ದೇಶದ ಜನತೆಗೆ ಸಿಹಿ ಸುದ್ದಿ ನೀಡಿದ ಇಂಡಿಯನ್ ಆಯಿಲ್ ಕಾರ್ಪೊರೇಷನ್: LPG ಸಿಲಿಂಡರ್‌ ಬೆಲೆ ಇಳಿಕೆ.

Bengaluru: ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ಜುಲೈ ಮೊದಲ ದಿನವೇ ಗುಡ್‌ನ್ಯೂಸ್‌ (Goodnews) ಸಿಕ್ಕಿದೆ, ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿಗಳು ಸತತ ನಾಲ್ಕನೇ ಬಾರಿಗೆ ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಸಿ ಬಡ ಜನರ ಮುಖದಲ್ಲಿ ನಗು ಅರಳಿಸಿದೆ.ದೇಶದ ಅತಿದೊಡ್ಡ ತೈಲ ಮಾರುಕಟ್ಟೆ ಕಂಪನಿಯಾಗಿರುವ ಇಂಡಿಯನ್ ಆಯಿಲ್‌ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ (Cylinder)ಗಳ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡಿದೆ.

LPG

ದೇಶದ ಮೆಟ್ರೋ ನಗರಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ (Commercial) ಬೆಲೆ ರೂ.31 ಇಳಿಕೆಯಾಗಿದೆ. ಹೊಸ ಬೆಲೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿ ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಸಿದ್ದರಿಂದ ಹೋಟೆಲ್​ ಉದ್ಯಮಿಗಳಿಗೆ ಅನುಕೂಲವಾಗಿದೆ. ಆದರೆ, ಸಬ್ಸಡಿ ರಹಿತ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್​​ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಇನ್ನು ಬೆಲೆ ಇಳಿಕೆ ನಂತರ ಕರ್ನಾಟಕ ಮತ್ತು ಬೆಂಗಳೂರಿ (Karnataka And Bengaluru)ನಲ್ಲಿ ವಾಣಿಜ್ಯ ಬಳಕೆಯ 19 ಕೆಜಿಯ ಸಿಲಿಂಡರ್​ ಬೆಲೆ 1813 ರೂಪಾಯಿ ಇದೆ. ದೆಹಲಿಯಲ್ಲಿ ಪ್ರತಿ ಸಿಲಿಂಡರ್​ ಬೆಲೆ 1,646 ರೂಪಾಯಿ ಇದೆ. ಮುಂಬೈ ಮತ್ತು ಚೆನ್ನೈನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್​ ಬೆಲೆ 1,598 ಮತ್ತು 1,809.5 ರೂ. ಗೆ ಇಳಿದಿದೆ. ಎರಡೂ ನಗರಗಳಲ್ಲಿ 31 ರೂ. ಇಳಿಕೆಯಾಗಿದೆ.ಇಂಡಿಯನ್​ ಆಯಿಲ್​ ಪ್ರಕಾರ 14.5 ಕೆಜಿಯ ಸಬ್ಸಿಡಿ ಅಡುಗೆ ಅನಿಲ ಬೆಲೆ ಕೋಲ್ಕತ್ತಾದಲ್ಲಿ 892 ರೂಪಾಯಿ ಇದೆ. ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್​ ಬೆಲೆ ಕ್ರಮವಾಗಿ 803 ರೂ,802.5 ರೂ,818.5 ರೂ. ಆಗಿದೆ.

Exit mobile version