ಗೋವಾದಲ್ಲೂ ಲಾಕ್​ಡೌನ್​ ಘೋಷಣೆ; ಕ್ಯಾಸಿನೋ ಸೇರಿದಂತೆ ಎಲ್ಲವೂ ಬಂದ್​​

ಗೋವಾ, ಏ. 29: ಗೋವಾದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಅಲ್ಲಿನ ಸರ್ಕಾರ ಐದು ದಿನಗಳ ಕಾಲ ಲಾಕ್​ಡೌನ್​ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಸೋಂಕಿಗೆ ತುತ್ತಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ತಿಳಿಸಿದ್ದಾರೆ. ಏಪ್ರಿಲ್​ 29ರಿಂದ ಮೇ 3ರವರೆಗೆ ರಾಜ್ಯದಲ್ಲಿ ಲಾಕ್​ಡೌನ್​ ಇರಲಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಲಾಕ್​ಡೌನ್​ ವೇಳೆ ಅಗತ್ಯ ಸೇವೆ ಹಾಗೂ ಕೈಗಾರಿಕೆಗಳನ್ನು ಹೊರತುಪಡಿಸಿ ಸಾರ್ವಜನಿಕ ಸಾರಿಗೆಯನ್ನು ಕೂಡ ಬಂದ್​ ಮಾಡಲಾಗಿದೆ. ಇಂದು ಸಂಜೆಯಿಂದಲೇ ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಾಗಲಿದ್ದು, ಸೋಮವಾರ ಬೆಳಗಿನವರೆಗೆ ಇದು ಜಾರಿಯಲಿರಲಿದೆ

ಕೊರೋನಾ ಸೋಂಕಿನ ಸರಪಳಿ ಮುರಿಯಲು ಲಾಕ್​ಡೌನ್​ ಅನಿವಾರ್ಯವಾಗಿದೆ. ಮಂಗಳವಾರ ರಾಜ್ಯದಲ್ಲಿ 2, 110 ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು, 31 ಜನರು ಸಾವನ್ನಪ್ಪಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಕೋವಿಡ್​ನಿಂದಾಗಿ 81, 908 ಮಂದಿ ಸಾವನ್ನಪ್ಪಿದ್ದಾರೆ.

ಲಾಕ್​ಡೌನ್​ ವೇಳೆ ವೀಕ್ಲಿ ಮಾರ್ಕೆಟ್​ಗೆ ಯಾವುದೇ ಅವಕಾಶ ಇರುವುದಿಲ್ಲ ಕ್ಯಾಸಿನೋಗಳು ಮುಚ್ಚಲಿವೆ. ಕೈಗಾರಿಕೆಗಳು ಕಾರ್ಯನಿರ್ವಹಿಸಲಿದೆ. ಲಾಕ್​ಡೌನ್​ನಿಂದಾಗಿ ಸಾಮಾನ್ಯ ಕಾರ್ಮಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಸೋಂಕಿನ ಲಕ್ಷಣ ಕಾಣಿಸಿಕೊಂಡವರು ತಕ್ಷಣಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಸಿಎಂ ಪ್ರಮೋದ್​ ಸಾವಂತ್​ ಮನವಿ ಮಾಡಿದ್ದಾರೆ. ಅಲ್ಲದೇ, ಕೋವಿಡ್​ ಟ್ರಿಟ್​ಮೆಟ್​ ಪ್ರೋಟೋ ಕಾಲ್​ ಪ್ರಕಾರ, ವರದಿಯ ಫಲಿತಾಂಶಕ್ಕೆ ಕಾಯುವ ಬದಲು ಪರೀಕ್ಷೆಯ ಸಮಯದಲ್ಲಿ ಜನರಿಗೆ ಔಷಧಿ ನೀಡಲಾಗುವುದು ಎಂದಿದ್ದಾರೆ.

ಲಾಕ್​​ಡೌನ್​ ವೇಳೆಯಲ್ಲಿಯೂ ಲಸಿಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ. ಜನರು ಅಪಾಯಿಂಟ್​ಮೆಂಟ್​ ಮೂಲಕ ಲಸಿಕೆಗೆ ಬುಕ್​ ಮಾಡಿಕೊಳ್ಳಬಹುದಾಗಿದೆ.

Exit mobile version