Bengaluru: ರಾಜ್ಯದಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಸರ್ಕಾರ ರಚನೆಯಾಗಿ ನೂರು ದಿನವೇ ಕಳೆದು (Legal notice to BJP) ಹೋಗಿದ್ದರು ಈವರೆಗೂ ಭಾರತೀಯ ಜನತಾ ಪಕ್ಷ ಮಾತ್ರ ವಿಪಕ್ಷ

ನಾಯಕನನ್ನು ಆಯ್ಕೆ ಮಾಡದಿರುವ ಕ್ರಮವನ್ನು ಆಕ್ಷೇಪಿಸಿ ವಕೀಲರಾದ ಎನ್. ಪಿ ಅಮೃತೇಶ್ ಅವರು ಬಿಜೆಪಿಯ ರಾಷ್ಟೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್
ಕಟೀಲು ಅವರಿಗೆ ಲೀಗಲ್ ನೋಟೀಸ್ (Legal notice to BJP) ಜಾರಿ ಮಾಡಿದ್ದಾರೆ
ವಿಪಕ್ಷ ನಾಯಕನ ಆಯ್ಕೆಗೆ ಹತ್ತು ದಿನಗಳಲ್ಲಿ ಕ್ರಮ ಕೈಗೊಳ್ಳಬೇಕಾಗಿದ್ದು, ಅಲ್ಲದೆ ಇಲ್ಲಿಯವರೆಗೂ ವಿಪಕ್ಷ ನಾಯಕನ ಆಯ್ಕೆ ಮಾಡದಿರುವುದಕ್ಕೆ ರಾಜ್ಯದ ಜನತೆಯಾ ಕ್ಷಮೆ ಕೋರಬೇಕು ಎಂದು ನೋಟಿಸ್ನಲ್ಲಿ
ಆಗ್ರಹಿಸಲಾಗಿದೆ. ಅಲ್ಲದೆ ವಿಪಕ್ಷ ನಾಯಕನ ಆಯ್ಕೆಗೆ ಮುಂದಾಗದಿದ್ದಲ್ಲಿ ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ನಾಯಕರಿಗೆ ಲೀಗಲ್ ನೋಟಿಸ್ ನಲ್ಲಿ ಎಚ್ಚರಿಕೆ ಕೊಡಲಾಗಿದೆ.
ಸಾಂವಿಧಾನಿಕ ಹುದ್ದೆಯಾಗಿರುವ ವಿಪಕ್ಷ ನಾಯಕ ಸಂಪುಟದರ್ಜೆ ಸ್ಥಾನಮಾನ ಹೊಂದಿದ್ದು ಇವರಿಗೆ ಹಲವಾರು ಅಧಿಕಾರ ಮತ್ತು ಜವಾಬ್ದಾರಿಗಳಿರುತ್ತವೆ. ಲೋಕಾಯುಕ್ತ, ಉಪಲೋಕಾಯುಕ್ತ, ಆರ್.ಟಿ.ಐ
ಆಯುಕ್ತರು, ಕೆ.ಪಿ.ಎಸ್.ಸಿ ಸದಸ್ಯರು, ಗ್ರಾಹಕರ ಒಕ್ಕೂಟ, ಆಡಳಿತಾತ್ಮಕ ನ್ಯಾಯ ಮಂಡಳಿ ಇತ್ಯಾದಿ ಸಾಂವಿಧಾನಿಕ ನೇಮಕಾತಿಗಳಲ್ಲಿ ವಿಪಕ್ಷ ನಾಯಕ ಭಾಗವಹಿಸಬೇಕಾಗುತ್ತದೆ.

ವಿಪಕ್ಷ ನಾಯಕ ವಿಧಾನಸಭೆ ಒಳಗು ಹಾಗು ಹೊರಗೂ ಚುನಾಯಿತ ಸರ್ಕಾರ ಸರಿಯಾಗಿ ಕಾರ್ಯ ನಿರ್ವಹಿಸದೆಯಿದ್ದಾಗ ಜನರ ಪರವಾಗಿ ಧ್ವನಿ ಎತ್ತಬೇಕಾಗಿದ್ದು, ಸರ್ಕಾರದಿಂದ ಅಧಿಕಾರ ದುರ್ಬಳಕೆ, ಸ್ವಜನ
ಪಕ್ಷಪಾತ, ಭ್ರಷ್ಟಾಚಾರ ಇನ್ನು ಹಲವಾರು ಸಂಧರ್ಭಗಳಲ್ಲಿ ಧ್ವನಿ ಎತ್ತುವ ಅಧಿಕಾರ ಹೊಂದಿರುತ್ತಾರೆ.
ಆದರೆ ಬಿಜೆಪಿ ಪಕ್ಷವು ವಿಪಕ್ಷ ನಾಯಕನನ್ನು ಆಯ್ಕೆ ಮಾಡದೇ ಮಹತ್ವದ ಜವಾಬ್ದಾರಿ ನಿಭಾಯಿಸುವಲ್ಲಿ ಮತ್ತು ಜನರ ಧ್ವನಿಯಾಗುವಲ್ಲಿ ವಿಫಲವಾಗಿರುವ ನಿಟ್ಟಿನಲ್ಲಿ ಕೂಡಲೇ ವಿಪಕ್ಷ ನಾಯಕನ ಆಯ್ಕೆಗೆ
ಮುಂದಾಗಬೇಕು ಎಂದು ನೋಟಿಸ್ನಲ್ಲಿ ತಿಳಿಸಿದೆ. ಹಾಗಾಗಿ ರಾಷ್ಟ್ರಪತಿ, ರಾಜ್ಯಪಾಲರು, ವಿಧಾನಸಭೆಯ ಸ್ಪೀಕರ್ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಲೀಗಲ್ ನೋಟಿಸ್ನ
ಪ್ರತಿಯನ್ನು ರವಾನಿಸಲಾಗಿದೆ.
ಇದನ್ನು ಓದಿ: ಅನಿಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಮೈತ್ರಿ ಅನಿವಾರ್ಯ: ಬಸವರಾಜ ಬೊಮ್ಮಾಯಿಯವರು
- ಭವ್ಯಶ್ರೀ ಆರ್.ಜೆ