ ಹೆಚ್ಚು ತುಂಬಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇವೆಲ್ಲವೂ ಅಭಿಪ್ರಾಯಗಳಾಗಿಯೇ ಉಳಿಯಿತೇ ವಿನಃ ದೂರು ಅಥವಾ ಯಾವುದೇ ಆರೋಪಗಳು ದಾಖಲಾಗಲಿಲ್ಲ! ಆದ್ರೆ, ಈಗ ಲೇಸ್ ಆಲೂಗಡ್ಡೆ ಚಿಪ್ಸ್ ಬ್ರ್ಯಾಂಡ್‍ನ ಪೋಷಕ ಕಂಪನಿಯಾದ ಪೆಪ್ಸಿಕೋಗೆ(Pepisico) ತ್ರಿಸ್ಸೂರ್ ಲೀಗಲ್ ಮೆಟ್ರೋಲಜಿ ಕಛೇರಿ 85 ಸಾವಿರ ರೂ. ದಂಡ ವಿಧಿಸಿದೆ.

ಅನೇಕ ಜನರ ಅಭಿಪ್ರಾಯದಂತೆ ಚಿಪ್ಸ್ ಬದಲು ಗಾಳಿಯೇ ಹೆಚ್ಚು ಎಂಬುದರ ಜೊತೆಗೆ ಪ್ಯಾಕೆಟ್ ಮೇಲೆ ಉಲ್ಲೇಖಿಸಿರುವ ಆಹಾರದ ಪ್ರಮಾಣಕ್ಕೂ ಮತ್ತು ಪ್ಯಾಕೆಟ್ ಒಳಗಿನ ಆಹಾರ ಪ್ರಮಾಣಕ್ಕೂ ಹೊಂದಿಕೆಯೇ ಇಲ್ಲ ಎಂಬುದು ತಿಳಿದುಬಂದಿದೆ. ಜಯಶಂಕರ್ ಎಂಬ ಗ್ರಾಹಕರೊಬ್ಬರು ಪರಿಚಯಿಸಿದ ಲೇಸ್ ಪ್ಯಾಕೆಟ್‍ನಲ್ಲಿ ತಿಳಿಸಿದ್ದ ಆಹಾರ ಪ್ರಮಾಣ 115 ಗ್ರಾಂ, ಆದ್ರೆ ಪ್ಯಾಕೆಟ್ ತೆರೆದು ಅಳೆದಾಗ ಅದರಲ್ಲಿದ್ದದ್ದು ಕೇವಲ ಅದರ ಅರ್ಧದಷ್ಟು ಮಾತ್ರ! ಸಾಮನ್ಯವಾಗಿ ಪ್ಯಾಕೆಟ್ ಮೇಲೆ ತಿಳಿಸಿರುವ ಮಾಹಿತಿ ಅನುಸಾರ ಒಂದು ಪ್ಯಾಕೆಟ್ 115 ಗ್ರಾಂ ಒಳಗೊಂಡಿರುತ್ತದೆ ಎಂದು.

ಆದ್ರೆ, ಮೂರು ಪ್ಯಾಕೆಟ್‍ಗಳನ್ನು ಪರಿಶೀಲಿಸಿ ನೋಡಿದರೆ, ಮೂರು ಪ್ಯಾಕೆಟ್‍ನಲ್ಲಿ ಕೂಡ ಕೇವಲ 50.930 ಗ್ರಾಂ ಇತ್ತು ಎಂಬುದು ತಿಳಿದುಬಂದಿದೆ. ಸದ್ಯ ಈ ಕುರಿತು ಜಯಶಂಕರ್ ಪ್ರಶ್ನಿಸಿ ದಂಡ ವಿಧಿಸುವಂತೆ ಮಾಡಿದ್ದಾರೆ. ಈ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಕೆಲಸ ನೀವು ಮಾಡಿದ್ದೀರಿ ಸರ್! ಅದರಲ್ಲಿ ಚಿಪ್ಸ್‍ಗಿಂತಲೂ ಗಾಳಿಯೇ ಹೆಚ್ಚು, ಗ್ರಾಹಕರು ಇದನ್ನು ಪ್ರಶ್ನಿಸುವುದಿಲ್ಲ ಎಂಬ ಧೈರ್ಯದಿಂದ ಈ ರೀತಿ ಮೋಸ ಮಾಡುತ್ತಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

Exit mobile version