New Delhi: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ನೆರೆಯ ಮಾಲ್ಡೀವ್ಸ್ #Maldives ದೇಶದ ರಾಜಕೀಯ ನಾಯಕರ ನಡೆಗೆ ಭಾರತದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಮಾಲ್ಡೀವ್ಸ್ಗೆ ತಕ್ಕ ಪ್ರತ್ಯುತ್ತರ ನೀಡಲು, ಸಾಮಾಜಿಕ ಜಾಲತಾಣದಲ್ಲಿ ‘ಚಲೋ ಲಕ್ಷದ್ವೀಪ್’ʼ ಅಭಿಯಾನ ಆರಂಭವಾಗಿದ್ದು, ಇದಕ್ಕೆ ಬೆಂಬಲ ಸೂಚಿಸಿರುವ EaseMyTrip ಕಂಪನಿ, ಮಾಲ್ಡೀವ್ಸ್ನ ಎಲ್ಲಾ ವಿಮಾನಗಳ ಬುಕಿಂಗ್ ಅನ್ನು ರದ್ದುಗೊಳಿಸಿದೆ.
ಭಾರತದ ಬೆಂಬಲಕ್ಕೆ ನಿಂತಿರುವ, ಭಾರತೀಯ ಆನ್ಲೈನ್ ಟ್ರಾವೆಲ್ ಕಂಪನಿ EaseMyTripನ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ನಿಶಾಂತ್ ಪಿಟ್ಟಿ (Nishanth Pitti) ಅವರು, “ನಮ್ಮ ರಾಷ್ಟ್ರದೊಂದಿಗೆ ಒಗ್ಗಟ್ಟಿನಿಂದ ನಿಲ್ಲಲು, @EaseMyTrip ಎಲ್ಲಾ ಮಾಲ್ಡೀವ್ಸ್ನ ವಿಮಾನ ಬುಕಿಂಗ್ ಅನ್ನು ಅಮಾನತುಗೊಳಿಸಿದೆ ಎಂದು ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನೊಂದೆಡೆ EaseMyTrip ಕಂಪನಿ #ChaloLakshadweep ಅಭಿಯಾನಕ್ಕೆ ಬೆಂಬಲ ಸೂಚಿಸಿದೆ. “ಲಕ್ಷದ್ವೀಪ್ದ ನೀರು ಮತ್ತು ಬೀಚ್ಗಳು ಮಾಲ್ಡೀವ್ಸ್/ಸೆಶೆಲ್ಸ್ನಂತೆಯೇ ಉತ್ತಮವಾಗಿವೆ. @EaseMyTrip ನಲ್ಲಿ ನಾವು ನಮ್ಮ ಪ್ರಧಾನಿ @narendramodi ಅವರು ಇತ್ತೀಚೆಗೆ ಭೇಟಿ ನೀಡಿದ ಈ ಪ್ರಾಚೀನ ತಾಣವನ್ನು ಪ್ರಚಾರ ಮಾಡಲು ಅಸಾಮಾನ್ಯ ವಿಶೇಷ ಕೊಡುಗೆಗಳೊಂದಿಗೆ ಬರುತ್ತೇವೆ” ಎಂದು EaseMyTripನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ನಿಶಾಂತ್ ಪಿಟ್ಟಿ ತಿಳಿಸಿದ್ದಾರೆ.
ಈ ಮಧ್ಯೆ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಘರ್ಷದ ನಡುವೆ, #BoycottMaldives ಎಂಬ ಹ್ಯಾಶ್ಟ್ಯಾಗ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಪಡೆದುಕೊಂಡಿದೆ. ಅನೇಕ ಭಾರತೀಯ ಪ್ರವಾಸಿಗರು ದ್ವೀಪ ರಾಷ್ಟ್ರಕ್ಕೆ ತಮ್ಮ ನಿಗದಿತ ರಜಾದಿನಗಳನ್ನು ರದ್ದುಗೊಳಿಸಲು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.
ಮಾಲ್ಡೀವ್ಸ್ ಪ್ರತ್ಯುತ್ತರ ನೀಡಲು ಮುಂದಾಗಿರುವ ಅನೇಕ ಭಾರತೀಯ ಸೆಲೆಬ್ರಿಟಿಗಳು (Celebrities) ಮಾಲ್ಡೀವ್ಸ್ಗೆ ಹೋಗುವ ಬದಲು ದೇಶೀಯ ಪ್ರವಾಸಿ ತಾಣಗಳನ್ನು ಅನ್ವೇಷಿಸಲು ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಒತ್ತಾಯಿಸಿದ್ದಾರೆ. ನಟರಾದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ (Salman Khan, Akshay Kumar) ಮತ್ತು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ , ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್ (Venkatesh Prasad) ಮತ್ತು ವೀರೇಂದ್ರ ಸೆಹ್ವಾಗ್ ಅವರು “ಭಾರತೀಯ ದ್ವೀಪಗಳು ಮತ್ತು ಕರಾವಳಿ ಸ್ಥಳಗಳಿಗೆ ಭೇಟಿ ನೀಡುವಂತೆ ಜನರಿಗೆ ಮನವಿ ಮಾಡಿದ್ದಾರೆ.