ಈ ರೀತಿಯ ಉಸಿರಾಟದ ಅಭ್ಯಾಸದಿಂದ ಶ್ವಾಸಕೋಶವನ್ನು ಕೋವಿಡ್‌ ಸಮಯದಲ್ಲೂ ಆರೋಗ್ಯವಾಗಿ ಇಟ್ಟುಕೊಳ್ಳಬಹುದು

lungs

ಆರೋಗ್ಯ  : ಕೊರೊನಾ ಸಾಂಕ್ರಾಮಿಕರೋಗಕ್ಕೆತುತ್ತಾದವರು ಚೇತರಿಸಿಕೊಳ್ಳುವ ಸಮಯದಲ್ಲಿಅತ್ಯವಶ್ಯಕವಾಗಿ ಉಸಿರಾಡುವ ಒಂದಿಷ್ಟು ಅಭ್ಯಾಸಗಳನ್ನು ರೂಡಿಸಿಕೊಳ್ಳುವುದು ಅಗತ್ಯ. ಮೂಲಗಳ ಪ್ರಕಾರ ಇಂದು ಕೊರೊನಾ ವೈರಸ್ ಹರಡಿದ ಬಳಿಕ ಹೆಚ್ಚಾಗಿ ಉಸಿರಾಟದ ತೊಂದರೆ ಪ್ರತಿಯೊಬ್ಬರಲ್ಲೂಎದುರಾಗುತ್ತಿದೆ. ಶ್ವಾಸಕೋಶದ ಮೇಲೆ ಹಲವಾರುರೀತಿಯಲ್ಲಿ ಪರಿಣಾಮ ಬೀರಬಹುದು. ಈ ಸಮಸ್ಯೆ ಪ್ರಮುಖವಾಗಿ ಕೊಮೊರ್ಬಿಡಿಟಿ  ಹೊಂದಿರುವವರಲ್ಲಿ ಹೆಚ್ಚಿರುತ್ತದೆ. ಈ ಕುರಿತು ಶ್ವಾಸಕೋಶದಲ್ಲಿಉಂಟಾಗುವ ಲೋಳೆಯನ್ನು ತೆಗೆದುಹಾಕಲು ಮಾಡಬುಹುದಾದ ಅಭ್ಯಾಸಗಳೇನು ಎಂಬುದರ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಎಂಬುದನ್ನು ತಿಳಿಯೋಣ ಮುಂದೆ ಓದಿ.

ವೈದ್ಯರು ನೀಡಿರುವ ಅಂಕಿ ಅಂಶಗಳ ಅನುಸಾರ ತಿಳಿಯುವುದಾದರೆ, ವೈರಸ್ ನಮ್ಮ ಶ್ವಾಸಕೋಶದ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರಬಹುದು. ಮುಖ್ಯವಾಗಿ ಕೋವಿಡ್ ಕೂಡ ಅದರಲ್ಲೊಂದು. ಕೋವಿಡ್‌ನ ಪ್ರಮುಖ ಲಕ್ಷಣಗಳು ಎಂದರೆ ಅದು ಮೊದಲು ಕಾಣಿಸಿಕೊಳ್ಳುವ ಒಣ ಕೆಮ್ಮು. ಸುಮಾರು ಮೂರನೇಒಂದು ಭಾಗದಷ್ಟುಕೋವಿಡ್ ರೋಗಿಗಳು ದಪ್ಪ ಲೋಳೆಯ ಪ್ರಭಾವದಿಂದ ಕೆಮ್ಮುತ್ತಾರೆ ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಾರೆ.

ದೀರ್ಘ ಉಸಿರಾಟ ಮಾಡುವುದರಿಂದ ಏನು ಲಾಭ.? ಹೇಗೆ ಉಸಿರಾಡಬೇಕು ಮತ್ತುಯಾವರೀತಿ ಉಸಿರನ್ನು ತೆಗೆದುಕೊಳ್ಳಬೇಕು ಹಾಗೂ ಬಿಡಬೇಕು ಎಂಬುದನ್ನು ತಿಳಿದುಕೊಳ್ಳಿ

೧. ಮೊದಲುಎದ್ದು ನಿಂತು ಧೀರ್ಘವಾಗಿ ಉಸಿರಾಡಬೇಕು . ಇದರಿಂದ ಶ್ವಾಸಕೋಶ ಆರಾಮದಾಯಕವಾಗಲಿದೆ.

೨. ದೀರ್ಘವಾಗಿ ಮೂಗಿನಿಂದ ಉಸಿರನ್ನು ತೆಗೆದುಕೊಳ್ಳಿ, ಬಳಿಕ ಐದು-ಹತ್ತು ಸಕೆಂಡ್‌ಗಳ ಕಾಲ ಉಸಿರನ್ನು ಒಳಗಿಟ್ಟುಕೊಳ್ಳಿ.

೩. ಉಸಿರನ್ನು ತುಟಿಯ ಅಂಚಿನಿಂದ ಬಿಡುವುದನ್ನುಅಭ್ಯಾಸ ಮಾಡಿಕೊಳ್ಳಿ. ಇದೇ ರೀತಿ ಮೂರು ಸಲ ಆಳವಾಗಿ ಉಸಿರಾಡಿ, ಮೂರನೇ ಬಾರಿಗೆ ಉಸಿರು ಬಿಡುವ ಸಮಯದಲ್ಲಿ, ಮೂರು ಬಾರಿ ಜೋರಾಗಿ ಕೆಮ್ಮಬೇಕು.

 ಈ ವ್ಯಾಯಾಮವನ್ನು ದಿನಕ್ಕೆ ಮೂರು ಬಾರಿ ಮಾಡುವುದುರಿಂದ ನಮ್ಮ ಶಾfವಸಕೋಶವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು

Exit mobile version