ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಮನೆ ಮೇಲೆ ಲೋಕಾಯುಕ್ತ ದಾಳಿ : ಅಕ್ರಮ ನಗದು, ಆಸ್ತಿ ವಿದೇಶಿ ಕರೆನ್ಸಿ ಪತ್ತೆ

Bengaluru : ಕರ್ನಾಟಕದಲ್ಲಿ 2023 ವಿಧಾನಸಭಾ ಚುನಾವಣಾ ಕಾರ್ಯಗಳು ಭರದಿಂದ ಸಾಗುತ್ತಿವೆ. ಈ ನಡುವೆ ರಾಜ್ಯದ ವಿವಿಧೆಡೆ ಇಂದು ಲೋಕಾಯುಕ್ತ (Lokayutha) ಅಧಿಕಾರಿಗಳು ಸರ್ಕಾರಿ ನೌಕರರ ಮನೆ (Lokayukta attacked BBMP officer) ಮೇಲೆ ದಾಳಿ ಮಾಡಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪ ಹೊಂದಿರುವ ಸರ್ಕಾರಿ ಅಧಿಕಾರಿಗಳನ್ನು ಪತ್ತೆ ಹಚ್ಚಿ ಬೆಳ್ಳಂಬೆಳಗೆ ಅವರಿಗೆ ಶಾಕ್ (Shock) ನೀಡಿದ್ದಾರೆ. ದಾಳಿಯ ವೇಳೆ ಬೆಂಗಳೂರಿನ

ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಮನೆಯಲ್ಲಿ ಭಾರೀ ಪ್ರಮಾಣ ಆಸ್ತಿ ನಗದು, ಚಿನ್ನಾಭರಣಗಳು ಪತ್ತೆಯಾಗಿದೆ.


ಬಿಬಿಎಂಪಿಯ (BBMP) ನಗರ ಯೋಜನೆ ಸಹಾಯಕ ನಿರ್ದೇಶಕ ಅಧಿಕಾರಿಯಾದ ಗಂಗಾಧರಯ್ಯ (Gangadharaiah) ಅವರ ಮನೆ,

ಕಛೇರಿಗಳ ಮೇಲೆ ಇಂದು ಸೋಮವಾರ ಮುಂಜಾನೆಯೇ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

ಅಕ್ರಮವಾಗಿ ಸಂಗ್ರಹಿಸಿದ್ದಸುಮಾರು 1.5 ಕೋಟಿ ಹಣ, ಸುಮಾರು 2 ಕೋಟಿಗೂ ಅಧಿಕ ಬೆಲೆ ಬಾಳುವ ಚಿನ್ನಾಭರಣಗಳು ,ಬೆಳ್ಳಿಯ ವಸ್ತುಗಳು ಹಗೂ ವಿದೇಶಿ ಕರೆನ್ಸಿಗಳು ಪತ್ತೆಯಾಗಿದೆ.


ಮಾರುತಿ ನಗರ ಬಳಿಯ ಸತ್ಯನಾರಾಯಣ ಲೇಔಟ್‌ನಲ್ಲಿರುವ (Satyanarayan Layout) ಗಂಗಾಧರಯ್ಯ ಬೆಳಿಗ್ಗೆ ನಿವಾಸದ ಬಳಿ ಎಸ್‌.ಪಿ ಅಶೋಕ್‌ ನೇತೃತ್ವದಲ್ಲಿ ಬೆಳಿಗ್ಗೆ 5 ಗಂಟೆಗೇ

ಲೋಕಾಯುಕ್ತ ಅಧಿಕಾರಿಗಳು ಧಾಳಿ ಮಾಡಲು ಹೋದರೂ 30 ನಿಮಿಷ ಬಾಗಿಲು ತೆರೆಯದೆ ಸಿಬ್ಬಂದಿಯನ್ನು ಕಾಯಿಸಿದ್ದಾರೆ ನಂತರ ಬಾಗಿಲು ತೆರೆದಿದ್ದು

15 ಮಂದಿ ಲೋಕಾಯುಕ್ತ (Lokayutha) ತಂಡ ಶೋಧನೆ ನಡೆಸುತ್ತಿದ್ದು 9 ಗಂಟೆಯ ವೇಳೆಗೆ ಕೋಟ್ಯಾಂತರ ರೂ ಹಣ ಪತ್ತೆಯಾಗಿದೆ.

ಅಲ್ಲದೆ ಯಲಹಂಕದಲ್ಲಿ ಇರುವ ಕಛೇರಿ ಮತ್ತು ಕುರುಬರಹಳ್ಳಿ ನಿವಾಸದ ಮೇಲೆ ಕೂಡ ದಾಳಿ ಮಾಡಿದ್ದಾರೆ.


ಅಪಾರ ಪ್ರಮಾಣದ ಹಣ ಪತ್ತೆ:
ಗಂಗಾಧರಯ್ಯನ ಇತಿಹಾಸ: ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿಸಿಕ್ಕಿ ಬಿದ್ದಿರುವ ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಇತಿಹಾಸವೇ ರೋಚಕವಾಗಿದೆ.

ಇವರು ಬಿಬಿಎಂಪಿ ಸೇವೆಗೆ ಆಯ್ಕೆಯಾದ ಅಧಿಕಾರಿಯಲ್ಲ. ಮೂಲತಃ ಇವರು ಲೋಕೋಪಯೋಗಿ ಇಲಾಖೆ (PWD) ಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಆದರೆ, PWDಯಿಂದ ಓಓಡಿ ಮೇಲೆ ಬಿಬಿಎಂಪಿಗೆ ಬಂದಿದ್ದರು. ನಿಯಮಗಳ ಪ್ರಕಾರ ಬಿಬಿಎಂಪಿಯಲ್ಲಿ ಕೇವಲ 3 ವರ್ಷ ಅವಧಿಗೆ ಸೇವೆ ಸಲ್ಲಿಸಿ ಮಾತೃ ಇಲಾಖೆಗೆ ಅಂದರೆ PWDಗೆ ಹೋಗಬೇಕು.

ಆದರೆ ಇವರು ನಿಯಮಗಳನ್ನುಮುರಿದು ಕಳೆದ 12 ವರ್ಷಗಳಿಂದ ಬಿಬಿಎಂಪಿ ಟೌನ್ ಪ್ಲಾನಿಂಗ್ ನಲ್ಲೇ ಕೆಲಸ ಮಾಡಿಕೊಂಡು ಬಂದಿದ್ದಾರೆ


ತನ್ನ ಪ್ರಭಾವ ಬಳಸಿಕೊಂಡು ವರ್ಗಾವಣೆ ತಡೆಯುತ್ತಿದ್ದ ಗಂಗಾಧರಯ್ಯ:

ಬಿಬಿಎಂಪಿ ವಲಯಗಳಲ್ಲಿ ಯಲಹಂಕ (Yalahanka) ಅತ್ಯಂತ ಹೆಚ್ಚು ಆದಾಯವಿರುವ ವಲಯವಾಗಿದೆ. ಇವರನ್ನು ಬಿಬಿಎಂಪಿಯಿಂದ ಮಾತೃ ಇಲಾಖೆಗೆ ಕಳುಹಿಸಲು ಹಿರಿಯ ಅಧಿಕಾರಿಗಳು

ಅದೆಷ್ಟೇ ಪ್ರಯತ್ನ ಪಟ್ಟರೂ ಗಂಗಾಧರಯ್ಯನವರು (Gangadharaiah) ತನ್ನ ಪ್ರಭಾವವನ್ನು ಬಳಸಿಕೊಂಡು ಬಿಬಿಎಂಪಿ ಸೇವೆಯಲ್ಲಿಯೇ ಮುಂದುವರೆಯುತ್ತಿದ್ದರು.

ಏನೇ ಮಾಡಿದರೂ ತನ್ನ ಪ್ರಭಾವ ಬಳಸಿಕೊಂಡು ಮತ್ತೆ ಯಲಹಂಕ ವಲಯಕ್ಕೆ ವಾಪಸ್ ಬರುತ್ತಿದ್ದರು.

ಇವರು ಪ್ರತಿ ಬಾರಿಯೂ ಲಂಚ ಪಡೆಯುತ್ತಿರುವ ಆರೋಪಗಳಲ್ಲಿ ಸಿಕ್ಕಿ ಬೀಳುತ್ತಿದ್ದರು ,

ಹೀಗಾದಾಗಲೆಲ್ಲಾ ಇವರನ್ನು ಬೇರೆ ಕಡೆ ವರ್ಗಾವಣೆ ಮಾಡಿದರೆ, ಪುನಃ ಯಲಹಂಕ ವಲಯಕ್ಕೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು.

ಹೀಗೆ, ತನಗೆ ಹಿಡಿತವಿರುವ ವಲಯದಲ್ಲಿ ಭ್ರಷ್ಟಾಚಾರ ಎಸಗುತ್ತಿದ್ದರು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ (Lokayukta attacked BBMP officer) ಅವರ ಮನೆ ಮೇಲೆ ದಾಳಿ ಮಾಡಲಾಗಿದೆ.

ಪ್ರಸ್ತುತ ಅವರನ್ನು ಬ್ಯಾಟರಾಯನಪುರ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು.


ಅರ್ಜಿಗೆ ಲಂಚ ಕೊಟ್ಟರೆ ಮಾತ್ರ ಸಹಿ:

ಗಂಗಾಧರಯ್ಯ (Gangadharaiah) ಅವರು ಬಿಬಿಎಂಪಿಯ ನಗರ ಯೋಜನೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಸಾರ್ವಜನಿಕರು ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಲಂಚವನ್ನು ಪಡೆಯುತ್ತಿದ್ದರು ಎಂಬ ಆರೋಪಯೂ ಕೇಳಿಬಂದಿದೆ.

ಅಲ್ಲದೆ ಪ್ರತಿಯೊಂದು ಅರ್ಜಿಗೆ ಸಹಿ ಹಾಕಲು ಕೂಡ ಹಣ ಕೇಳುತ್ತಿದ್ದರು ಎಂಬ ಆರೋಪವಿದೆ .

ಒಂದು ವೇಳೆ ಹಣ ಕೊಡದಿದ್ದರೆ ಯಾವುದಾದರೂ ಒಂದು ತಕರಾರು ಇರುವುದನ್ನು ತೋರಿಸಿ ಕಡತಗಳಿಗೆ ವರ್ಷಾನುಗಟ್ಟಲೆ ಸಹಿ ಹಾಕುತ್ತಿರಲಿಲ್ಲ,

ಅಲ್ಲದೆ ಕೆಲವು ಮಧ್ಯವರ್ತಿಗಳನ್ನು ಲಂಚ ವಸೂಲಿಗೆ ಕೂಡ ಇಟ್ಟುಕೊಂಡಿದ್ದ ಎಂಬ ಆರೋಪವೂ ಕೇಳಿ ಬಂದಿದೆ.

Exit mobile version