ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ನಡೆದು, ಸೇವಿಸಿದ ಆಹಾರ ರಕ್ತವಾಗಿ ದೇಹಕ್ಕೆ ಶಕ್ತಿ ಒದಗಿಸುವುದರೊಂದಿಗೆ ದೇಹದಲ್ಲಿರುವ (liver problem home remedies) ವಿಷಯುಕ್ತ ವಸ್ತುಗಳನ್ನು
ಹೊರಹಾಕುವಲ್ಲಿ ಲಿವರ್ (Liver) ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಲಿವರ್ ಉತ್ತಮವಾಗಿ ಕೆಲಸ ಮಾಡುವುದು ಅತಿ ಮುಖ್ಯವಾಗಿದೆ. ಲಿವರ್ ಆರೋಗ್ಯಕರವಾಗಿ ಇರಬೇಕಾದರೆ ಲಿವರ್ ಅನ್ನು
ಸ್ವಚ್ಛಗೊಳಿಸುವುದು ಮುಖ್ಯ. ಆಯುರ್ವೇದದ ಪ್ರಕಾರ, ಕೆಲವು ಸರಳ ಮನೆಮದ್ದುಗಳ ಮೂಲಕ ಲಿವರ್ ಅನ್ನು ಸ್ವಚ್ಚಗೊಳಿಸಬಹುದು. ಅದರ ವಿವರ ಇಲ್ಲಿದೆ ನೋಡಿ.

ಪಂಚಕರ್ಮ : ದೇಹವನ್ನು ಶುದ್ದಗೊಳಿಸುವಲ್ಲಿ ಆಯುರ್ವೇದ ಚಿಕಿತ್ಸಾ ವಿಧಾನವಾದ ಪಂಚಕರ್ಮಕ್ಕೆ ಪ್ರಮುಖ ಸ್ಥಾನವಿದೆ. ಲಿವರ್ ಅನ್ನು ಶುದ್ಧೀಕರಿಸಲು ಪಂಚಕರ್ಮ ಅತ್ಯಂತ ಪರಿಣಾಮಕಾರಿ
ಚಿಕಿತ್ಸೆ ಎಂದು ಪರಿಗಣಿಸಲಾಗಿದೆ. ಈ ಚಿಕಿತ್ಸೆಯು ನಾಸ್ಯ ಮತ್ತು ರಕ್ತ ಶುದ್ಧೀಕರಣವನ್ನು ಒಳಗೊಂಡಿರುತ್ತದೆ. ಹೀಗಾಗಿ ಲಿವರ್ ಸಮಸ್ಯೆಯಿದ್ದವರು ಈ ಚಿಕಿತ್ಸೆಯನ್ನು ಪಡೆಯಬಹುದು.
ಆಯುರ್ವೇದ ಔಷಧಗಳು : ಲಿವರ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಯುರ್ವೇದದಲ್ಲಿ ಅನೇಕ ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ. ಭೂಮ್ಯಾಮಲಕಿ, ಅರ್ಜುನ ಮತ್ತು ಕುಟ್ಕಿ. ಅವುಗಳನ್ನು
ಬಳಸಬಹುದು. ಆದರೆ ಸೂಕ್ತ ಆಯುರ್ವೇದ ವೈದ್ಯರ ಸಲಹೆಯನ್ನು ಪಡೆದುಕೊಂಡು (liver problem home remedies) ತೆಗೆದುಕೊಳ್ಳುವುದು ಉತ್ತಮ.
ಗಿಡಮೂಲಿಕೆಗಳ ಚಹಾ : ಗಿಡಮೂಲಿಕೆಗಳ ಚಹಾಗಳು ಲಿವರ್ನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಗಿಡಮೂಲಿಕೆಗಳಾದ ತ್ರಿಫಲ, ಕಟುಕಿ ಮತ್ತು ಪುನರ್ನವವನ್ನು ಚಹಾದ ರೂಪದಲ್ಲಿ
ಸೇವಿಸುವುದರಿಂದ ಲಿವರ್ನ ಕಾರ್ಯ ಉತ್ತಮಗೊಳ್ಳುತ್ತದೆ.

ಸಾತ್ವಿಕ ಆಹಾರ : ಸಾತ್ವಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಲಿವರ್ಆರೋಗ್ಯವನ್ನು ಸುಧಾರಿಸಬಹುದು. ಹಾಗಲಕಾಯಿ ಅಂತಹ ಕಹಿ ಆಹಾರಗಳನ್ನು ತಿನ್ನುವುದನ್ನು ಇದು
ಒಳಗೊಂಡಿರುತ್ತದೆ. ಈ ವಸ್ತುಗಳು ಲಿವರ್ ಅನ್ನು ಶುದ್ಧ ಮತ್ತು ಆರೋಗ್ಯಕರವಾಗಿಸುತ್ತದೆ.
ತ್ರಿಫಲ ಮತ್ತು ಮೆಂತ್ಯ ಬೀಜಗಳು : ಲಿವರ್ ಅನ್ನು ಶುದ್ಧಗೊಳಿಸಲು ಬೇವಿನ ಎಲೆಗಳು, ತ್ರಿಫಲ ಮತ್ತು ಮೆಂತ್ಯ ಬೀಜಗಳನ್ನು ಆಗಾಗ ಸೇವಿಸಬೇಕು. ಇದು ಲಿವರ್ನಲ್ಲಿರುವ ವಿಷಕಾರಿ ವಸ್ತುಗಳನ್ನು
ದೇಹದಿಂದ ತೆಗೆದುಹಾಕುತ್ತದೆ. ಆಗ ಲಿವರ್ ಉತ್ತಮವಾಗಿ ಕೆಲಸ ಮಾಡುತ್ತದೆ.
ಈರುಳ್ಳಿ ಮತ್ತು ಬೆಳ್ಳುಳ್ಳಿ : ಬೆಳ್ಳುಳ್ಳಿ ಮತ್ತು ಈರುಳ್ಳಿಯಲ್ಲಿ ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ಇವು ಲಿವರ್ ಅನ್ನು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.
ಯೋಗ ಮತ್ತು ವ್ಯಾಯಾಮ : ಆಹಾರ ಮತ್ತು ಔಷಧಿಗಳ ಜೊತೆಗೆ ಯೋಗ ಮತ್ತು ವ್ಯಾಯಾಮಗಳನ್ನ ರೂಢಿಸಿಕೊಂಡರೆ ಲಿವರ್ ಶುದ್ದವಾಗಿರುತ್ತದೆ. ಹೀಗಾಗಿ ಲಿವರ್ ಆರೋಗ್ಯದ ದೃಷ್ಟಿಯಿಂದ
ಪ್ರತಿದಿನ ವ್ಯಾಯಾಮ ಮಾಡಬೇಕು.
ಇದನ್ನು ಓದಿ: ಮನೆ ಮದ್ದು: ಮಲಬದ್ಧತೆಯಿಂದ ಹಿಡಿದು ನಾನರೋಗಗಳಿಗೆ ರಾಮಬಾಣ ವೀಳ್ಯದೆಲೆ