ಖ್ಯಾತ ನಟಿ ಮಧುಬಾಲಾ ಅವರ ಸಹೋದರಿ ಕನೀಜ್ ಬೀದಿಪಾಲು!

bollywood

ದಕ್ಷಿಣ ಭಾರತದ ಖ್ಯಾತ ನಟಿ ಮಧುಬಾಲಾ ಅವರ ಸಹೋದರಿ ಕನೀಜ್ ಅವರು ಇಂದು ಬೀದಿ ಪಾಲಾಗಿದ್ದಾರೆ. ಕನೀಜ್ ಅವರ ಬಳಿ ಕೋವಿಡ್ ೧೯ರ ಆರ್.ಟಿ ಪಿ.ಸಿ.ಆರ್ ಟೆಸ್ಟ್ ಮಾಡಿಸಲು ಸಹ ಹಣ ಇರಲಿಲ್ಲ. ಈ ದುಸ್ಥಿತಿಗೆ ಸ್ವಂತ ಅಣ್ಣನ ಹೆಂಡತಿಯೇ ಕಾರಣ ಎಂದು ಮಗಳಾದ ಪರ್ವೀಸ್ ತಿಳಿಸಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿ ಮಧುಬಾಲ ಅನ್ನುವ ಹೆಸರು ಅಂದಿನ ಕಾಲಕ್ಕೆ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ಮಧುಬಾಲ ಅವರ ನಟನೆಗೆ ಫಿದಾ ಆಗದ ಚಿತ್ರರಸಿಕರೇ ಇಲ್ಲ. ಇಂದಿಗೂ ಕೂಡ ಅವರಿಗೆ ಅಪಾರ ಅಭಿಮಾನಿಗಳ ಬಳಗವೇ ಇದೆ. ದೊಡ್ಡ ದೊಡ್ಡ ನಟರ ಜೊತೆ ನಟಿಸಿದ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ. ಆದರೆ ಅವರ ಸಹೋದರಿಗೆ ಇಂದು ಒದಗಿರುವ ದುಸ್ಥಿತಿ ಯಾರಿಗೂ ಬರಬಾರದಾಗಿತ್ತು. ಜೀವನ ಅವರಿಗೆ ತನ್ನ ಕರಾಳ ಮುಖವನ್ನು ಇಂದು ಬೇಡವೆಂದರೂ ಪರಿಚಯಿಸಿದೆ.

ಖ್ಯಾತ ನಟಿಯಾದ ಮಧುಬಾಲ ಅವರ ಸಹೋದರಿ ಕನೀಜ್ ಬಲ್ಸರ ಅವರ ಬದುಕು ಬೀದಿಗೆ ಬಂದಿದ್ದು, ಕನೀಜ್ ಅವರಿಗೆ 96 ವರ್ಷ ವಯಸ್ಸಾಗಿದೆ. ಆದರೆ ಹಣವಿಲ್ಲದೆ, ಕುಟುಂಬದ ಸಹಾಯವಿಲ್ಲದೆ, ಆರ್ಥಿಕವಾಗಿ ಕುಗ್ಗಿ ಹೋಗಿದ್ದು, ನಡುರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ. ಅಷ್ಟಕ್ಕೂ ಅವರಿಗೆ ಒದಗಿದ ತೊಂದರೆಯಾದರು ಏನು? ಖ್ಯಾತ ನಟಿ ಮಧುಬಾಲ ಅವರ ಸಹೋದರಿಯಾಗಿದ್ದರು ಕೂಡ ಹಣವಿಲ್ಲದ ಕಾರಣ ಮುಂಬೈ ವಿಮಾನ ನಿಲ್ದಾಣದಲ್ಲಿ ಅಸಹಾಯಕರಾಗಿ ನಿಂತಿರುವ ದೃಶ್ಯ ಕಂಡುಬಂದಿದೆ. ಅವರಿಗೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಲು ಕೂಡ ಹಣವಿರಲಿಲ್ಲ ಎಂದು ಅವರ ಮಗಳು ತಿಳಿಸಿದ್ದಾರೆ.

ಈ ದುಸ್ಥಿತಿಗೆ ಅಣ್ಣನ ಹೆಂಡತಿಯೇ ಕಾರಣ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಹಲವು ವರ್ಷಗಳ ಹಿಂದೆ ಮಗನ ಜೊತೆ ನ್ಯೂಜಿಲ್ಯಾಂಡ್ ಗೆ ತೆರಳಿದ್ದರು. ಆದರೆ ಈಗ ನ್ಯೂಜಿಲೆಂಡಿನಿಂದ ಇಂತಹ ದುಸ್ಥಿತಿಯಲ್ಲಿ ವಾಪಸಾಗಿದ್ದಾರೆ. ಅದೂ ಅಲ್ಲದೆ ಇಂತಹ ವಯಸ್ಸಿನಲ್ಲಿ ಏಕಾಂಗಿಯಾಗಿ ವಿಮಾನ ಹತ್ತಿಸಿ ಭಾರತಕ್ಕೆ ಕಳುಹಿಸಿದ್ದಾರೆ. ಕನೀಜ್ ಅವರು ಜ.29 ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ಸುದ್ದಿಯನ್ನು ಅವರ ದೂರ ಸಂಬಂಧಿಯೊಬ್ಬರು ಅವರ ಮಗಳಾದ ಪರ್ವೀಸ್ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಖನೀಜ್ ಅವರು ಈ ದುಃಸ್ಥಿತಿಗೆ ಬರಲು ಕಾರಣ ಏನು ಅನ್ನುವುದನ್ನು ಮಗಳು ಪರ್ವೀಸ್ಗೆ ವಿವರಿಸಿದ್ದಾರೆ.

17-18 ವರ್ಷದ ಹಿಂದೆ ನನ್ನ ತಾಯಿ ಅವರು ತನ್ನ ಅಣ್ಣನಾದ ಫಾರೂಕ್ ಮತ್ತು ಸಮೀನಾ ದಂಪತಿಯೊಂದಿಗೆ ನ್ಯೂಜಿಲ್ಯಾಂಡ್ ಗೆ ತೆರಳಿದರು. ನನ್ನ ಸಹೋದರನ ಮೇಲಿನ ಪ್ರೀತಿಯಿಂದಾಗಿ ಅವರು ಅಲ್ಲಿಗೆ ತೆರಳಿದ್ದರು. ತನ್ನ ಸಹೋದರ ಒಳ್ಳೆಯ ವ್ಯಕ್ತಿಯೇ ಆದರೆ ಅವನ ಹೆಂಡತಿ ಸಮೀನಾ ನನ್ನ ತಂದೆ ತಾಯಿಯನ್ನು ಕಂಡರೆ ಇಷ್ಟಪಡುತ್ತಿರಲಿಲ್ಲ. ಅತ್ತೆ ಮಾವನಿಗೆ ಸಮೀನಾ ಸರಿಯಾಗಿ ಅಡುಗೆ ಕೂಡ ಮಾಡುತ್ತಿರಲಿಲ್ಲ. ಅಣ್ಣನಿಗೆ ಹೇಳಿ ಹತ್ತಿರದ ರೆಸ್ಟೋರೆಂಟ್ ನಿಂದ ಊಟ ತರಿಸುತ್ತಿದ್ದರು. ನನ್ನ ಅಣ್ಣ ತಿಂಗಳ ಹಿಂದೆ ಸಾವನ್ನಪ್ಪಿದರು. ಅವರ ಮರಣದ ನಂತರ ನನ್ನ ತಾಯಿಗೆ ಈ ಪರಿಸ್ಥಿತಿ ಬಂದಿದೆ ಎಂದು ಆರೋಪ ಮಾಡಿದ್ದಾರೆ.

ಸಮೀನಾ ನನ್ನ ತಾಯಿಯನ್ನು ಮುಂಬಯಿಗೆ ಕಳಿಸುವ ಮುನ್ನ ನನಗೆ ಯಾವುದೇ ಮಾಹಿತಿ ನೀಡಿಲ್ಲ. ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗುವ 8 ಗಂಟೆಯ ನಂತರ ನನ್ನ ದೂರದ ಸಂಬಂಧಿಯೊಬ್ಬರು ಇದರ ಬಗ್ಗೆ ಮಾಹಿತಿ ಕೊಟ್ಟರು. ತದನಂತರ ನಾನು ಏರ್ ಪೋರ್ಟಿಗೆ ತೆರಳಬೇಕಾಗಿತ್ತು. ಅಲ್ಲಿನ ಅಧಿಕಾರಿಗಳು ಅವರ ಹತ್ತಿರ ಆರ್ ಟಿಪಿಸಿಆರ್ ಮಾಡಿಸಲು ಕೂಡ ಹಣ ಇರಲಿಲ್ಲ ಎಂದು ತಿಳಿಸಿದರು ಎಂದು ಮಗಳು ಪರ್ವೀಸ್ ತನ್ನ ತಾಯಿಗೆ ಎದುರಾದ ಪರಿಸ್ಥಿತಿಯನ್ನು ದುಖಃದಿಂದ ಬಿಚ್ಚಿಟ್ಟಿದ್ದಾರೆ.

Exit mobile version