ಸಲಿಂಗಕಾಮಿ ಪ್ರೀತಿಯನ್ನು ಒಪ್ಪದ ಪೋಷಕರ ನಿರ್ಧಾರಕ್ಕೆ ‘ಈಕೆ’ ತೆಗೆದುಕೊಂಡ ನಿರ್ಧಾರ ಅಚ್ಚರಿ!

Lesbians

ಉತ್ತರ ಪ್ರದೇಶದ(Uttarpradesh) ಪ್ರಯಾಗ್‌ರಾಜ್‌ನಲ್ಲಿ(Prayagraj) ಮಹಿಳೆಯೊಬ್ಬರು ತಮ್ಮ ಸಂಬಂಧವನ್ನು ಕುಟುಂಬಗಳು ವಿರೋಧಿಸಿದ ಬಳಿಕ ತನ್ನ ಗೆಳತಿಯೊಂದಿಗೆ ಇರಲು ತನ್ನ ಲಿಂಗವನ್ನು ಬದಲಾಯಿಸಲು ಮುಂದಾಗಿದ್ದಾರೆ. ಸಲಿಂಗಕಾಮಿಗಳಾದ(Lesbians) ಇಬ್ಬರು ಮಹಿಳೆಯರು ತಮ್ಮ ಜೀವನದ ಪಯಣಕ್ಕೆ ಒಬ್ಬರಿಗೊಬ್ಬರು ಜೊತೆಯಾಗಿರಬೇಕು ಎಂದು ಪ್ರತಿಜ್ಞೆ ಮಾಡಿಕೊಂಡಿದ್ದಾರೆ. ಅದರಂತೆ ಈಗ ಮದುವೆಯಾಗಲು ನಿರ್ಧರಿಸಿ, ತಮ್ಮ ಪೋಷಕರಿಗೆ ಮನವಿ ಮಾಡಿಕೊಂಡಿದ್ದಾರೆ.

ಆದ್ರೆ, ಕುಟುಂಬವು ಈ ಸಂಬಂಧವನ್ನು ವಿರೋಧಿಸಿ ನಿರಾಕರಿಸಿದ್ದಾರೆ. ಪೋಷಕರ ಈ ನಿರ್ಧಾರದಿಂದ ಕೋಪಗೊಂಡ ಯುವತಿಯೊಬ್ಬಳು ತನ್ನ ಲಿಂಗವನ್ನು ಬದಲಾಯಿಸಲು ಶಸ್ತ್ರಚಿಕಿತ್ಸೆಗೆ ಮುಂದಾಗಲು ನಿರ್ಧರಿಸಿದರು. ಮಹಿಳೆ, ತನ್ನ ಸಂಗಾತಿಯನ್ನು ಬಹಳ ಪ್ರೀತಿಸುತ್ತಿರುವ ಕಾರಣ, ಅಕೆಯನ್ನು ಬಿಟ್ಟಿರಲು ಸಾಧ್ಯವಿಲ್ಲವಂತೆ. ಹೀಗಾಗಿ ಯಾವುದೇ ಅಡಚಣೆಗಳನ್ನು ತಪ್ಪಿಸಲು ಮತ್ತು ಕುಟುಂಬದ ಇತರ ಸದಸ್ಯರ ಹಸ್ತಕ್ಷೇಪವನ್ನು ನಿಲ್ಲಿಸಲು ತನ್ನ ಲಿಂಗವನ್ನು ಬದಲಾಯಿಸಲು ನಿರ್ಧರಿಸಿದ್ದಾಳೆ.

ಮಹಿಳೆಯು ಕುಟುಂಬಗಳನ್ನು ಮನವೊಲಿಸಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಪ್ರಯತ್ನಿಸಿ, ಕಡೆಯದಾಗಿ ಇದೊಂದೆ ಮಾರ್ಗ ಎಂದು ಚಿಂತಿಸಿ, ಈ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ. ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಸ್ವರೂಪ್ ರಾಣಿ ನೆಹರು ಆಸ್ಪತ್ರೆಯ ವೈದ್ಯರ ತಂಡವು ಆಕೆಯ ದೇಹಕ್ಕೆ ಯಾವ ರೀತಿಯ ಶಸ್ತ್ರಚಿಕಿತ್ಸೆಯನ್ನು ನಡೆಸಬೇಕು ಎಂಬುದನ್ನು ಈಗಾಗಲೇ ನಡೆಸಿದೆ. ಶಸ್ತ್ರಚಿಕಿತ್ಸೆಗೆ ಇನ್ನೂ 1.5 ವರ್ಷಗಳು ಬೇಕಾಗುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಈ ಬಳಕವೇ ಆಕೆ ಪುರುಷನಾಗಿ ಪರಿವರ್ತನೆಗೊಳುತ್ತಾಳೆ ಎಂದು ಹೇಳಲಾಗಿದೆ.

“ಮಹಿಳೆಗೆ ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ನೀಡಲಾಗುತ್ತದೆ. ಟೆಸ್ಟೋಸ್ಟೆರಾನ್ ಚಿಕಿತ್ಸೆಯು ಎದೆಯ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ” ಎಂದು ಡಾ. ಮೋಹಿತ್ ಜೈನ್ ಇಂಡಿಯಾ ಟುಡೇ ಸುದ್ದಿ ವಾಹಿನಿಗೆ ಮಾಹಿತಿ ನೀಡಿದ್ದಾರೆ. ಲಿಂಗ ಬದಲಾವಣೆಯ ಅಡ್ಡ ಪರಿಣಾಮಗಳೇನು? ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯು ಗರ್ಭಧರಿಸುವ ಮತ್ತು ಗರ್ಭಿಣಿಯಾಗುವ ಸ್ಥಿತಿಯಲ್ಲಿರುವುದಿಲ್ಲ ಎಂದು ವೈದ್ಯರು ವಿವರಿಸಿದ್ದಾರೆ.

“ಇಂತಹ ಕಾರ್ಯಾಚರಣೆಯನ್ನು ನಡೆಸಿರುವುದು ಇದೇ ಮೊದಲು ಮತ್ತು ಸುಮಾರು 18 ತಿಂಗಳ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಮಹಿಳೆಯ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಲಾಗಿದೆ ಮತ್ತು ಅವರ ದೇಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Exit mobile version