ಮಹಾರಾಷ್ಟ್ರ :ಜೂನ್ 1ರವರೆಗೆ ಲಾಕ್​ಡೌನ್ ವಿಸ್ತರಣೆ; ಆರ್​ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

ಮುಂಬೈ, ಮೇ. 13: ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಮಹಾರಾಷ್ಟ್ರದಲ್ಲಿ ಲಾಕ್​ಡೌನ್ ನ್ನು ಜೂನ್ 1ರವರಗೆ ವಿಸ್ತರಣೆ ಮಾಡಲಾಗಿದೆ. ರಾಜ್ಯದಲ್ಲಿ ಬ್ರೇಕ್ ದಿ ಚೈನ್ ಅಭಿಯಾನಕ್ಕೆ ಕರೆ ನೀಡಿ ಈ ಹಿಂದೆ ಘೋಷಿಸಿದ್ದ ಲಾಕ್​ಡೌನ್ ಮೇ 15ರಂದು ಮುಗಿಯಲಿತ್ತು. ಆದರೆ ಇದೀಗ ವಿಸ್ತರಣೆ ಆಗಿರುವ ಲಾಕ್​ಡೌನ್ ಜೂನ್ 1 ಬೆಳಗ್ಗೆ 7 ಗಂಟೆಗೆ ಮುಕ್ತಾಯವಾಗಲಿದೆ. ಯಾವುದೇ ಸಾರಿಗೆ ವಿಧಾನದ ಮೂಲಕ ರಾಜ್ಯಕ್ಕೆ ಪ್ರವೇಶಿಸಲು ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಎಂದು ಸರ್ಕಾರ ಹೇಳಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಹೊಸ ಕೊವಿಡ್ -19 ಸೋಂಕು ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲಿ ಬುಧವಾರ 30,000 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳ ಕುಸಿತ ಕಂಡು ಬಂದಿದೆ. ಮಹಾರಾಷ್ಟ್ರದ ಕೋವಿಡ್ -19 ಬೆಳವಣಿಗೆಯ ದರವು ದೇಶದ ದೈನಂದಿನ ಬೆಳವಣಿಗೆಯ ದರದಲ್ಲಿ ಕೇವಲ ಅರ್ಧದಷ್ಟಿದೆ. ದೇಶದ ದಿನನಿತ್ಯದ ಬೆಳವಣಿಗೆಯ ದರವು ಶೇಕಡಾ 1.4 ರಷ್ಟಿದ್ದರೆ, ರಾಜ್ಯದ ದೈನಂದಿನ ಬೆಳವಣಿಗೆಯ ದರವು ಶೇಕಡಾ 0.8 ರಷ್ಟಿದೆ. ರಾಜ್ಯವು ಪ್ರತಿದಿನ ಎರಡು ಲಕ್ಷ ಪರೀಕ್ಷೆಗಳನ್ನು ನಡೆಸುತ್ತಿದೆ ಇದು ನಮಗೆ ಉತ್ತಮ ಸಂಕೇತವಾಗಿದೆ ಎಂದು ಟೋಪೆ ಮಾತು ಉಲ್ಲೇಖಿಸಿ ಪಿಟಿಐ ವರದಿಮಾಡಿದೆ.

Exit mobile version