ಹುಡುಗಿ ಹೆಸರಲ್ಲಿ ಹುಡುಗರು ಡೇಟಿಂಗ್ ಆ್ಯಫ್ ಬಳಸಿಕೊಂಡು ಅಮಾಯಕರಿಗೆ ವಂಚನೆ

Bengaluru: ಇತ್ತೀಚಿನ ದಿನಗಳಲ್ಲಿ ಜನಗಳು ತನ್ನ ಜೀವನ ಸಂಗಾತಿಯನ್ನು ಹುಡುಕಲು ಡೇಟಿಂಗ್ ಆ್ಯಫ್ (locanto dating app scam) ಗಳ ಮೋರೆ ಹೋಗುತಿದ್ದು ಗುರುತು ಪರಿಚಯ

ಇಲ್ಲದವರ ಜೊತೆ ಸ್ನೇಹ ಸಂಬಂಧ ಬೆಳೆಸಿ ಹಣವನ್ನು ಕಳೆದುಕೋಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದೇ ರೀತಿ ಹುಡುಗರು ಡೇಟಿಂಗ್ ಆ್ಯಪ್ ಬಳಸಿ ಹುಡುಗಿ ಹೆಸರಿನಲ್ಲಿ ಕರೆ ಮಾಡಿ

ವಂಚನೆ ಎಸಗಿರುವ ಘಟನೆಯೊಂದು ಬೆಂಗಳೂರಿನಲ್ಲಿ (locanto dating app scam) ಬೆಳಕಿಗೆ ಬಂದಿದೆ.

ಡೇಟಿಂಗ್ ಆ್ಯಫ್ ಮೂಲಕ ಹುಡುಗಿ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ (Fake Account Create) ಮಾಡಿ ಗೊತ್ತಿಲ್ಲದಂತೆ ಹುಡುಗಿಯ ಫೋಟೋ (Photo) ಹಾಕಿ ಆ ಫೇಕ್ ಅಕೌಂಟ್ ನಿಂದ

ಹುಡುಗರಿಗೆ ಮೆಸೇಜ್ (Message) ಮಾಡಿ ತನ್ನ ಸ್ನೇಹ ವಿಶ್ವಾಸವನ್ನು ಹೆಚ್ಚಿಸಿಕೊಂಡು.ಆ ಹುಡುಗರು ಹತ್ತಿರವಾಗುತ್ತಿದ್ದಂತೆ ಅವರಿಗೆ ಭೇಟಿಯಾಗುವಂತೆ ತಿಳಿಸಿ ಯಾವುದಾರು ಒಂದು ಲೋಕೇಶನ್ (Location) ಕಳಿಸುತ್ತಿದ್ದರು.

ಆ ವ್ಯಕ್ತಿ ಲೋಕೇಶನ್ ಗೆ ಬಂದ ಕೂಡಲೆ ಅವನೇ ಎಂದು ಖಚಿತ ಪಡಿಸಿಕೊಂಡು ಮಾರಕಾಸ್ತ್ರಗಳನ್ನು ತೋರಿಸಿ ಅವನನ್ನು ಅಲ್ಲಿಂದ ಕಿಡ್ಯಾಪ್ (Kidnap) ಮಾಡಿ ಅವರ ಬಳಿ ಇರುವ ಚಿನ್ನಾಭರಣವನ್ನು ಮತ್ತು

ರಾಜ್ಯದಲ್ಲಿ ಮರೀಚಿಕೆ ಆಗುತ್ತಿರುವ ಮಳೆ : ಮೋಡ ಬಿತ್ತನೆ ಬೇಡವೆಂದ ಸಿಎಂ ಸಿದ್ದರಾಮಯ್ಯ

ಹಣವನ್ನು ಸುಲಭವಾಗಿ ದೊಚ್ಚುತ್ತಿದ್ದರು. ಆಕಸ್ಮಾತ್ ಇವರ ಬಳಿ ಹಣ ಇಲ್ಲದಿದ್ದರೆ ಅವರ ಸಂಭಂದಿಕರಿಗೆ ಅಥಾವ ಅವರ ಸ್ನೇಹಿತರಿಗೆ ಕರೆ ಮಾಡಿಸಿ ಆನ್ಲೈನ್ (Online) ಮುಂಖಾತರ ಹಣ ಕಳಿಸಿಕೊಳ್ಳುತ್ತಿದ್ದರು.

ನಂತರ ಅಮಾಯಕ ಹುಡುಗರನ್ನು ದಿನಪೂರ್ತಿ ಅವರೊಂದಿಗೆ ಇಟ್ಟುಕೊಂಡು ನಂತರ ಅವರನ್ನು ಹೆದರಿಸಿ ಯಾರಿಗೂ ಹೇಳದಂತೆ ಬೆದರಿಸಿ ಬಿಟ್ಟುಬಿಡುತ್ತಿದ್ದರು. ಕೆಲವು ದಿನಗಳ ಹಿಂದೆ ಈ ಆರೋಪಿಗಳು

ಅದೇ ರೀತಿ ಆ್ಯಫ್ (App) ಮೂಲಕ ಒಬ್ಬ ವ್ಯಕ್ತಿಗೆ ವಂಚಿಸಿ ಅರವತ್ತು ಸಾವಿರ ಹಣಕ್ಕೆ ಬೇಡಿಕೆ ಇಟ್ಟು ಸುಲಿಗೆ ಮಾಡಿದ್ದರು. ಸುಲಿಗೆಗೆ ಒಳಗಾದ ವ್ಯಕ್ತಿ ನೊಂದು ಪೋಲಿಸರಿಗೆ ದೂರು ನೀಡಿದ್ದರು.

ನಂತರ ಪೋಲಿಸರು ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಹೆಚ್ಚು ವಿಚಾರಣೆ ನಡೆಸಿದಾಗ 15ಕ್ಕೂ ಅಧಿಕ ಮಂದಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡು ವಂಚಿಸಿ ಸುಲಿಗೆ ಮಾಡಿದ್ದಾರೆ

ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.

ನಾಗರಾಜ್ {ಕೆ.ಕಲ್ಲಹಳ್ಳಿ}

Exit mobile version